Bigg Boss Kannada : ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 11 ರ ಹೊಸ ಪ್ರೊಮೊ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ. ಹೌದು, ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಲ್ಲಿ ಭಯವನ್ನು ಮೂಡಿಸುವಂತಹ ಘಟನೆಯೊಂದು ಮನೆಯಲ್ಲಿ ನಡೆದಿದ್ದು, ಎಲ್ಲರೂ ಸಹಾ ಭಯಭೀತರಾಗಿದ್ದಾರೆ. ಮನೆಯಲ್ಲಿ ಮನೆ ಮಂದಿ ಯಾವುದೋ ವಿಷಯ ಚರ್ಚಿಸುತ್ತಿರುವಾಗ ಇದ್ದಕ್ಕಿದ್ದ ಹಾಗೆ ಪ್ಲೇಟ್ ಗಳು ಬಿದ್ದು ಹೋಗಿವೆ.
ಬಿಗ್ ಬಾಸ್ ಕಿಚನ್ ನಲ್ಲಿ ತಟ್ಟೆಗಳು ಇದ್ದಕ್ಕಿದ್ದ ಹಾಗೆ ಬಿದ್ದು ಒಡೆದಿವೆ. ಇದನ್ನ ನೋಡಿ ಮನೆಯಲ್ಲಿ ದೆವ್ವ ಇರಬಹುದೇನೋ ಎಂದು ಗಾಬರಿಯಾಗಿದ್ದಾರೆ. ಭವ್ಯಾ (Bhavya Gowda) ಅವರು ಮಾತನಾಡುತ್ತಾ ಕ್ಲೀನ್ ಮಾಡೋಕೆ ಬಂದಾಗ ಈ ರೀತಿ ನೆಗೆಟಿವ್ ಎನರ್ಜಿಗಳು ಕೆಲವು ಕಡೆ ಇರುತ್ತೆ ಎಂದಿದ್ದಾರೆ, ಈ ವಿಷಯವನ್ನು ಮನೆ ಮಂದಿ ಚರ್ಚೆ ಮಾಡಿದ್ದಾರೆ.
ಪದೇ ಪದೇ ಮನೆಯಲ್ಲಿ ಹೀಗೆ ಆಗ್ತಿದೆ ಎಂದು ಸ್ಪರ್ಧಿಗಳು ಮಾತನಾಡಿಕೊಂಡಿದ್ದಾರೆ. ಉಗ್ರಂ ಮಂಜು (Ugram Manju) ಆ ತರ ದೆವ್ವ ಎಲ್ಲ ಇರಲ್ಲ ಎಂದಿದ್ದರೆ, ಗೌತಮಿ ಅವರು ನೆಗೆಟಿವ್ ಎನರ್ಜಿ ಹೋಯ್ತು ಅಂದುಕೊಳ್ಳಿ ಎಂದಿದ್ದಾರೆ. ಹೀಗೆ ಮಾತನಾಡುವಾಗಲೇ ಪ್ಲೇಟ್ ಒಂದು ಒಡೆದಿದೆ. ಇದು ಇನ್ನಷ್ಟು ಶಾಕ್ ನೀಡಿದೆ.
ಪ್ರೊಮೋ ಅಂತು ಈಗ ಎಲ್ಲರ ಗಮನ ಸೆಳೆದಿದೆ. ಬಿಗ್ ಬಾಸ್ ಮನೆಯಲ್ಲಿ ಎರಡನೇ ವಾರದ ಆಟ ಜೋರಾಗಿಯೇ ನಡೆದಿದೆ. ಜಗದೀಶ್ ಅವರು ಮತ್ತು ಹಂಸ ಅವರು ಈ ವಾರ ಸಾಕಷ್ಟು ಹೈಲೈಟ್ ಆಗಿ ಕಾಣುತ್ತಿದ್ದಾರೆ. ಉಳಿದವರು ಇವರ ಮುಂದೆ ಸಪ್ಪೆಯಾದಂತೆ ಕಂಡಿದೆ. ಇನ್ನು ಇಂದಿನ ಎಪಿಸೋಡ್ ನಲ್ಲಿ ಟಾಸ್ಕ್ ನಲ್ಲಿ ಏನೆಲ್ಲಾ ನಡೆಯುತ್ತೆ ನೋಡಬೇಕಾಗಿದೆ.
Bigg Boss ಮನೇಲಿ ಹೆಚ್ಚು ದಿನ ಇರೋಕೆ ಗೌತಮಿ ಅವರ ತಂತ್ರ; ಅದೆಲ್ಲಾ ಅಲ್ಲಿ ವರ್ಕ್ ಆಗಲ್ಲ ಅಂತಿದ್ದಾರೆ ಫ್ಯಾನ್ಸ್