BBK 11 ಶಿಶಿರ್ ಶಾಸ್ತ್ರಿ ಮದುವೆ ಯಾವಾಗ? ಹಸ್ತ ರೇಖೆ ನೋಡಿ ಭವಿಷ್ಯ ನುಡಿದ ಚೈತ್ರ ಕುಂದಾಪುರ

Written by Soma Shekar

Published on:

---Join Our Channel---

Bigg Boss Kannada 11 : ಬಿಗ್ ಬಾಸ್ ಕನ್ನಡ -11 ರಲ್ಲಿ (Bigg Boss Kannada-11) ಹದಿನೇಳು ಸ್ಪರ್ಧಿಗಳು ದೊಡ್ಮನೆಯಲ್ಲಿ ಲಾಕ್ ಆಗಿದ್ದಾರೆ. ಈಗಾಗಲೇ ಸ್ಪರ್ಧಿಗಳ ನಡುವೆ ಮಾತಿಗೆ ಮಾತು ಬೆಳದಿದೆ, ಮಾತಿನ ಚಕಮಕಿ ಸಹಾ ನಡೆದಿದೆ. ಕೆಲವರು ತಾಳ್ಮೆ ಕಳ್ಕೊಂಡ್ರೆ, ಇನ್ನೂ ಕೆಲವರು ಬತ್ತಿ ಇಟ್ಟು ಖುಷಿ ಪಡ್ತಾ ಇದ್ದಾರೆ. ಸ್ವರ್ಗ, ನರಕಗಳ ಒಳಗೆ ಕಿತ್ತಾಟವು ನಡೆದಿದೆ.‌

ಧ್ಯಾನ ಮತ್ತು ಜಪದ ವಿಚಾರವಾಗಿ ಒಂದು ಕಡೆ ಚೈತ್ರಾ (Chaithra Kundapura), ಮಾನಸ ಅವರ ನಡುವೆ ಮಾತಿನ ಚಕಮಕಿ‌ ನಡೆದರೆ, ನಾಮಿನೇಷನ್ ನಂತರ ಶಿಶಿರ್ ಶಾಸ್ತ್ರಿ ಮತ್ತು ಯಮುನಾ ನಡುವೆಯೂ ವಾಗ್ವಾದ ಜೋರಾಗಿಯೇ ನಡೆದಿದೆ. ಇವೆಲ್ಲವುಗಳ ನಡುವೆಯೇ ನರಕವಾಸಿ ಚೈತ್ರ ಕುಂದಾಪುರ ಅವರು ಬಿಡುವಿನ ಸಮಯದಲ್ಲಿ ಶಿಶಿರ್ ಶಾಸ್ತ್ರಿ ಅವರ ಅವರ ಹಸ್ತ ರೇಖೆ‌ ನೋಡಿ ಜಾತಕ ಹೇಳಿದ್ದಾರೆ.

ನಿಮ್ಮ ಕೈಯಲ್ಲಿ ಹಣ ಎಂದಿಗೂ ಕಡಿಮೆ ಆಗಲ್ಲ. ಇನ್ನು ಮದುವೆ ವಿಚಾರದಲ್ಲಿ ನೀವು 35 ರಲ್ಲಿ ನಿರ್ಧಾರ ಮಾಡಿದ್ರೆ 38ರ ವಯಸ್ಸಿನ ವೇಳೆಗೆ ಮದುವೆ ಆಗುತ್ತೆ. ಹಿಂದೆ ಮೂರು ರಿಲೇಶನ್ ಶಿಪ್ ದೂರಾಗಿದೆ. ಅದು ದೂರವಾಗಿದ್ದೇ ಒಳ್ಳೇದು ಎಂದು ಚೈತ್ರಾ ಶಿಶಿರ್ (Shishir Shastri) ಅವರ ಹಸ್ತ ರೇಖೆ‌ಯನ್ನು ನೋಡಿ ಭವಿಷ್ಯವನ್ನು ನುಡಿದಿದ್ದಾರೆ.

ಮೊದಲ ದಿನದಿಂದಲೇ ಬಿಗ್ ಬಾಸ್ ಮನೆಯು ರಣರಂಗವಾಗಿ ಬದಲಾಗಿದ್ದು, ಒಂದಲ್ಲ ಒಂದು ವಿಚಾರಕ್ಕೆ ನರಕದಲ್ಲಿ ಇರುವವರು ಮತ್ತು ಸ್ವರ್ಗ ವಾಸಿಗಳ ನಡುವೆ ಜಗಳ ನಡೆಯುತ್ತಲೇ ಇದೆ. ಮನೆಯಲ್ಲಿನ ಇಂತಹ ಅಶಾಂತಿ ನೋಡಿ ಪ್ರೇಕ್ಷಕರು ಸಹಾ ಅಸಮಾಧಾನದಿಂದ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

Leave a Comment