Bigg Boss ಮನೆಯಿಂದ ಫೈರ್ ಬ್ರಾಂಡ್ ಔಟ್ ? ಕಾನೂನು ಸಂಕಷ್ಟ ಚೈತ್ರ ಕುಂದಾಪುರ ಅವ್ರಿಗೆ ಆಗುತ್ತಾ ತೊಡಕು

Written by Soma Shekar

Published on:

---Join Our Channel---

Bigg Boss Kannada 11: ಬಿಗ್ ಬಾಸ್ ಕನ್ನಡ 11 (Bigg Boss Kannada 11) ಆರಂಭವಾಗಿ ಎರಡು ದಿನ ಕಳೆದಿದೆ ಅಷ್ಟೇ, ದೊಡ್ಮನೆಗೆ ಒಟ್ಟು 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಈ ಸ್ಪರ್ಧಿಗಳಲ್ಲಿ ಚೈತ್ರ ಕುಂದಾಪುರ ಸಹಾ ಒಬ್ಬರು. ಆದರೆ ಇದೀಗ ಚೈತ್ರ ಕುಂದಾಪುರ (Chaithra Kundapura) ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಚೈತ್ರ ಅವರ ಮೇಲಿರುವ ಹಳೆಯ ದೂರುಗಳಿಂದಾಗಿ ಅವರು ಶೋ ನಲ್ಲಿ ಮುಂದುವರೆಯುವುದು ಅನುಮಾನದಂತೆ ಭಾಸವಾಗುತ್ತಿದೆ.

ಚೈತ್ರ ಕುಂದಾಪುರ ಅವರನ್ನು ಬಿಗ್ ಬಾಸ್ ಆಟದಿಂದ ಕೈ ಬಿಡಬೇಕೆಂದು ಆಗ್ರಹಿಸುತ್ತಾ ನೋಟೀಸ್ ಒಂದನ್ನು ಕಲರ್ಸ್ ವಾಹಿನಿಗೆ ಕಳುಹಿಸಲಾಗಿದೆ ಎನ್ನುವುದಾಗಿ ಮಾದ್ಯಮವೊಂದು ಸುದ್ದಿ ಮಾಡಿದ್ದು, ವಕೀಲ ಭೋಜರಾಜ್ ಎನ್ನುವವರು ಚೈತ್ರ ಕುಂದಾಪುರ್ ಅವರನ್ನು ಕೂಡಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸಬೇಕು ಎಂದಿದ್ದಾರೆ.

ಒಂದು ವೇಳೆ ಅವರನ್ನು ಹೊರಗೆ ಕಳುಹಿಸದೇ ಹೋದಲ್ಲಿ ವಾಹಿನಿ ವಿರುದ್ದ ಕಾನೂನು ಕ್ರಮವನ್ನು ಜರಗಿಸುವುದಾಗಿ ಎಚ್ಚರಿಸಿದ್ದಾರೆ ಎನ್ನಲಾಗಿದೆ. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗೆ ಶೋನಲ್ಲಿ ಅವಕಾಶ ನೀಡಿರುವುದನ್ನು ನೋಟೀಸ್ ನಲ್ಲಿ ಪ್ರಶ್ನೆ ಮಾಡಲಾಗಿದೆ ಎನ್ನಲಾಗಿದೆ.

ಚೈತ್ರ ಅವರ ಮೇಲೆ ಕೇಸ್ ಗಳಿದ್ದು ಅವರನ್ನು ಕಾರ್ಯಕ್ರಮದಲ್ಲಿ ಮುಂದುವರೆಸಿದರೆ ಅದು ಸಮಾಜಕ್ಕೊಂದು ತಪ್ಪು ಸಂದೇಶವನ್ನು ರವಾನೆ ಮಾಡಿದಂತೆ ಆಗುತ್ತದೆ ಎನ್ನುವುದು ವಕೀಲರ ಅಭಿಪ್ರಾಯವಾಗಿದೆ. ಅದೇ ಕಾರಣದಿಂದಲೇ ವಕೀಲ ಭೋಜರಾಜ್ ಅವರು ವಾಹಿನಿಗೆ ಪತ್ರವನ್ನು ರವಾನಿಸದ್ದಾರೆ ಎನ್ನಲಾಗಿದೆ.‌ 

Bigg Boss ಚೈತ್ರ ಕುಂದಾಪುರ ಅವರ ಆ ವಿಷಯದ ಬಗ್ಗೆ ಮಾನಸ ಮಾತು; ಇಬ್ಬರ ನಡುವೆ ಹೊತ್ತಿಕೊಂಡ ಕಿಚ್ಚು

Leave a Comment