Sai Pallavi ಬೇಡ ಎಂದು ರಿಜೆಕ್ಟ್ ಮಾಡಿದ ಈ ಸಿನಿಮಾಗಳು ದೊಡ್ಡ ಯಶಸ್ಸನ್ನು ಪಡೆದುಕೊಂಡು ಮಿಂಚಿದ್ದವು

Written by Soma Shekar

Published on:

---Join Our Channel---

Sai Pallavi: ದಕ್ಷಿಣ ಸಿನಿಮಾರಂಗದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿರುವ ನಟಿ ಸಾಯಿ ಪಲ್ಲವಿ (Sai Pallavi) ಸಿನಿಮಾಗಳ ಆಯ್ಕೆಯಲ್ಲಿ ಸಾಕಷ್ಟು ಗಮನವನ್ನು ನೀಡುತ್ತಾರೆ. ಸ್ಟಾರ್ ಗಳ ಜೊತೆ ಯಶಸ್ವಿ ಸಿನಿಮಾಗಳಲ್ಲಿ ನಟಿಸಿರುವ ಈ ನಟಿ ಈ ಹಿಂದೆ ರಿಜೆಕ್ಟ್ ಮಾಡಿದಂತಹ ಸಿನಿಮಾಗಳು ಬಹಳ ದೊಡ್ಡ ಮಟ್ಟದ ಗೆಲುವನ್ನ ಪಡೆದುಕೊಂಡಿದ್ದವು. ಆ ಸಿನಿಮಾಗಳು ಯಾವುವು ತಿಳಿಯೋಣ ಬನ್ನಿ.

ವಿಜಯ ದೇವರಕೊಂಡ (Vijay Devarakonda) ಜೊತೆಗೆ ಡಿಯರ್ ಕಾಮ್ರೆಡ್ ಸಿನಿಮಾ ಸಾಯಿ ಪಲ್ಲವಿಗೆ ಆಫರ್ ಆಗಿತ್ತು. ಆದರೆ ಸಿನಿಮಾದಲ್ಲಿನ ಕೆಲವು ದೃಶ್ಯಗಳು ತನ್ನಿಂದ ಸಾಧ್ಯವಿಲ್ಲ ಎಂದು ಈ ಸಿನಿಮಾ ರಿಜೆಕ್ಟ್ ಮಾಡಿದರು. ನಂತರ ಇದರಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡರು.

ದಳಪತಿ ವಿಜಯ್ (Thalapathy Vijay)0 ಜೊತೆಗೆ ವಾರಿಸು ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ನಟಿ ಕೆಲವು ಕಾರಣಗಳಿಂದ ರಿಜೆಕ್ಟ್ ಮಾಡಿದರು. ನಂತರ ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಸಿನಿಮಾ ತೆಲುಗು ಮತ್ತು ತಮಿಳಿನಲ್ಲಿ ಯಶಸ್ಸನ್ನ ಪಡೆಯಿತು.

ಮೆಗಾಸ್ಟಾರ್ ಚಿರಂಜೀವಿ ಅವರು ನಾಯಕನಾಗಿದ್ದ ಬೋಳಾ ಶಂಕರ್ ಸಿನಿಮಾದಲ್ಲೂ ತಂಗಿಯ ಪಾತ್ರಕ್ಕೆ ಬಂದ ಅವಕಾಶವನ್ನು ಸಾಯಿ ಪಲ್ಲವಿ ರಿಜೆಕ್ಟ್ ಮಾಡಿದರು. ನಂತರ ಈ ಪಾತ್ರವನ್ನು ಕೀರ್ತಿ ಸುರೇಶ್ ಒಪ್ಪಿಕೊಂಡು ನಟಿಸಿದರು.

ಮಣಿರತ್ನಂ ನಿರ್ದೇಶನದ ಕಾರ್ತಿ ಮತ್ತು ಅಧಿತಿ ರಾವ್ ಜೋಡಿಯಾಗಿ ಕಾಣಿಸಿಕೊಂಡ ಕಾಟ್ರು ವೆಳಿಯಿಡೈ ಸಿನಿಮಾದಲ್ಲಿ ಸಾಯಿ ಪಲ್ಲವಿಗೆ ನಾಯಕಿಯ ಆಫರ್ ಬಂದಿತ್ತು. ಆದರೆ ಸಾಯಿ ಪಲ್ಲವಿ ಈ ಪಾತ್ರವನ್ನು ಮಾಡುವುದಕ್ಕೆ ಒಪ್ಪಿಕೊಂಡಿರಲಿಲ್ಲ.

ದಳಪತಿ ವಿಜಯ್ ಜೊತೆ ಲಿಯೋ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಸಹಾ ನಟಿ ರಿಜೆಕ್ಟ್ ಮಾಡಿದರು. ಅದಾದ ಮೇಲೆ ಬಹಳ ವರ್ಷಗಳ ನಂತರ ತ್ರಿಶಾ ಮತ್ತೊಮ್ಮೆ ವಿಜಯ್ ಜೊತೆ ಜೋಡಿಯಾಗಿ ಕಾಣಿಸಿಕೊಂಡು ಫ್ಯಾನ್ಸ್ ಗೆ ಖುಷಿಯನ್ನು ನೀಡಿದರು.

Puttakkana Makkalu ಸ್ನೇಹ ಕಥೆ ಮುಗಿಯಲಿದೆ ? ಹೊಸ ಹುಡುಗಿಯೇ ಕಂಠಿ ಮತ್ತು ಪುಟ್ಟಕ್ಕನ ಪಾಲಿಗೆ ಸ್ನೇಹ ಆಗ್ತಾಳೆ

Leave a Comment