Bigg Boss ತೆಲುಗಿನಲ್ಲಿ ಮೊಳಗಿದ ಕನ್ನಡದ ಕಂಪು: ತೆಲುಗು ಬಿಗ್ ಬಾಸ್ ಮನೆಯಲ್ಲಿ ಕನ್ನಡ ಮಾತು ಕೇಳಿ ಖುಷಿ ಆದ ಫ್ಯಾನ್ಸ್

Written by Soma Shekar

Published on:

---Join Our Channel---


Bigg Boss : ತೆಲುಗಿನ ಹಿರಿಯ ಸ್ಟಾರ್ ನಟ ಅಕ್ಕಿನೇನಿ ನಾಗರ್ಜುನ (Akkineni Nagarjuna) ನಿರೂಪಣೆ ಮಾಡುವ ಬಿಗ್ ಬಾಸ್ ತೆಲುಗು ಎಂಟನೇ ಸೀಸನ್ ನಡೆಯುತ್ತಿದೆ. ಈ ಸಕ ಕನ್ನಡ ಮೂಲದ ಒಂದಷ್ಟು ಜನ ಕಲಾವಿದರು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಾಗಿದ್ದಾರೆ. ಇವರಲ್ಲಿ ಮೈಸೂರು ಮೂಲದ ನಿಖಿಲ್ ಮಳಿಯಕ್ಕಲ್ (Nikhil Maliyakkal) ಸಹಾ ಒಬ್ಬರಾಗಿದ್ದಾರೆ.

ಕನ್ನಡ ಕಲಾವಿದರು ತೆಲುಗು ಬಿಗ್ ಬಾಸ್ ನಲ್ಲಿ ಇರುವುದು ಒಂದು ಖುಷಿಯ ವಿಚಾರವಾದರೆ ಮತ್ತೊಂದು ಕಡೆ  ತೆಲುಗು ಬಿಗ್​ಬಾಸ್ ( Bigg Boss ) ಶೋನಲ್ಲಿ ಕನ್ನಡದ ಕಲರವ ಕೇಳಿ ಕನ್ನಡ ಭಾಷಾ ಪ್ರೇಮಿಗಳು ಖುಷಿಯಾಗಿದ್ದಾರೆ. ‌ಬಿಗ್ ಬಾಸ್ ನಲ್ಲಿ ನಿಖಿಲ್ ಅವರು ಬೇಸರಕ್ಕೆ ಒಳಗಾಗಿದ್ದರು. ಅಮ್ಮನನ್ನು ನೋಡದೇ ಇರುವುದು ಕಷ್ಟ ಎಂದಿದ್ದರು.

ಆದ ಕಾರಣ ಬಿಗ್ ಬಾಸ್ ಶೋ ನಲ್ಲಿ ನಿಖಿಲ್ ಅವರ ತಾಯಿ ಮಾತನಾಡಿರುವ ವೀಡಿಯೋವನ್ನು ಪ್ಲೇ ಮಾಡಲಾಗಿದೆ. ವೀಡಿಯೋದಲ್ಲಿ ನಿಖಿಲ್ ಅವರ ತಾಯಿ, ನೀನು ಹೆಂಗಿದೆಯೋ ಹಾಗೇ ಇರು. ಬೇರೆಯವರಿಗಾಗಿ ಚೇಂಜ್ ಮಾಡಿಕೊಳ್ಳಬೇಡ. ಎಮೋಷನಲ್ ಆಗಬೇಡ. ಎಲ್ಲರೂ ನಿನ್ನ ಜೊತೆ ರೇಸ್​ ನಲ್ಲಿದ್ದಾರೆ.

ನೀನು ಆಡ್ತಿರೋದು ನನಗೆ ಸಖತ್ ಇಷ್ಟ ಆಗುತ್ತಿದೆ. ಕಪ್ ಲಿಫ್ಟ್​ ಮಾಡೋದನ್ನ ನೋಡಲು ಕಾಯುತ್ತಿದ್ದೇವೆ. ಐ ಲವ್ ಯು ಕಂದ’ ಎಂದು ಹೇಳಿದ್ದಾರೆ. ಅಮ್ಮನ ಮಾತುಗಳನ್ನು ಕೇಳಿ ನಿಖಿಲ್ ಭಾವುಕರಾಗಿದ್ದಾರೆ. ತೆಲುಗು ಸೀರಿಯಲ್ ಗಳಲ್ಲಿ ನಟಿಸುತ್ತಿದ್ದ ನಿಖಿಲ್ ಅವರು ತೆಲುಗು ಕಿರುತೆರೆಯ ಜನಪ್ರಿಯ ನಟ ಆಗಿದ್ದಾರೆ.

Bigg Boss Kannada 11 ರೊಚ್ಚಿಗೆದ್ದ ಚೈತ್ರ, ಕಣ್ಣೀರು ಹಾಕಿದ ಭವ್ಯ, ಎರಡನೇ ವಾರದ ಮೊದಲಲ್ಲೇ ಕದನ ರಂಗವಾದ ಬಿಗ್ ಬಾಸ್ ಮನೆ

Leave a Comment