Tripti Dimri ಆ ನೋವು ತಡೆಯಲಾಗದೆ ಮೂರು ದಿನ ಕಣ್ಣೀರು ಹಾಕಿದ್ದೆ, ಅನಿಮಲ್ ನಟಿಯ ಶಾಕಿಂಗ್ ಹೇಳಿಕೆ

Written by Soma Shekar

Published on:

---Join Our Channel---

Tripti Dimri: ಬಾಲಿವುಡ್ ನಟಿ ತ್ರಿಪ್ತಿ ಡಿಮ್ರಿ (Tripti Dimri) ಅನಿಮಲ್ ಸಿನಿಮಾದಲ್ಲಿನ (Animal Movie) ತಮ್ಮ‌ ಹಾಟ್ ಮತ್ತು ಬೋಲ್ಡ್ ಲುಕ್ ನಿಂದಲೇ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಪಡೆದುಕೊಂಡರು. ನಟಿ ಅನಿಮಲ್ ಗಿಂತ ಮೊದಲು ನಟಿಸಿದ್ದರೂ ಸಹಾ ಜನಪ್ರಿಯತೆ ಪಡೆದಿದ್ದು ಅನಿಮಲ್ ನಿಂದ. ಪ್ರಸ್ತುತ ನಟಿ ತಮ್ಮ ಮುಂಬರುವ ಸಿನಿಮಾ ವಿಕ್ಕಿ ವಿದ್ಯಾ ಕಾ ಓ ಬಾಕಾ ವೀಡಿಯೋ ದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ.

ಸಿನಿಮಾ ಪ್ರಚಾರದ ವೇಳೆ ಮಾತನಾಡುತ್ತಾ, ಅನಿಮಲ್ ಸಿನಿಮಾ ಬಂದ ಮೇಲೆ ಜೋಯಾ ಪಾತ್ರಕ್ಕೆ ಜನ ಹಿಡಿ ಶಾಪ ಹಾಕಿದರು. ನೆಟ್ಟಿಗರು ನನ್ನನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದರು. ಅಸಭ್ಯ ಟ್ರೋಲ್ ಗಳಿಂದ ನೊಂದು ಕೊಂಡೆ ಅದನ್ನು ಹೇಗೆ ನಿಭಾಯಿಸೋದು ಅನ್ನೋದೇ ನನಗೆ ತಿಳಿಯಲಿಲ್ಲ.

ಮೂರು ದಿನಗಳ ಕಾಲ ಕಣ್ಣೀರು ಹಾಕಿದೆ. ಆಗ ನನ್ನ ತಂಗಿ ನನ್ನ ಬೆಂಬಲಕ್ಕೆ ನಿಂತಳು. ನೀನು ಏನು ಮಾಡಿದ್ದೀಯಾ ಅನ್ನೋದು ನಿನಗೆ ಗೊತ್ತಿರುವಾಗ ಬೇರೆ ಅವರ ಮಾತುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಎಂದು ಧೈರ್ಯವನ್ನು ನೀಡಿದಳು. ಅತ್ತೂ ಅತ್ತೂ ನನ್ನ ಮನಸ್ಸು ಸಹಾ ಹಗುರವಾಗಿತ್ತು ಎಂದಿದ್ದಾರೆ ನಟಿ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಸಿನಿಮಾದಲ್ಲಿ ಜೋಯಾ ಪಾತ್ರದಲ್ಲಿ ತ್ರಿಪ್ತಿ ಡಿಮ್ರಿ ನಟಿಸಿದ್ದರು. ಇದರಲ್ಲಿ ನಾಯಕನ ಜೊತೆಗೆ ಕೆಲವೊಂದು ಹಸಿ ಬಿಸಿ ದೃಶ್ಯಗಳಲ್ಲಿ ನಟಿಯನ್ನು ತೋರಿಸಲಾಗಿತ್ತು. ಈ ದೃಶ್ಯಗಳಿಂದಾಗಿಯೇ ನಟಿಯನ್ನು ಟ್ರೋಲ್ ಮಾಡಲಾಗಿತ್ತು. ನಟಿಯ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಲಾಗಿತ್ತು.

Pawan Kalyan ಆ ನಟಿಗೆ ಲಕ್ಷಗಳ ಬೆಲೆಯ ವಜ್ರದ ನೆಕ್ಲೆಸ್ ಗಿಫ್ಟ್; ಪವನ್ ಕಲ್ಯಾಣ್ ರಿಂದ ಗಿಫ್ಟ್ ಪಡೆದ ನಟಿ ಯಾರು

Leave a Comment