Mahesh Babu ಜೊತೆ ಒಂದು ಸಿನಿಮಾ ಮಾಡಿ ಮತ್ತೆ ಈ ನಟಿ ತೆಲುಗಿನಲ್ಲಿ ಕಾಣಿಸಲೇ ಇಲ್ಲ; ಯಾರು ಆ ನಟಿ

Written by Soma Shekar

Published on:

---Join Our Channel---

Mahesh Babu : ಟಾಲಿವುಡ್ ನ (Tollywood) ಸ್ಟಾರ್ ನಟ ಮಹೇಶ್ ಬಾಬು (Mahesh Babu). ಸ್ಟಾರ್ ನಟನ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕರೆ ನಟಿಯರು ಇಲ್ಲ ಎನ್ನದೇ ಮಾಡುತ್ತಾರೆ. ಏಕೆಂದರೆ ಅನಂತರ ಸಾಕಷ್ಟು ಅವಕಾಶಗಳು ಹರಿದು ಬರುತ್ತದೆ ಎನ್ನುವುದು ನಿಜ. ಆದರೆ ಒಬ್ಬ ನಟಿ ಮಾತ್ರ ಮಹೇಶ್ ಬಾಬು ಜೊತೆ ನಟಿಸಿದ ನಂತರ ಮತ್ತೆ ತೆಲುಗಿನಲ್ಲಿ ನಟಿಸಲೇ ಇಲ್ಲ.

ಹೌದು, ಮಹೇಶ್ ಬಾಬು ನಾಯಕನಾಗಿದ್ದ ಅತಿಥಿ ಸಿನಿಮಾದಲ್ಲಿ ಬಾಲಿವುಡ್ ನಟಿ ಅಮೃತರಾವ್ (Amrutha Rao) ನಾಯಕಿಯಾಗಿದ್ದರು. ಈ ಸಿನಿಮಾದಲ್ಲಿ ಅವಕಾಶ ಸಿಕ್ಕಾಗ ನಟಿ ಅಮೃತರಾವ್ ಅವರು ಮಹೇಶ್ ಬಾಬು ಸಿನಿಮಾ ಅಂತ ಕೂಡಲೇ ಒಪ್ಪಿಗೆ ನೀಡಿದ್ದರು. ಚಿತ್ರ ತಂಡಕ್ಕೆ ಅಮೃತರಾವ್ ಅವರು ಇಷ್ಟವಾಗಲಿಲ್ಲ ಎನ್ನಲಾಗಿದೆ.

ಆದರೂ ಮಹೇಶ್ ಬಾಬು ಆಯ್ಕೆ ಆಗಿದ್ದರಿಂದ ಅಮೃತರಾವ್ ಅವರು ಸಿನಿಮಾಕ್ಕೆ ನಾಯಕಿಯಾಗಿದ್ದರು. ಆದರೆ ಈ ಸಿನಿಮಾ ತೆರೆಗೆ ಬಂದಾಗ ನಿರೀಕ್ಷಿತ ಗೆಲುವನ್ನು ಪಡೆಯಲು ವಿಫಲವಾಗಿ, ಸೋಲಿನ ಹಾದಿಯನ್ನು ಹಿಡಿದು ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡಿತ್ತು.

ಈ ಸಿನಿಮಾ ಆದ ಮೇಲೆ ಅಮೃತಾ ರಾವ್ ಅವರಿಗೆ ಟಾಲಿವುಡ್ ನಿಂದ ಯಾವುದೇ ಆಫರ್ ಸಿಗಲಿಲ್ಲ ಎನ್ನಲಾಗಿದೆ. ನಟಿ ಬಾಲಿವುಡ್ ನಲ್ಲಿ ಯಶಸ್ವಿ ಸಿನಿಮಾಗಳಲ್ಲಿ ನಟಿಸಿದರು. ಮದುವೆಯ ನಂತರ ಅಮೃತಾ ರಾವ್ ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ.

ಪ್ರಿಯಾಂಕ ಚೋಪ್ರಾ ಪತಿಗೆ ಪ್ರಾಣ ಭಯ; ಕಾರ್ಯಕ್ರಮದ ವೇದಿಕೆಯಿಂದಲೇ ಓಡಿ ಹೋದ Nick Jonas

Leave a Comment