ಮೇಕಪ್ ಇಲ್ಲದೇ ಇದ್ರು ಅಪ್ಸರೆ, ಹೊಸ ಕ್ರಶ್ ಆದ Mokshita Pai, ಬಿಗ್ ಬಾಸ್ ನಲ್ಲಿ ನಟಿಯ ಸರಳತೆಗೆ ವೀಕ್ಷಕರು ಫಿದಾ

Written by Soma Shekar

Published on:

---Join Our Channel---

Mokshitha Pai: ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಪಾರುವಿನಲ್ಲಿ ನಾಯಕಿ ಪಾರು ಪಾತ್ರದಲ್ಲಿ ಮಿಂಚಿದ್ದ ನಟಿ ಮೋಕ್ಷಿತಾ ಪೈ (Mokshitha Pai) ಕನ್ನಡ ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿಯನ್ನು ನೀಡಿದ್ದಾರೆ.‌ ವಿಶೇಷ ಏನೆಂದರೆ ಸೋಶಿಯಲ್ ಮೀಡಿಯಾಗಳಲ್ಲಿ ಈ ನಟಿಯನ್ನು ಟ್ರೋಲ್ ಮಾಡೋದು ಕಾಣೋದು ಇಲ್ಲ.

ತಮ್ಮನನ್ನ ಅಮ್ಮನ ಹಾಗೆ ಜೋಪಾನ ಮಾಡೋ ಈ ನಟಿ ಅಂದ್ರೆ ಅನೇಕರಿಗೆ ಅಚ್ಚು ಮೆಚ್ಚು. ಇದೀಗ ಬಿಗ್ ಬಾಸ್ (Bigg Boss Kannada 11) ಮನೆಯಲ್ಲಿ ಮೊದಲ ವಾರವೇ ಒಂದಷ್ಟು ಜಗಳ, ಮಾತಿನ ಚಕಮಕಿ ಎಲ್ಲವುಗಳ ನಡುವೆ ಮೋಕ್ಷಿತಾ ಅವರ ಅಂದ ಹಾಗೂ ಗುಣಗಳ ಬಗ್ಗೆ ಹೊರಗೆ ನೆಟ್ಟಿಗರ ಮೆಚ್ಚುಗೆಗಳು ಹರಿದು ಬರುತ್ತಿದೆ.

ನಟಿಯರು ಹೊರಗೆ ಮೇಕಪ್ ನಲ್ಲಿ ಮಿಂಚಿ ಬಿಗ್ ಬಾಸ್ ಮನೆಯಲ್ಲಿ ಕೆಲವೊಮ್ಮೆ ಮೇಕಪ್ ಇಲ್ಲದೇ ಕಂಡಾಗ ಜನ ಅಚ್ಚರಿ ಪಡೋದು ನಿಜ. ಆದರೆ ಮೋಕ್ಷಿತಾ ಅವರು ಮಾತ್ರ ಮೇಕಪ್ ಇಲ್ಲದೆಯೂ ಅಪ್ಸರೆಯಂತೆ ಕಾಣ್ತಾರೆ ಅನ್ನೋದು ಅನೇಕರ ಮೆಚ್ಚುಗೆಗೆ ಕಾರಣವಾಗಿದೆ.‌

ಮೋಕ್ಷಿತಾ ಬಿಗ್ ಬಾಸ್ ಮನೆಯಲ್ಲಿ ನರಕಕ್ಕೆ ಎಂಟ್ರಿ ನೀಡಿದ್ದಾರೆ. ಇದನ್ನ ನೋಡಿದ ಅವರ ಅಭಿಮಾನಿಗಳು ಮತ್ತು ನೆಟ್ಟಿಗರು ದಯವಿಟ್ಟು ಈ ಅಂದದ ಅಪ್ಸರೆ ಯನ್ನು ಸ್ವರ್ಗಕ್ಕೆ ಕಳುಹಿಸಿ ಎನ್ನುವ ಮಾತನ್ನು ಸೋಶಿಯಲ್ ಮೀಡಿಯಾಗಳ ಮೂಲಕ ಹೇಳುತ್ತಿದ್ದಾರೆ.‌

ಇದೀಗ ಯುವಕರ ಪಾಲಿಗೆ ಮೋಕ್ಷಿತಾ ಹೊಸ ಕ್ರಶ್ ಆಗಿ ಬದಲಾಗಿದ್ದಾರೆ. ಮೋಕ್ಷಿತಾ ಅವರು ಬಹಳ ಸಿಂಪಲ್, ಮಾತು, ಕಥೆ, ಆ್ಯಟಿಟ್ಯೂಡ್ ಎಲ್ಲವೂ ಸೋ ಸ್ವೀಟ್ ಅಂತಿರೋ ಅಭಿಮಾನಿಗಳು ಬಿಗ್ ಬಾಸ್ ಆಟ ಕೂಡಾ ಚೆನ್ನಾಗಿ ಆಡಿ ಗೆದ್ದು ಬರಲೆಂದು ಶುಭ ಹಾರೈಸುತ್ತಿದ್ದಾರೆ.

Popular Serials ಜನಪ್ರಿಯ ಸೀರಿಯಲ್ ಗಳಲ್ಲಿ ಅಸಲಿ ಅಮ್ಮಂದಿರೇ ನಾಪತ್ತೆ ಯಾಕೆ? ಈ ವಿಷಯ ನೀವು ಗಮನಿಸಿದ್ದೀರಾ

Leave a Comment