Kichcha Sudeep: ನಟ ಕಿಚ್ಚ ಸುದೀಪ್ (Kichcha Sudeep) ಅವರು ಸೋಶಿಯಲ್ ಮೀಡಿಯಾ ಮೂಲಕ ತಾನು ಬಿಗ್ ಬಾಸ್ ನ (Bigg Boss) ಮುಂದಿನ ಸೀಸನ್ ನಿರೂಪಣೆ ಮಾಡೋದಿಲ್ಲ ಎಂದು ಘೋಷಣೆ ಮಾಡಿದ ನಂತರ ಈ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಅಲ್ಲದೇ ಕಲರ್ಸ್ ಕನ್ನಡದ ಬಿಗ್ ಬಾಸ್ ಶೋ ಮತ್ತು ಸುದೀಪ್ ಅವರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನುವ ಸುದ್ದಿಗಳು ಸಹಾ ಹರಿದಾಡಿದೆ.
ಹರಡಿರುವ ಸುದ್ದಿಗಳಿಗೆ ಕಿಚ್ಚ ಟ್ವೀಟ್ ಮೂಲಕ ಸ್ಪಷ್ಟನೆಯನ್ನು ನೀಡಲು ಮುಂದಾಗಿದ್ದಾರೆ. ನನ್ನ ಟ್ವೀಟ್ ಬಗ್ಗೆ ಬರುತ್ತಿರುವ ಎಲ್ಲಾ ಪ್ರೀತಿ ಮತ್ತು ಬೆಂಬಲಕ್ಕೆ ಅಭಿನಂದನೆಗಳು ಎನ್ನುತ್ತಾ ವಾಹಿನಿ ಮತ್ತು ತನ್ನ ನಡುವೆ ಭಿನ್ನಾಭಿಪ್ರಾಯ ಎಂದು ಹರಡಿರುವ ಸುದ್ದಿಗಳು ನಿಜವಲ್ಲ ಎಂದು ನಟ ಸ್ಪಷ್ಟ ನೆಯನ್ನು ಸಹಾ ನೀಡಿದ್ದಾರೆ.
ಸುದೀಪ್ ಅವರು, ನಮ್ಮದು ತುಂಬಾ ಪಾಸಿಟಿವ್ ಆಗಿರುವ ಸುದೀರ್ಘ ಪಯಣ. ಅದರೊಂದಿಗೆ ಅಗೌರವ ಎನ್ನುವ ಒಂದು ಶಬ್ದ ಜೋಡಣೆಯಾಗಿಲ್ಲ ಎಂದಿದ್ದು, ಈ ಸಂಬಂಧದ ಬಗ್ಗೆ ಯಾವುದೇ ರೀತಿಯ ಊಹೆ ಮಾಡುವುದು ಸರಿಯಲ್ಲ ಎಂದಿದ್ದಾರೆ. ನನ್ನ ಟ್ವೀಟ್ ತುಂಬಾ ನೇರ ಹಾಗೂ ಪ್ರಾಮಾಣಿಕ.
ಕಲರ್ಸ್ ಜೊತೆ ನನ್ನ ಸಂಬಂಧ ಅದ್ಭುತವಾಗಿದೆ. ಅವರು ಯಾವಾಗಲೂ ನನ್ನನ್ನು ತುಂಬಾ ಗೌರವಯುತವಾಗಿ ನಡೆಸಿಕೊಂಡಿದ್ದಾರೆ. ಡೈರೆಕ್ಟರ್ ಪ್ರಕಾಶ್ ಅವರು ತುಂಬಾ ಟ್ಯಾಲೆಂಟೆಡ್. ಅವರು ತುಂಬಾ ಎನರ್ಜೆಟಿಕ್. ಅವರ ಬಗ್ಗೆ ನನಗೆ ಆಳವಾದ ಗೌರವ ಇದೆ ಎಂದು ಹೇಳಿದ್ದಾರೆ ಕಿಚ್ಚ.
ನಾನು ಜೊತೆಯಾಗಿ ಕೆಲಸ ಮಾಡುವ ತಂಡದ ಮೇಲೆ ಅನಗತ್ಯ ಆರೋಪಗಳು ಬರುವಾಗ ಹಿಂದೆ ಕುಳಿತು ಎಂಜಾಯ್ ಮಾಡುವ ವ್ಯಕ್ತಿ ನಾನಲ್ಲ. ಚಿಯರ್ಸ್ & ಲವ್ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಬಿಗ್ ಬಾಸ್ ತಂಡವು ಸುದೀಪ್ ಅವರ ಜೊತೆಗೆ ಅನುಚಿತವಾಗಿ ವರ್ಣಿಸಿದ್ದಾರೆ ಎಂದು ಹೇಳಿದವರ ಮಾತು ನಿಜವಲ್ಲ ಎಂದಿದ್ದಾರೆ ಸುದೀಪ್.
ಕ್ಯಾಪ್ಟನ್ ಮಾತಿಗೆ ನೊಂದು Bigg Boss ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರು ಹಾಕಿದ ಧನರಾಜ್ ಆಚಾರ್