Vanitha ನಾಲ್ಕನೇ ಮದುವೆಗೆ ಸಿದ್ಧವಾದ ಹೀರೋಯಿನ್; ಬೀಚ್ ಪ್ರಪೋಸ್ ಫೋಟೋ ನೋಡಿ ಫ್ಯಾನ್ಸ್ ಶಾಕ್

Written by Soma Shekar

Published on:

---Join Our Channel---

Vanitha: ತಮಿಳು ಮತ್ತು‌ ತೆಲುಗು ಸಿನಿಮಾಗಳಲ್ಲಿ ಹೆಸರನ್ನು ಮಾಡಿರುವ ಹಿರಿಯ ನಟ ವಿಜಯ್ ಕುಮಾರ್ ಮತ್ತು ನಟಿ ಮಂಜುಳಾ ಅವರ ಹಿರಿಯ ಮಗಳು ವನಿತಾ (Vanitha) ನಾಲ್ಕನೇ ಮದುವೆಗೆ ಸಜ್ಜಾಗಿದ್ದು, ಎಲ್ಲರಿಗೂ ಶಾಕ್ ನೀಡಿದ್ದಾರೆ. ವನಿತಾ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಕಾರಣಗಳಿಂದಲೇ ಸುದ್ದಿಯಾಗುತ್ತಾರೆ. ವನಿತಾ ತಮ್ಮ ಮದುವೆ ವಿಚಾರಗಳಿಂದಲೂ ಚರ್ಚೆಗೆ ಒಳಗಾಗುತ್ತಾರೆ.

ವನಿತಾ ವಿಜಯಕುಮಾರ್ ತಮ್ಮ ಮೊದಲ ಪತಿಗೆ ವಿಚ್ಛೇದನ ನೀಡಿದ ಕೆಲವೇ ತಿಂಗಳಲ್ಲಿ ಆನಂದ್ ಜಯರಾಜನ್ ಜೊತೆಗೆ ಎರಡನೇ ಮದುವೆ ಆಗಿದ್ರು. ವನಿತಾ ತನ್ನ ಎರಡನೇ ಪತಿಯಿಂದ ಜಯನಿತಾ ಎಂಬ ಮಗಳನ್ನು ಹೊಂದಿದ್ದಾರೆ. ಆದರೆ 2012ರಲ್ಲಿ ಆನಂದ್‌ ಅವರಿಂದಲೂ ಸಹಾ ವಿಚ್ಛೇದನ ಪಡೆದರು.

ಜೀವನದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ವನಿತಾ ವಿಜಯಕುಮಾರ್ ಮತ್ತೆ ಬೆಳ್ಳಿತೆರೆಗೆ ಬರಲು ನೆರವಾಗಿದ್ದು ತಮಿಳು ಬಿಗ್ ಬಾಸ್.‌ ಅಲ್ಲಿ ಪೀಟರ್ (Peter) ಪರಿಚಯ ಆಯ್ತು. ಅದು ಪ್ರೀತಿಗೆ ತಿರುಗಿ ಪರಿಚಯವು ಪೀಟರ್ ಪಾಲ್ ಜೊತೆಗಿನ ಸ್ನೇಹಕ್ಕೆ ಕಾರಣವಾಯಿತು, ಅದು ಪ್ರೀತಿಗೆ ಕಾರಣವಾಯಿತು ಮತ್ತು 2020 ರಲ್ಲಿ ಮದುವೆಯಲ್ಲಿ ಕೊನೆಗೊಂಡಿತು.

ನಂತರ ವನಿತಾ ವಿಜಯಕುಮಾರ್ ಅವರು ಪೀಟರ್ ಪೌಲ್ ಮದ್ಯ ವ್ಯಸನಿ ಎನ್ನುವ ಕಾರಣಕ್ಕೆ ಮೂರೇ ತಿಂಗಳಿನಲ್ಲಿ ಬೇರ್ಪಟ್ಟರು, ಸಿ‌ನಿಮಾಗಳ ಕಡೆ ಗಮನ ನೀಡಿದರು. ಈಗ ವನಿತಾ ವಿಜಯಕುಮಾರ್ ನಾಲ್ಕನೇ ಮದುವೆಗೆ ರೆಡಿಯಾಗಿದ್ದಾರೆಯೇ ಎನ್ನುವ ಅನುಮಾನ ಮೂಡಿದೆ. ಈ ಅನುಮಾನಕ್ಕೆ ಕಾರಣವೂ ಸಹಾ ಇದೆ.

ಬಿಗ್ ಬಾಸ್ ಸೆಲೆಬ್ರಿಟಿ ರಾಬರ್ಟ್ ಮಾಸ್ಟರ್ ಗೆ (Robert Master) ಬೀಚ್ ನಲ್ಲಿ ಬಿಕಿನಿಯಲ್ಲಿ ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ ವನಿತಾ. ಈ ಫೋಟೋ ವೈರಲ್ ಆಗಿದ್ದು, ಅಕ್ಟೋಬರ್ 5ರಂದು ಮಹತ್ವದ ಮಾಹಿತಿ ಹೊರಬೀಳಲಿದೆ ಎನ್ನಲಾಗಿದೆ. ಇದೊಂದು ಸಿನಿಮಾ‌ ಶೂಟಿಂಗಾ? ಅಥವಾ ಇದು ನಿಜವಾಗಿಯೂ ನಾಲ್ಕನೇ ಮದುವೆಯೇ? ಎನ್ನುವುದು ಸ್ಪಷ್ಟವಾಗಬೇಕಿದೆ.

Bigg Boss ಮನೆಯಿಂದ ಫೈರ್ ಬ್ರಾಂಡ್ ಔಟ್ ? ಕಾನೂನು ಸಂಕಷ್ಟ ಚೈತ್ರ ಕುಂದಾಪುರ ಅವ್ರಿಗೆ ಆಗುತ್ತಾ ತೊಡಕು

Leave a Comment