Bigg Boss Kannada ಈ ಬಾರಿ ಒಂದಲ್ಲ ಎರಡು ಮನೆ, ಸ್ವರ್ಗ, ನರಕ ಎರಡೂ ಇಲ್ಲೇ; ಬಿಗ್ ಬಾಸ್ ಹೊಸ ಟ್ವಿಸ್ಟ್

Written by Soma Shekar

Published on:

---Join Our Channel---

Bigg Boss Kannada ಬಿಗ್ ಬಾಸ್ ನ ಹೊಸ ಸೀಸನ್ (Bigg Boss Kannada) ಬರ್ತಿದೆ ಎಂದ್ರೆ ನಿರೀಕ್ಷೆಗಳು ದುಪ್ಪಟ್ಟಾಗುತ್ತದೆ. ಈಗಾಗಲೇ ಯಶಸ್ವಿ ಹತ್ತು ಸೀಸನ್ ಮುಗಿಸಿರುವ ಕನ್ನಡ ಬಿಗ್ ಬಾಸ್ ನ ಹನ್ನೊಂದನೇ ಸೀಸನ್ ಗೆ ಸಿದ್ಧತೆಗಳು ಭರ್ಜರಿಯಾಗಿ ನಡೆದಿದೆ. ಈ ಬಾರಿಯೂ ಪ್ರತಿ ಬಾರಿಯಂತೆ ಬಿಗ್ ಬಾಸ್ ಮನೆ ಕಾನ್ಸೆಪ್ಟ್ ಗೆ ತಕ್ಕ ಹಾಗೆ ಬದಲಾಗಿದೆ ಅನ್ನೋದು ಹೊಸ ಪ್ರೊಮೋದಲ್ಲಿ ಕಂಡಿದೆ.

ಬಿಗ್ ಬಾಸ್ ಸ್ಪರ್ಧಿಗಳಿಗೆ ಮಾತ್ರವೇ ಅಲ್ಲ ಪ್ರೇಕ್ಷಕರಿಗೆ ಸಹಾ ಸೀಸನ್ ಆರಂಭವಾಗೋ ಮೊದಲ ದಿನ ಮನೆಯನ್ನ ಪರಿಚಯಿಸಲಾಗುತ್ತದೆ. ಆದರೆ ಈ ಬಾರಿ ಎರಡು ಮನೆ ಇರಲಿದೆ ಎನ್ನುವ ಸುಳಿವನ್ನು ಪ್ರೊಮೊ ಮೂಲಕ ಕೊಟ್ಟ ಹಾಗೆ ಕಾಣ್ತಿದೆ. ಪ್ರೊಮೊ ನೋಡಿದವರು ಅದನ್ನು ಈಗಾಗಲೇ ಗೆಸ್ ಮಾಡ್ತಾ ಇದ್ದಾರೆ.

ಇಲ್ಲೇ ಸ್ವರ್ಗ, ಇಲ್ಲೇ ನರಕ ಅಂತ ಹೇಳಿರೋದನ್ನ ನೋಡಿದಾಗ, ಒಂದು ಕಡೆ ಒಳ್ಳೆಯವರು ಮತ್ತೊಂದು ಕಡೆ ಕೆಟ್ಟವರು ಇರಬಹುದೇನೋ ಎಂದು ಊಹಿಸಬಹುದಾಗಿದೆ.. ಇವರ ನಡುವೆ ಕಿಚ್ಚು ಹೊತ್ತಿಸುವ ಕೆಲಸವನ್ನು ಟಾಸ್ಕ್ ಗಳನ್ನು ನೀಡುವ ಮೂಲಕ ಬಿಗ್ ಬಾಸ್ ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ.

ಸೀಸನ್ ಹತ್ತರಲ್ಲೂ ಸಮರ್ಥರು ಮತ್ತು ಅಸಮರ್ಥರು ಎನ್ನುವ ಗುಂಪುಗಳಿದ್ದವು. ಆದರೆ ಅಸಮರ್ಥರಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟವರು ಅನಂತರ ಸಮರ್ಥರನ್ನೇ ಮೀರಿಸುವ ಮಟ್ಟಕ್ಕೆ ಸದ್ದು ಸುದ್ದಿ ಮಾಡಿದ್ದರು. ಅಲ್ಲದೇ ಅಸಮರ್ಥನಾಗಿ ಎಂಟ್ರಿ ಕೊಟ್ಟ ಕಾರ್ತಿಕ್ ಮಹೇಶ್ (Karthik Mahesh) ಬಿಗ್ ಬಾಸ್ ಗೆದ್ದಿದ್ದರು.

Dasara Elephants ದಸರಾ ಆನೆಗಳ ಜೊತೆ ರೀಲ್ಸ್ ಗೆ ಮುಂದಾದ ಜನ; ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ

Leave a Comment