Bigg Boss 11 ಯಮುನಾ ಹೊರಗೆ ಬರ್ತಿದ್ದ ಹಾಗೆ ವೈಲ್ಡ್ ಕಾರ್ಡ್ ಸ್ಪರ್ಧಿ ಎಂಟ್ರಿ? ಶುರುವಾಯ್ತು ಹೊಸ ಚರ್ಚೆ

Written by Soma Shekar

Published on:

---Join Our Channel---

Bigg Boss 11 ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಂಡು, ಎರಡನೇ ವಾರಕ್ಕೆ ಎಂಟ್ರಿ ನೀಡಿರುವ ಬಿಗ್‌ ಬಾಸ್‌ ಸೀಸನ್‌ 11ರಲ್ಲಿ (Bigg Boss 11) ಮೊದಲ ವಾರದ ಎಲಿಮಿನೇಷನ್ ನಲ್ಲಿ ಎಲ್ಲರಿಗೂ ಅಚ್ಚರಿ ಮತ್ತು ಶಾ ಕ್ ಎನಿಸುವಂತೆ ನಟಿ ಯಮುನಾ ಶ್ರೀನಿಧಿ ಅವರು ಹೊರಗೆ ಬಂದಿದ್ದಾರೆ.

ಯಮುನಾ (Yamuna) ಅವರು ಹೊರ ಬಂದ ವಿಚಾರವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ಅವರು ಪ್ರಬಲ ಸ್ಪರ್ಧಿ ಇಷ್ಟು ಬೇಗ ಹೊರ ಬರುವ ಸ್ಪರ್ಧಿ ಅಲ್ಲ ಎಂದರೆ ಇನ್ನೂ ಕೆಲವರು ಅವರು ಬಂದಿದ್ದು ಸರಿ ಎನ್ನುತ್ತಿದ್ದಾರೆ.

ಯಮುನಾ ಅವರು ಹೊರಗೆ ಬರ್ತಾ ಇದ್ದ ಹಾಗೆ ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ವೈಲ್ಡ್ ಕಾರ್ಡ್ ಎಂಟ್ರಿ (Wild Card Entry) ಕುರಿತು ಚರ್ಚೆಗಳನ್ನು ಆರಂಭಿಸಿದ್ದಾರೆ. ಒಬ್ಬ ಸ್ಪರ್ಧಿಯ ಹೆಸರು ಮುನ್ನೆಲೆಗೆ ಬಂದಿದ್ದು, ಅವ್ರಿಗೆ ಅವಕಾಶ ನೀಡಿ ಅಂತಿದ್ದಾರೆ ನೆಟ್ಟಿಗರು.

ಯಾಕೆ ಜನರೇ, ಬನ್ನಿ ಜನರೇ? ಅಂತಾ ವಿಡಿಯೋ ಅಪ್ಲೋಡ್ ಮಾಡೋ ಕೀರ್ತಿ (Keerthi) ಇತ್ತೀಚಿನ ದಿನಗಳಲ್ಲಿ ತುಂಬಾ ಟ್ರೋಲ್ ಆಗ್ತಿದ್ದು, ಇತ್ತೀಚಿಗೆ ಅವರು ತಾವಿರುವ ಪುಟ್ಟ ಮನೆಯ ವೀಡಿಯೋ ಶೇರ್ ಮಾಡಿಕೊಂಡಿದ್ದರು. ಇದನ್ನ ನೋಡಿ ನೆಟ್ಟಿಗರ ಮನಸ್ಸು ಕರಗಿತ್ತು.

ಈಗ ಅದೇ ಕಾರಣದಿಂದ ಈಕೆಗೆ ಬಿಗ್ ಬಾಸ್ ನಲ್ಲಿ ಒಂದು ಅವಕಾಶ ಕೊಟ್ರೆ ಅವರ ಜೀವನ ಕಟ್ಟಿಕೊಳ್ಳೋಕೆ ನೆರವಾಗುತ್ತೆ ಅನ್ನೋದು ಅನೇಕರು ಅಭಿಪ್ರಾಯವಾಗಿದೆ. ಕೀರ್ತಿ ಅವರು ಕಿಪಿ ಕೀರ್ತಿ (Kipi Keerthi) ಅಂತಾನೇ ಸದ್ದು ಮಾಡ್ತಿದ್ದಾರೆ.

Amruthadhaare ಖತರ್ನಾಕ್ ಕಿಲಾಡಿ ಜೈದೇವ್, ಅಸಲಿಯತ್ತು ಬಯಲಾದ ಕೂಡ್ಲೇ ಹೈಡ್ರಾಮಾ ಶುರು

Leave a Comment