Salman Khan ಬಿಗ್ ಬಾಸ್ ಶೂಟಿಂಗ್ ನಿಲ್ಲಿಸಿ ಆಸ್ಪತ್ರೆಗೆ ಓಡಿದ ಬಾಲಿವುಡ್ ನಟ ಸಲ್ಮಾನ್ ಖಾನ್; ಅಂತದ್ದೇನಾಯ್ತು

Written by Soma Shekar

Published on:

---Join Our Channel---

Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರು ಬಿಗ್ ಬಾಸ್ 18 ರ (Bigg Boss 18) ಚಿತ್ರೀಕರಣವನ್ನು ಸ್ಥಗಿತಗೊಳಿಸಿದ ಘಟನೆ ನಡೆದಿದೆ. ಹೌದು, ಎನ್‌ ಸಿ ಪಿ ನಾಯಕ ಬಾಬಾ ಸಿದ್ದಿಕಿ ಸಾವಿನ ಸುದ್ದಿಯನ್ನು ಕೇಳಿದ ಕೂಡಲೇ ಸಲ್ಮಾನ್ ಖಾನ್ ಅವರು ಶೂಟಿಂಗ್ ಸ್ಥಗಿತಗೊಳಿಸಿದ್ದಾರೆ. ಬಿಗ್ ಬಾಸ್ ನ ವೀಕೆಂಡ್ ಎಪಿಸೋಡ್ ಗಳ ಶೂಟಿಂಗ್‌ ನಲ್ಲಿ ಬ್ಯುಸಿಯಾಗಿದ್ದ ನಟ ಆತುರಿಂದ ಮುಂಬೈನ ಲೀಲಾವತಿ ಆಸ್ಪತ್ರೆಗೆ ಧಾವಿಸಿದ್ದಾರೆ.

ಮುಂಬೈನ ಬಾಂದ್ರಾ ಪೂರ್ವದಲ್ಲಿರುವ ಶಾಸಕನ ಪುತ್ರ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರ ಭಾಗದಲ್ಲಿ ನಿನ್ನೆ ಅಂದರೆ ಶನಿವಾರ (ಅ.12) ರಾತ್ರಿ ವೇಳೆಯಲ್ಲಿ 66 ವರ್ಷದ ಬಾಬಾ ಸಿದ್ದಿಕಿ (Baba Siddique) ಮೇಲೆ ದಾಳಿಯನ್ನು ನಡೆಸಲಾಗಿದ್ದು, ಗಾಯಗೊಂಡಿದ್ದ ಸಿದ್ಧಿಕಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಕೂಡಾ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ಬಾಬಾ ಸಿದ್ದಿಕಿ ಜೊತೆಗೆ ನಟ ಸಲ್ಮಾನ್ ಖಾನ್ ಜೊತೆಗೆ ಆತ್ಮೀಯ ಮತ್ತು ನಿಕಟ ಸಂಬಂಧವನ್ನು ಹೊಂದಿದ್ದರು. ಅದೇ ಕಾರಣದಿಂದ ನಟ ಸಲ್ಮಾನ್ ಮಧ್ಯರಾತ್ರಿ 12:30 ರ ವೇಳೆಗೆ ಮುಂಬೈನ ಲೀಲಾವತಿ ಆಸ್ಪತ್ರೆಗೆ ಧಾವಿಸಿದ್ದರು. ಬಾಲಿವುಡ್‌ ನಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳನ್ನು ಇಫ್ತಾರ್ ಪಾರ್ಟಿಯಲ್ಲಿ ಒಂದು ಕಡೆ ಸೇರಿಸುತ್ತಿದ್ದರು ಸಿದ್ದಿಕಿ.

ಹತ್ಯೆಗೆ ಗುರಿಯಾಗಿರುವ ಬಾಬಾ ಸಿದ್ದಿಕಿ ಅವರು ಬಾಂದ್ರಾ (ಪಶ್ಚಿಮ) ವಿಧಾನಸಭಾ ಕ್ಷೇತ್ರದಿಂದ ಒಂದಲ್ಲಾ ಎರಡಲ್ಲಾ ಮೂರು ಬಾರಿ ಶಾಸಕಾರಾಗಿ ಆಯ್ಕೆಯಾಗಿದ್ದರು. ಇವರು ಮುಂಬೈನ ಪ್ರಮುಖ ವ್ಯಕ್ತಿಯಾಗಿದ್ದು, 2004ರಿಂದ 2008ರವರೆಗೆ ವಿಲಾಸ್‌ ರಾವ್‌ ದೇಶ್‌ ಮುಖ್‌ ಸರ್ಕಾರದಲ್ಲಿ ಸಚಿವರು ಸಹಾ ಆಗಿದ್ದರು. ಬಾಲಿವುಡ್ ಜೊತೆಗೆ ನಿಕಟವರ್ತಿಯಾಗಿದ್ದರು.

Alia Bhatt ಮಗಳಿಗಾಗಿ ಮರೆಯಲಾಗದ ಗಿಫ್ಟ್ ಕೊಟ್ಟ ರಾಮ್ ಚರಣ್; ಆಲಿಯಾ ರಿವೀಲ್ ಮಾಡಿದ ಅಚ್ಚರಿಯ ವಿಷಯ

Leave a Comment