Bigg Boss Kannada 11 ರಲ್ಲಿ ಇವರೇ ಸಿಂಹಿಣಿ, ಸಂಗೀತಾ ಶೃಂಗೇರಿಗೆ ಈ ಸ್ಪರ್ಧಿಯನ್ನ ಹೋಲಿಸಿದ ನೆಟ್ಟಿಗರು

Written by Soma Shekar

Published on:

---Join Our Channel---

Bigg Boss Kannada 11 : ಬಿಗ್​ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಆರಂಭವಾಗಿದೆ. ಒಟ್ಟು 17 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಮನೆಯ ಸ್ವರ್ಗ ಮತ್ತು ನರಕಕ್ಕೆ ಎಂಟ್ರಿಯನ್ನು ನೀಡಿದ್ದಾರೆ. ಬಿಗ್ ಬಾಸ್ ಆರಂಭಕ್ಕೆ ಪ್ರೇಕ್ಷಕರಿಂದಲೂ ಸಹಾ ದೊಡ್ಡ ರೆಸ್ಪಾನ್ಸ್ ಸಿಕ್ಕಾಗಿದೆ. ಮನೆಗೆ ಎಂಟ್ರಿ ನೀಡಿದ ಸ್ಪರ್ಧಿಗಳು ಯಾರು, ಅವರ ಹಿನ್ನೆಲೆ ಏನು ಎನ್ನುವುದನ್ನು ಪ್ರೇಕ್ಷಕರು ತಿಳಿದುಕೊಂಡಿದ್ದಾರೆ.

ಸೀಸನ್ ಆರಂಭವಾದ ಕೂಡಲೇ ಸೋಶಿಯಲ್ ಮೀಡಿಯಾಗಳಲ್ಲಿ ಈ ಬಾರಿ ಬಿಗ್ ಬಾಸ್ ಮನೇಲಿ ಇವರೇ ಸಿಂಹಿಣಿ ಆಗೋದು ಅಂತಾ ಒಂದಷ್ಟು ಜನ ಅನಿಸಿಕೆಗಳನ್ನ ಶೇರ್ ಮಾಡೋದಕ್ಕೆ ಆರಂಭ ಮಾಡಿದ್ದು, ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಈ ಸ್ಪರ್ಧಿ ಬಿಗ್ ಬಾಸ್ ಮನೆಯೊಳಗೆ ಘರ್ಜಿಸೋದು ಖಚಿತ ಅಂತಿದ್ದಾರೆ ನೆಟ್ಟಿಗರು. ಹೀಗೆ ನೆಟ್ಟಿಗರು ಹೇಳ್ತಿರೋದು ಯಾರು ಬಗ್ಗೆ ಅನ್ನೋದಾದ್ರೆ ಅದು ಮತ್ಯಾರು ಅಲ್ಲ ಚೈತ್ರ ಕುಂದಾಪುರ (Chaitra Kundapura) ಅವರೇ ಆಗಿದ್ದಾರೆ.‌ ಚೈತ್ರ ಅವರು ನೆಟ್ಟಿಗರ ಈ ಅಭಿಪ್ರಾಯವನ್ನು ನಿಜ ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ.

ಜೋರು ಮಾತು, ದೊಡ್ಡ ಧ್ವನಿಯಿಂದ ವೇದಿಕೆಗಳ ಮೇಲೆ ಭಾಷಣ ಮಾಡಿ ಜನ ಮನ ಗೆದ್ದಿದ್ದ ಚೈತ್ರ ಕುಂದಾಪುರ ಅವರು ಬಿಗ್ ಬಾಸ್ ನಲ್ಲೂ ಸಹಾ ಅಬ್ಬರಿಸುತ್ತಾರೆ ಅನ್ನೋದು ಈಗ ಅವರ ಅಭಿಮಾನಿಗಳು ಮತ್ತು ನೆಟ್ಟಿಗರ ನಿರೀಕ್ಷೆಯಾಗಿದೆ. ಈ ನಿರೀಕ್ಷೆ ನಿಜವಾಗುತ್ತಾ ಅನ್ನೋದು ಈಗ ನಿರೀಕ್ಷೆಯಾಗಿದೆ.

Bipasha Bash ಲವರ್ ಗಾಗಿ ಹದಿಹರೆಯದಲ್ಲೇ ಆ ಕೆಲಸವನ್ನು ಮಾಡಿದ್ದೆ, ಬಿಪಾಶ ಹೇಳಿದ ಶಾಕಿಂಗ್ ಮಾತು

Leave a Comment