Pawan Kalyan ಆ ನಟಿಗೆ ಲಕ್ಷಗಳ ಬೆಲೆಯ ವಜ್ರದ ನೆಕ್ಲೆಸ್ ಗಿಫ್ಟ್; ಪವನ್ ಕಲ್ಯಾಣ್ ರಿಂದ ಗಿಫ್ಟ್ ಪಡೆದ ನಟಿ ಯಾರು

Written by Soma Shekar

Published on:

---Join Our Channel---

Pawan Kalyan: ಪವನ್ ಕಲ್ಯಾಣ್ (Pawan Kalyan) ಈ ಹೆಸರಿಗೆ ಇಂದು ಪರಿಚಯದ ಅಗತ್ಯ ಇಲ್ಲ. ಸಿನಿಮಾಗಳಲ್ಲಿ ಅಬ್ಬರಿಸಿದ ನಟ ಈಗ ಡಿಸಿಎಂ ಆಗಿ ಸದ್ದನ್ನು ಮಾಡುತ್ತಿದ್ದಾರೆ. ನಟನ ಸಿನಿಮಾ ಬಿಡುಗಡೆ ಆದ್ರೆ ಸಾಕು ಥಿಯೇಟರ್ ಗಳ ಮುಂದೆ ಜಾತ್ರೆಯ ವಾತಾವರಣ ಮೂಡುತ್ತದೆ. ಅಭಿಮಾನಿಗಳಿಗೆ ಅದು ಹಬ್ಬವೆಂದರೂ ತಪ್ಪಲ್ಲ. ರಾಜಕೀಯದಲ್ಲಿ ಸಕ್ರಿಯವಾಗಿರುವ ನಟನ ಸಿನಿಮಾಗಳು ತೆರೆಗೆ ಬರಬೇಕಾಗಿದೆ.

ಹರಿಹರ ವೀರಮಲ್ಲು ಮತ್ತು ಉಸ್ತಾದ್ ಭಗತ್ ಸಿಂಗ್ ಚಿತ್ರಗಳು ತೆರೆಗೆ ಬರಬೇಕಾಗಿದೆ. ರಾಜಕೀಯದ ನಡುವೆ ಸಿನಿಮಾಕ್ಕಾಗಿ ನಟ ಟೈಮ್ ಹೊಂದಾಣಿಕೆ ಮಾಡಬೇಕಾಗಿದೆ. ವರ್ಷಗಳ ಹಿಂದೆ ಟಾಲಿವುಡ್ ನಲ್ಲಿ ಪವನ್ ಕಲ್ಯಾಣ್ ಅವರ ಬಗ್ಗೆ ಒಂದು ಸುದ್ದಿ ಹರಿದಾಡಿತ್ತು. ಅದು ದೊಡ್ಡ ಚರ್ಚೆಗೆ ಸಹಾ ಕಾರಣವಾಗಿತ್ತು. ‌

ಹೌದು, ಪವನ್ ಕಲ್ಯಾಣ್ ಅವರು ನಾಯಕಿ ಒಬ್ಬರಿಗೆ ವಜ್ರದ ನೆಕ್ಲೆಸ್ ಗಿಫ್ಟ್ ಕೊಟ್ಟಿದ್ದರೆನ್ನುವ ವಿಚಾರವು ಎಲ್ಲರಿಗೂ ಅಚ್ಚರಿ ಯನ್ನು ಮೂಡಿಸಿತ್ತು. ಜಲ್ಸಾ ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ನಟಿಸಿದ್ದ ನಟಿ ಪಾರ್ವತಿ ಮೆಲ್ಟನ್ ಗೆ (Parvati Melton) ನಟ ವಜ್ರದ ನೆಕ್ಲೆಸ್ ಕೊಡಿಸಿದ್ದರು ಎನ್ನಲಾಗಿತ್ತು.

ಆದರೆ ಈ ವಿಷಯವನ್ನು ನಟನ ಅಭಿಮಾನಿಗಳು ಕೇಲವ ವದಂತಿಯೆಂದು ತಳ್ಳಿ ಹಾಕಿದ್ದರು. ಇದರಲ್ಲಿ ಯಾವುದೇ ರೀತಿಯ ಸತ್ಯಾಂಶ ಇಲ್ಲ ಎಂದೂ ಸಹಾ ಹೇಳಲಾಗಿತ್ತು. ಆದರೂ ಈ ವಿಷಯ ಮಾತ್ರ ಮಾದ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿ ಹರಿದಾಡಿತ್ತು.

Amruthadhaare ಎಲ್ರೂ ಅಂದು ಕೊಂಡ ಹಾಗೇ ಆಯ್ತು; ಜೈದೇವ್ ನಿಜಕ್ಕೂ ನಾಯಕ, ನಾಯಕಿಗಿಂತ ಜೀನಿಯಸ್

Leave a Comment