ಬ್ಲರ್ ಇಮೇಜ್ ಅವರದ್ದೇ, ಬಿಗ್ ಬಾಸ್ ಮನೆಗೆ Sara Annaiah? ಅಮೃತಧಾರೆ ಸೀರಿಯಲ್ ನಲ್ಲಿ ಮಿಸ್ ಆಗಿದ್ದು ಅದಕ್ಕೆ

Written by Soma Shekar

Published on:

---Join Our Channel---

Sara Annaiah : ಬಿಗ್ ಬಾಸ್ (Bigg Boss) ಆರಂಭ ಆಗೋ ಸಮಯದಲ್ಲಿ ಸೀರಿಯಲ್ ಗಳಲ್ಲಿ ಯಾವುದಾದ್ರೂ ಪಾತ್ರಗಳು ಇದ್ದಕ್ಕಿದ್ದ ಹಾಗೆ ಮಿಸ್ ಆದ್ರೆ ಪ್ರೇಕ್ಷಕರಿಗೆ ಬರುವ ಸಹಜವಾದ ಅನುಮಾನ ಆ ಕಲಾವಿದರು ಬಿಗ್ ಬಾಸ್ ಮನೆಗೇನಾದ್ರೂ ಹೋಗ್ತಾ ಇರಬಹುದಾ? ಅನ್ನೋದೇ ಆಗಿರುತ್ತೆ. ಅಂತಹ ಅನುಮಾನ ಈಗಲೂ ಕೂಡಾ ಪ್ರೇಕ್ಷಕರನ್ನು ಕಾಡ್ತಿದೆ.

ಲಕ್ಷ್ಮೀ ನಿವಾಸ ಸೀರಿಯಲ್ ನ ಲಕ್ಷ್ಮೀ ಪಾತ್ರದ ನಟಿ ಶ್ವೇತಾ ಅವರು ಇತ್ತೀಚಿಗೆ ಸೀರಿಯಲ್ ನಲ್ಲಿ ಕಾಣಿಸಿಕೊಳ್ತಿಲ್ಲ. ಇದನ್ನ ನೋಡಿ ಅನೇಕರು ಬಹುಶಃ ಅವರು ಸೀರಿಯಲ್ ಬಿಟ್ಟಿರಬೇಕು, ಅವರು ಬಿಗ್ ಬಾಸ್ ಗೆ ಎಂಟ್ರಿ ಕೊಡಬಹುದು ಎಂದೆಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಗಳನ್ನ ಮಾಡಿದ್ದನ್ನು ನೋಡಬಹುದಾಗಿದೆ.

ಈಗ ಇವೆಲ್ಲವುಗಳ ಬೆನ್ನಲ್ಲೇ ಪ್ರಸ್ತುತ ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ಗೌತಮ್ ದೀವಾನ್ ತಂಗಿ ಮಹಿಮಾ ಪಾತ್ರ ಮಾಡ್ತಿರೋ ನಟಿ ಸಾರಾ ಅಣ್ಣಯ್ಯ (Sara Annaiah) ಬಿಗ್ ಬಾಸ್ ಗೆ ಬರ್ತಾರೆ ಅನ್ನೋ ಅನುಮಾನವೊಂದು ಎಲ್ಲರಿಗೂ ಮೂಡಿದೆ. ಇದಕ್ಕೆ ಕಾರಣ ಇತ್ತೀಚಿನ ಎಪಿಸೋಡ್ ಗಳಲ್ಲಿ ಮಹಿಮಾ ಮತ್ತು ಜೀವ ಜೋಡಿಯು ಕಾಣಿಸಿಕೊಂಡಿಲ್ಲ.

ಮಲ್ಲಿ ಸೀಮಂತ ಆಯ್ತು, ಮಲ್ಲಿಗೆ ಆ್ಯಕ್ಸಿಡೆಂಟ್ ಆಗಿ ಸಾವಿನ ಜೊತೆ ಗೆದ್ದು ಬಂದಳು. ಆದ್ರೆ ಇಷ್ಟೆಲ್ಲಾ ನಡೀತಾ ಇದ್ರು ಮಹಿಮಾ ಪಾತ್ರ ಮಾತ್ರ ಎಲ್ಲೂ ಕಾಣಿಸಿಕೊಂಡೇ ಇಲ್ಲ. ಪ್ರಮುಖ ಸನ್ನಿವೇಶಗಳಲ್ಲೇ ಮುಖ್ಯ ಪಾತ್ರ ಕಾಣಿಸಿಕೊಂಡಿಲ್ಲ ಅಂದ್ರೆ ಬಹುಶಃ ನಟಿ ಬಿಗ್ ಬಾಸ್ ಗೆ ಎಂಟ್ರಿ ನೀಡಬಹುದು, ಪ್ರೊಮೊದಲ್ಲಿ ಬ್ಲರ್ ಆಗಿ ತೋರಿಸಿದ ಸ್ಪರ್ಧಿಗಳಲ್ಲಿ ಸಾರಾ ಇದ್ದಾರೆ ಅನ್ನೋದೇ ಅನೇಕರ ಗಟ್ಟಿ ನಂಬಿಕೆಯಾಗಿದೆ.

ಒಂದಲ್ಲಾ ಎರಡಲ್ಲಾ ಈ ಸಲ ಬರೋಬ್ಬರಿ 9 ವೈಲ್ಡ್ ಕಾರ್ಡ್ ಎಂಟ್ರಿ Bigg Boss ನಲ್ಲಿ ಬಿಗ್ ಶಾಕಿಂಗ್ ಟ್ವಿಸ್ಟ್

Leave a Comment