Rajamouli : ತೆಲುಗಿನ ಟಾಪ್ ಹೀರೋಗಳ ಹೆಸರು ಬಹಿರಂಗ ಮಾಡಿದ ರಾಜಮೌಳಿ: ಇಷ್ಟಕ್ಕೂ ಯಾರು ಆ ನಟರು

Written by Soma Shekar

Published on:

---Join Our Channel---

Rajamouli : ತೆಲುಗು ಸಿನಿಮಾ ರಂಗದ ದಿಗ್ಗಜ ನಿರ್ದೇಶಕ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಪಡೆದಿರುವ ರಾಜಮೌಳಿ (Rajamouli) ಸಿನಿಮಾದಲ್ಲಿ ನಟಿಸುವ ಅವಕಾಶಕ್ಕಾಗಿ ಸ್ಟಾರ್ ನಟರೂ ಸಹಾ ನಿರೀಕ್ಷೆ ಮಾಡುತ್ತಾರೆನ್ನುವುದು ಸತ್ಯ. ಈ ನಟನ ನಿರ್ದೇಶನದಲ್ಲಿ ಜೂ. ಎನ್ ಟಿಆರ್, ರವಿತೇಜ, ನಾನಿ, ನಿತಿನ್, ರಾಮ್ ಚರಣ್ ನಂತಹ ಸ್ಟಾರ್ ಗಳು ನಟಿಸಿದ್ದಾರೆ. ಈಗ ಮಹೇಶ್ ಬಾಬು ಅವರು ರಾಜಮೌಳಿ ಅವರ ಹೊಸ ಸಿನಿಮಾದ ನಾಯಕ ಆಗಿದ್ದಾರೆ.‌

ಸಂದರ್ಶನವೊಂದರಲ್ಲಿ ರಾಜಮೌಳಿ ಅವರನ್ನು ತೆಲುಗು ಸಿನಿಮಾ ರಂಗದಲ್ಲಿ ನಂಬರ್ ಒನ್ ನಟ ಯಾರು? ಎನ್ನುವ ಪ್ರಶ್ನೆ ಕೇಳಿದಾಗ ನಟ ಅದಕ್ಕೆ ಉತ್ತರವನ್ನು ನೀಡಿದ್ದಾರೆ. ಪ್ರಸ್ತುತ ಟಾಲಿವುಡ್ ನಾಯಕರಿಗೆ ಶ್ರೇಯಾಂಕ ಅನ್ನೋದಿಲ್ಲ. ನನಗೆ ತಿಳಿದಿರುವ ಹಾಗೆ ಟಾಲಿವುಡ್ ನಲ್ಲಿ ನಂಬರ್ 1 ಎಂದರೆ ಅದು ಹಿರಿಯ ಎನ್ ಟಿ ಆರ್ (Senior NTR) ಅವರು ಎಂದಿದ್ದಾರೆ.

ಇನ್ನು ನಂಬರ್ 2 ಸ್ಥಾನಕ್ಕೆ ಬಂದರೆ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಎಂದಿರುವ ರಾಜಮೌಳಿ ಅವರು ಈಗ ಅವರ ಪೀಳಿಗೆ ಮುಗಿದಿದೆ. ಶ್ರೇಯಾಂಕ ಅನ್ನೋದು ಅವರೊಂದಿಗೆ ಮುಗಿದು ಹೋಗಿದೆ. ಇಂದಿನ ಟಾಲಿವುಡ್ ನಾಯಕರಿಗೆ ಶ್ರೇಯಾಂಕವನ್ನು ನೀಡುವುದು ಸಾಧ್ಯವಿಲ್ಲ ಎನ್ನುವ ಮಾತನ್ನ ಹೇಳಿದ್ದಾರೆ.‌

ಈಗ ಶ್ರೇಯಾಂಕ ಅಥವಾ ಸ್ಥಾನದ ಕುರಿತಾಗಿ ಚರ್ಚೆಯೇ ನಡೆಯುತ್ತಿಲ್ಲ. ಏಕೆಂದರೆ ಇಂದಿನ ನಾಯಕ ನಟರು ವಿಭಿನ್ನವಾಗಿದ್ದಾರೆ ಎನ್ನುವ ಮಾತನ್ನು ಸಹಾ ಅವರು ಹೇಳಿದ್ದಾರೆ. ರಾಜಮೌಳಿ ಪ್ರಕಾರ ಪ್ರಸ್ತುತ ನಂಬರ್ ಒನ್, ನಂಬರ್ ಟು ಎನ್ನುವ ಸ್ಥಾನಗಳು ಟಾಲಿವುಡ್ ನಲ್ಲಿ ಇಲ್ಲ ಎನ್ನುವುದು ಅವರ ಮಾತಾಗಿದೆ.

Leave a Comment