Kantara Chapter 1 ನಲ್ಲಿ ರಿಷಬ್ ಶೆಟ್ಟಿ ತಂದೆ ಪಾತ್ರಕ್ಕೆ ಸೂಪರ್ ಸ್ಟಾರ್ ನಟನ ಎಂಟ್ರಿ; ಸುದ್ದಿ ಕೇಳಿ ನಡುಗಿದ ಚಿತ್ರರಂಗ

Written by Soma Shekar

Published on:

---Join Our Channel---

Kantara Chapter 1 : ಕಾಂತಾರ (Kantara) ಸಿನಿಮಾ ಕನ್ನಡದಲ್ಲಿ ಬಿಡುಗಡೆ ಆಗಿ ಯಶಸ್ಸು ಪಡೆದ ನಂತರ ಅನ್ಯ ಭಾಷೆಗಳಿಗೆ ಡಬ್ ಆಗಿ ದೊಡ್ಡ ವಿಜಯವನ್ನು ತನ್ನದಾಗಿಸಿಕೊಂಡ ಸಿನಿಮಾ ಆಗಿತ್ತು. ಕಾಂತಾರ ಅನೇಕರ ಮನಸ್ಸನ್ನು ಗೆದ್ದ ಸಿನಿಮಾ ಆಗಿತ್ತು. ಸ್ಟಾರ್ ನಟ ನಟಿಯರು ಸಹಾ ಈ ಸಿನಿಮಾಕ್ಕೆ ಮೆಚ್ಚುಗೆ ನೀಡಿದ್ದರು. ಇಷ್ಟು ದೊಡ್ಡ ಸಕ್ಸಸ್ ಪಡೆದ ಕಾರಣಕ್ಕೆ ಈಗ ಕಾಂತಾರ ಚಾಪ್ಟರ್ ಒನ್ ಬಗ್ಗೆ ಸಿನಿ ಪ್ರೇಮಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಕಾಯುತ್ತಿದ್ದಾರೆ.

ಕಾಂತಾರ ಒನ್ ಸಿನಿಮಾದ ಕೆಲಸಗಳು ನಡೆಯುತ್ತಿದ್ದು, ಆಗಾಗ ಸಿನಿಮಾದ ಅಪ್ಡೇಟ್ ಗಳು ಹೊರ ಬಂದು ಎಲ್ಲರ ಗಮನ ಸೆಳೆಯುತ್ತಿದೆ. ಈಗ ಈ ಸಿನಿಮಾದಲ್ಲಿ ಸ್ಟಾರ್ ನಟನೊಬ್ಬರು ಕಾಣಿಸಿಕೊಳ್ಳುವರೆನ್ನುವ ವಿಚಾರವು ಎಲ್ಲರಿಗೂ ಥ್ರಿಲ್ ಅನುಭವ ನೀಡಿದೆ.

ಹೌದು, ಮಲೆಯಾಳಂ ಸಿನಿಮಾದ ಸ್ಟಾರ್ ನಟ ಮೋಹನ್ ಲಾಲ್ (Mohan Lal) ಅವರು ಕಾಂತಾರ 1 ನಲ್ಲಿ ನಟಿಸಲಿದ್ದು, ಅವರು ರಿಷಬ್ ಶೆಟ್ಟಿ (Rishab Shetty) ಅವರ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ. ಈ ವಿಷಯ ಅಧಿಕೃತ ಘೋಷಣೆ ಆಗಿಲ್ಲವಾದರೂ ಎಲ್ಲೆಡೆ ಸುದ್ದಿಗಳು ಹರಿದಾಡಿದೆ.

ಕಾಂತಾರ 1 (Kantara Chapter 1) ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದು, ಕುಂದಾಪುರದಲ್ಲಿ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. 2025 ರಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆಗಳಿದ್ದು ಸಿನಿ ಪ್ರೇಮಿಗಳು ಸಿನಿಮಾಕ್ಕಾಗಿ ಕಾತರರಾಗಿದ್ದಾರೆ ಅನ್ನೋದು ಸತ್ಯ.

Bigg Boss Kannada 11 ನ ಮೊದಲ ವೀಕೆಂಡ್ ಆಗುತ್ತಾ ವೈಲೆಂಟ್ ಈಗ ಎಲ್ಲರ ಗಮನ ಫಸ್ಟ್ ವೀಕೆಂಡ್ ಕಡೆಗೆ

Leave a Comment