Vidya Balan : ಸಿನಿಮಾ ರಂಗದಲ್ಲಿ ನಮಗೆ ಕಾಸ್ಟಿಂಗ್ ಕೌಚ್ ನ ಕರಾಳ ಅನುಭವ ಆಗಿದೆ ಎಂದು ಆಗಾಗ ಕೆಲವು ನಟಿಯರು ಹೇಳುವುದು ಸುದ್ದಿಯಾಗುತ್ತಲೇ ಇರುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸ್ಟಾರ್ ನಟಿಯರೂ ಸಹಾ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಅಂತಹ ಅನುಭವ ಆದರೂ ತಾವು ಹೇಗೆ ಅದನ್ನು ಎದುರಿಸಿದೆವು ಎನ್ನುವುದನ್ನು ಸಹಾ ಹೇಳಿಕೊಂಡಿದ್ದರು.
ಈಗ ಇದೇ ವಿಚಾರವಾಗಿ ಬಾಲಿವುಡ್ ನಟಿ ವಿದ್ಯಾ ಬಾಲನ್ (Vidya Balan) ಕಾಸ್ಟಿಂಗ್ ಕೌಚ್ ಬಗ್ಗೆ ಹೇಳುವ ನಟಿಯರಿಗೆ ತಿರುಗೇಟನ್ನು ನೀಡುವಂತಹ ಮಾತೊಂದನ್ನು ಹೇಳಿದ್ದಾರೆ. ಅನುಮಪ್ ಖೇರ್ (The Anupam Kher Show) ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ವಿದ್ಯಾ ಬಾಲನ್ ಆಡಿದ ಮಾತುಗಳು ಈಗ ವೈರಲ್ ಆಗಿ ಚರ್ಚೆ ಹುಟ್ಟು ಹಾಕಿದೆ.
ಅನುಪಮ್ ಖೇರ್ ಅವರು ತಮ್ಮ ಇಷ್ಟು ದಶಕಗಳ ಸಿನಿಮಾ ಜೀವನದಲ್ಲಿ ಕಾಸ್ಟಿಂಗ್ ಕೌಚ್ ಎನ್ನುವ ವಿಷಯವನ್ನೇ ಕೇಳಿರಲಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಉತ್ತರವಾಗಿ ವಿದ್ಯಾ ಬಾಲನ್ ಅವರು ಇದನ್ನ ನಿಜ ಎಂದು ಹೇಳಿದ್ದಾರೆ. ಅಲ್ಲದೇ ಕಾಸ್ಟಿಂಗ್ ಕೌಚ್ ಅನ್ನು ನಿಜ ಎಂದು ಹೇಳುವ ಮೂಲಕ ಅಂತಹ ಆರೋಪ ಮಾಡುವ ನಟಿಯರಿಗೆ ಟಾಂಗ್ ನೀಡಿದ್ದಾರೆ.
ಜನರು ಹೇಗೆ ನಮ್ಮನ್ನು ಟ್ರೀಟ್ ಮಾಡಬೇಕು ಅನ್ನೋ ರೀತಿಯಲ್ಲೇ ಅವರು ಹಾಗೆ ವರ್ತಿಸ್ತಾರೆ, ನೀವು ಸರಿಯಿದ್ದಾಗ ಯಾರೂ ನಿಮ್ಮನ್ನು ಆ ರೀತಿ ಬಳಸಿಕೊಳ್ಳುವುದಿಲ್ಲ ಎಂದಿರುವ ನಟಿ ತನ್ನ ವೃತ್ತಿ ಜೀವನದಲ್ಲಿ ಯಾರೊಬ್ಬರೂ ಸಹಾ ಅತಿಯಾಗಿ ತಗೊಂಡು ನನ್ನ ಒಂದು ಕಾಫಿ ಕುಡಿಯೋಕೆ ಸಹಾ ಕರೆದಿರಲಿಲ್ಲ ಎಂದಿದ್ದಾರೆ.
Bigg Boss Kannada 11 ಜಗದೀಶ್ ಚೈತ್ರ ನಡುವೆ ಕಾಳಗ, ಅಪ್ಪಂಗೆ ಹುಟ್ಟಿದ್ರೆ ಮಾತಾಡ್ಲಿ ಅಂತ ಸವಾಲು ಹಾಕಿದ ಚೈತ್ರ