Rajendra Prasad: ತೆಲುಗು ಚಿತ್ರರಂಗದ (Tollywood) ಪ್ರಮುಖ ಕಾಮಿಡಿ ಹೀರೋಗಳಲ್ಲಿ ಒಬ್ಬರಾಗಿರುವ, ನಟ ಕಿರೀಟಿ ಖ್ಯಾತಿಯ ರಾಜೇಂದ್ರ ಪ್ರಸಾದ್ (Rajendra Prasad) ಅವರು ತಮ್ಮ ಮಗಳ ನಿಧನದಿಂದ ದುಃಖತಪ್ತರಾಗಿದ್ದಾರೆ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ನಟ ಮಗಳ ಬಗ್ಗೆ ಸಂಚಲನ ಮಾತುಗಳನ್ನು ಹೇಳಿಕೊಂಡಿದ್ದರು.
ಬಹಳಷ್ಟು ಜನ ಪುರುಷರು ಮರೆಯಾದ ತಮ್ಮ ತಾಯಿಯನ್ನು ತಮ್ಮ ಮಗಳಲ್ಲಿ ತಮ್ಮ ನೋಡುತ್ತಾರೆ. ನಾನು ಹತ್ತು ವರ್ಷ ವಯಸ್ಸಿನ ಹುಡುಗನಾಗಿರುವಾಗಲೇ ತಾಯಿ ತೀರಿಕೊಂಡರು. ನಾನು ನನ್ನ ಮಗಳಲ್ಲೇ ತಾಯಿಯನ್ನ ನೋಡಿದೆ. ಆದರೆ ನನ್ನ ಮಗಳು ನನಗೆ ಮೋಸ ಮಾಡಿ ಬೇರೊಬ್ಬ ಹುಡುಗನ ಜೊತೆ ಮದುವೆ ಆಗಿ ಹೊರಟು ಹೋದಳು.
ನನಗೂ ನನ್ನ ಮಗಳಿಗೂ ಯಾವುದೇ ಸಂಬಂಧವಿಲ್ಲ, ನಮ್ಮ ನಡುವೆ ಮಾತುಕತೆ ಇಲ್ಲ ಎಂದಿದ್ದರು. ಆದರೆ ಈಗ ಅವರ ಮಗಳು ಗಾಯತ್ರಿ ತಮ್ಮ 38 ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ಎಲ್ಲರನ್ನೂ ಅಗಲಿದ್ದು, ತಂದೆ ತಾಯಿಗೆ ತೀರದ ಶೋಕವನ್ನು ಉಳಿಸಿ ಹೋಗಿದ್ದಾರೆ. ರಾಜೇಂದ್ರ ಪ್ರಸಾದ್ ಕಣ್ಣೀರು ಹಾಕಿದ್ದಾರೆ.
ರಾಜೇಂದ್ರ ಪ್ರಸಾದ್ ಅವರ ಮಗಳು ಗಾಯತ್ರಿ ಅವರಿಗೆ ನಿನ್ನೆ ರಾತ್ರಿ ಎದೆ ನೋವು ಕಾಣಿಸಿಕೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರು ಎನ್ನಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದು, ಮಗಳ ಹಠಾತ್ ಮರಣದಿಂದ ನಟ ತೀವ್ರವಾಗಿ ನೋವು ಪಡುವಂತಾಗಿದೆ.
BBK 11 ಇವ್ರನ್ನ ಸುದೀಪ್ ಸರ್ ಒದ್ದು ಹೊರಗೆ ಹಾಕ್ತಾರೆ, ಒಂದೇ ವಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ಏನೆಲ್ಲಾ ಆಗೋಯ್ತು