Popular Serials : ಕಿರುತೆರೆ ಅಂದ್ರೆ ಸಾಕು ಅಲ್ಲಿ ಸೀರಿಯಲ್ ಗಳ ಅಬ್ಬರ ಜೋರಾಗಿ ಇದೆ. ರಿಯಾಲಿಟಿ ಶೋಗಳು ಬರುತ್ತವೆ ಹೋಗುತ್ತವೆ. ಆದರೆ ವರ್ಷಗಳಗಟ್ಟಲೆ ಜನರನ್ನು ರಂಜಿಸುವುದು ಸೀರಿಯಲ್ ಗಳು (Popular) Serials) ಅನ್ನೋದ್ರಲ್ಲಿ ಮಾತ್ರ ಅನುಮಾನವೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಬರುವ ಸೀರಿಯಲ್ ಗಳಲ್ಲಿ ಬಹುತೇಕ ಕಥಾ ಹಂದರ ಒಂದೇ ಆಗಿರುತ್ತೆ. ಆದರೆ ಪಾತ್ರಗಳು, ಸನ್ನಿವೇಶಗಳು ಮಾತ್ರವೇ ಬದಲಾಗಿರುತ್ತೆ ಅಂತ ಹೇಳಬಹುದು.
ಈಗ ಟಾಪ್ ಸೀರಿಯಲ್ ಗಳಲ್ಲಿ ಸ್ಥಾನ ಪಡೆದಿರುವ ಕೆಲವು ಸೀರಿಯಲ್ ಗಳಲ್ಲಿ ಒಂದು ವಿಷಯ ಕಾಮನ್ ಆಗಿ ಪ್ರೇಕ್ಷಕರಿಗೆ ಕಂಡಿದೆ. ಹೌದು, ಜನಪ್ರಿಯ ಸೀರಿಯಲ್ ಗಳಲ್ಲಿ ನಾಯಕ ಅಥವಾ ನಾಯಕಿಯ ಅಸಲಿ ಅಮ್ಮ ಕಥೆಯಲ್ಲಿ ನಾಪತ್ತೆ ಆಗಿರೋದು ಕಂಡಿದೆ.
ಅಮೃತಧಾರೆಯಲ್ಲಿ (Amruthadhaare) ನಾಯಕನ ಅಸಲಿ ಅಮ್ಮನಿಗೆ ಏನಾಯ್ತೋ ಗೊತ್ತಿಲ್ಲ, ಸೀತಾ ರಾಮ (SeethaRama) ಸೀರಿಯಲ್ ನಲ್ಲಿ ಅಮ್ಮನಿಗೆ ಏನಾಯ್ತೋ ಗೊತ್ತಿಲ್ಲ, ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಸೀರಿಯಲ್ ನಲ್ಲಿ ನಾಯಕಿಯ ಅಮ್ಮನಿಗೆ ಏನಾಯ್ತೋ ಗೊತ್ತಿಲ್ಲ.. ಇನ್ನು ಈ ಹಿಂದೆ ಬರ್ತಿದ್ದ ಗಟ್ಟಿಮೇಳದಲ್ಲೂ ಅಸಲಿ ಅಮ್ಮ ನಾಪತ್ತೆ ಆಗಿದ್ರು.
ಇನ್ನು ಈ ಕಥೆಗಳಲ್ಲಿ ಶ್ರಾವಣಿ ಸುಬ್ರಹ್ಮಣ್ಯ ಹೊರತಾಗಿ ಉಳಿದ ಮೂರು ಸೀರಿಯಲ್ ಗಳಲ್ಲಿ ಅಮ್ಮನ ಪಾತ್ರ ತೊಂದರೆಯಾದವರು ಚಿಕ್ಕಮ್ಮ ಅನ್ನೋದು ಕೂಡಾ ಸಾಮಾನ್ಯವಾದ ವಿಚಾರವೇ ಆಗಿದೆ. ಇನ್ನು ಇತ್ತೀಚಿಗೆ ಆರಂಭವಾದ ಅಣ್ಣಯ್ಯ ಸೀರಿಯಲ್ ನಲ್ಲೂ ನಾಯಕನ ಅಮ್ಮನ ಪಾತ್ರ ನಾಪತ್ತೆ ಅನ್ನೋದು ಸಹಾ ಗಮನಿಸಬೇಕಾಗಿದೆ.
BBK 11 ರಲ್ಲಿ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆ, ಬಿಗ್ ಬಾಸ್ ವಿರುದ್ಧ ದಾಖಲಾಯ್ತು ದೂರು