Bigg Boss 11 ಕ್ಯಾಪ್ಟನ್ ಹಂಸಗೆ ನರಕ ತೋರಿಸುತ್ತಿರುವ ನರಕ ವಾಸಿಗಳ ವರ್ತನೆ ಕಂಡು ಸಿಟ್ಟಾದ ನೆಟ್ಟಿಗರು ಹೇಳಿದ್ದೇನು

Written by Soma Shekar

Published on:

---Join Our Channel---

Bigg Boss 11 : ಬಿಗ್ ಬಾಸ್ (Bigg Boss 11) ಮನೆಯಲ್ಲಿ ಕ್ಯಾಪ್ಟನ್ ಹಂಸ ಅವರ ವರ್ತನೆ ಅದ್ಯಾಕೋ ನರಕ ನಿವಾಸಿಗಳಿಗೆ ಇಷ್ಟ ಆಗ್ತಿಲ್ಲ. ನರಕ ವಾಸಿಗಳು ಕ್ಯಾಪ್ಟನ್ ಹಂಸ (Hamsa) ವಿರುದ್ಧ ಸಿಡಿದೆದ್ದಿದ್ದಾರೆ. ಈಗ ಇವೆಲ್ಲವುಗಳ ನಡುವೆ ಟಾಸ್ಕ್ ನಲ್ಲಿ ನಮಗೆ ಮೋಸವಾಗಿದೆ ಎಂದು ಆಕ್ರೋಶವನ್ನು ಹೊರ ಹಾಕಿದ್ದಾರೆ.‌ ಅವರ ಜೊತೆ ಊಟ ಮಾಡೋದಿದ್ದರೆ ಮನೆಗೆ ಹೋಗಿ ಊಟ ಮಾಡಿ ಎಂದಿದ್ದಾರೆ ಜಗದೀಶ್.

ಇನ್ನೊಂದು ಕಡೆ ಚೈತ್ರ ಕುಂದಾಪುರ (Chaithra Kundapura) ಕ್ಯಾಪ್ಟನ್ ಮೇಲೆ ಸಿಟ್ಟಿನಿಂದ, ನೀವು ಯಾವ ಸೀಮೆ ಕ್ಯಾಪ್ಟನ್ ಎಂದು ಚೈತ್ರಾ ಕುಂದಾಪುರ ರೋಷವನ್ನು ಹೊರ ಹಾಕಿದ್ದಾರೆ. ಗೊಬ್ಬರದ ಅಬ್ಬರ ಆಟದಲ್ಲಿ ಸ್ವರ್ಗ ವಾಸಿಗಳು ಮೋಸ ಮಾಡಿದ್ದಾರೆನ್ನುವುದು ನರಕ ವಾಸಿಗಳ ವಾದವಾಗಿದ್ದು, ಮನೆಯಲ್ಲಿ ಅಶಾಂತಿ ತಲೆದೋರಿದೆ.

ಆಟದಲ್ಲಿ ತೆವಳಿಕೊಂಡು ಬರುವ ಬದಲು ಸ್ವರ್ಗವಾಸಿಗಳು ನೆಗೆದು, ಜಿಗಿದು ಬಂದಿದ್ದು ಸ್ವರ್ಗ ವಾಸಿಗಳ ಕೋಪಕ್ಕೆ ಕಾರಣವಾಗಿದೆ. ತೆವಳಿಕೊಂಡು ಬರಬೇಕೆಂದು ಇರೋದಲ್ವಾ? ಜಂಪ್ ಮಾಡೋಕೆ ಅವಕಾಶ ಕೊಡಂಗಿಲ್ಲ ಎಂದು ಕೂಗಾಡಿದ್ದು, ಕಣ್ಣಿಲ್ವಾ ನಿಮಗೆ ನೋಡೋಕೆ ಎಂದು ಜಗದೀಶ್ ಅವರು ಕ್ಯಾಪ್ಟನ್​ಗೆ ಬೈಯುತ್ತಾರೆ. .

ಗೋಲ್ಡ್ ಸುರೇಶ್ (Gold Suresh) ಇನ್ಮುಂದೆ ನಾವು ಯಾವ ಗೇಮೂ ಆಡಲ್ಲ ಅಂತ ಕ್ಯಾಮರಾ ಮುಂದೆ ಹೇಳಿದ್ದಾರೆ. ಪ್ರೊಮೋ ನೋಡಿದ ನೆಟ್ಟಿಗರು ಮಾತ್ರ ಕ್ಯಾಪ್ಟನ್ ದು ಯಾವುದೇ ತಪ್ಲಿಪ್ಪ ಅವ್ರಿಗೆ ಮಾತಾಡೋಕೆ ಬಿಟ್ಟರೆ ತಾನೇ ಅವರು ಏನಾದ್ರೂ ಹೇಳೋದು ಅಂತಿದ್ದಾರೆ. ಆದರೆ ನರಕ ನಿವಾಸಿಗಳು ಎಲ್ಲಾ ತಪ್ಪು ಕ್ಯಾಪ್ಟನ್ ದೇ ಅಂತಿದ್ದಾರೆ.

Leave a Comment