Malaika Arora : ಬಾಲಿವುಡ್ ನ ಸುಂದರಿ ಮಲೈಕಾ ಅರೋರಾ (Malaika Arora) ತಮ್ಮ ಖಾಸಗಿ ಜೀವನದ ವಿಚಾರವಾಗಿ ಆಗಾಗ ಸುದ್ದಿಯಾಗುವುದು ಸಾಮಾನ್ಯ. ಈಗ ನಟಿ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. ನಟಿಯು ಅರ್ಜುನ್ ಕಪೂರ್ ಜೊತೆಗಿನ ತಮ್ಮ ಬ್ರೇಕಪ್ (Breakup) ವಿಚಾರಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಮಲೈಕಾ ಮತ್ತು ಅರ್ಜುನ್ ಕಪೂರ್ (Arjun Kapoor) ಬ್ರೇಕಪ್ ವಿಚಾರವಾಗಿ ಸಾಕಷ್ಟು ಟೀಕೆ, ಟ್ರೋಲ್‌ಗಳನ್ನು ಮಾಡಲಾಗುತ್ತಿದೆ. ಇದೇ ವಿಷಯವಾಗಿ ಮಲೈಕಾ ಟೀಕೆ, ಟ್ರೋಲ್ ಮಾಡೋರಿಗೆ ತಿರುಗೇಟನ್ನ ಕೊಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಬ್ರೇಕಪ್ ಬಗ್ಗೆ ಮೌನ ಮುರಿದಿದ್ದಾರೆ ಮಲೈಕಾ. ತನ್ನ ನಿರ್ಧಾರದ ಕುರಿತಾಗಿ ಯಾವುದೇ ವಿಷಾದವಿಲ್ಲ ಎಂದಿದ್ದಾರೆ ನಟಿ.
ಮಲೈಕಾ ಮಾತನಾಡುತ್ತಾ, ಇಂದು ಏನಾದರೂ ಕಲಿತಿದ್ದೀನಿ ಅನ್ನೋದಾದ್ರೆ ಅದಕ್ಕೆ ನಾನು ಜೀವನದ ಉದ್ದಕ್ಕೂ ನಾನು ಪಡೆದ ಅನುಭವಗಳೇ ಕಾರಣ ಎಂದಿದ್ದಾರೆ. ಇಂತಹ ಅನುಭವಗಳಿಂದಲೇ ನಾನು ಇಂದು ಒಂದೊಳ್ಳೆ ಜೀವನವನ್ನು ರೂಪಿಸಿಕೊಂಡಿರುವುದಾಗಿ ಹೇಳಿದ್ದಾರೆ. ನೋವಿನಿಂದ ಹೊರ ಬಂದಿದ್ದೇನೆ.
ನನಗೆ ಕರೀನಾ, ಕರೀಷ್ಮಾ ಮತ್ತು ತಂಗಿ ಅಮೃತಾ ಅರೋರಾ ಧೈರ್ಯ ನೀಡಿದ್ದಾರೆ. ಅವರಿಲ್ಲದೇ ನಾನಿಲ್ಲ ನಾನು ಜೀವನದಲ್ಲಿ ಇದುವರೆಗೂ ತೆಗೆದುಕೊಂಡಿರುವ ಯಾವುದೇ ನಿರ್ಧಾರದ ಬಗ್ಗೆಯೂ ನನಗೆ ಖಂಡಿತ ಇಲ್ಲಿಯವರೆಗೂ ಪಶ್ಚಾತ್ತಾಪ ಇಲ್ಲ ಎನ್ನುತ್ತಲೇ ಟೀಕೆ ಮಾಡುವವರಿಗೆ ತಿರುಗೇಟು ನೀಡಿದ್ದಾರೆ.
ಕಣ್ಣೀರಿನಲ್ಲಿ ಮುಳುಗಿದ Bigg Boss ಮನೆ, ರಂಜಿತ್ ಗಾಗಿ ಅತ್ತು ಸುರಿದು ಭಾವುಕರಾದ ಮನೆ ಮಂದಿ ಹೇಳಿದ್ದೇನು