Bigg Boss ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ಬ್ಯೂಟಿ, ಏನೀ ಬೆಡಗಿಯ ವಿಶೇಷ, ಅಷ್ಟೊಂದು ಫೇಮಸ್ಸಾ?

Written by Soma Shekar

Published on:

---Join Our Channel---

Bigg Boss : ಬಿಗ್ ಬಾಸ್ (Bigg Boss) ತೆಲುಗು ಸೀಸನ್ 8 ರ ಮೂರನೇ ವಾರಾಂತ್ಯ ಬಂದಿದೆ. ಈ ವಾರ ಮನೆಯಿಂದ ಹೊರಗೆ ಹೋಗೋದು ಯಾರು ಅನ್ನೋದು ಇನ್ನು ಕೆಲವೇ ಗಂಟೆಗಳಲ್ಲಿ ರಿವೀಲ್ ಆಗಲಿದೆ. ಎರಡು ದಿನಗಳಿಂದ ಬಿಗ್ ಬಾಸ್ ಮನೆಯಲ್ಲಿ ನಡೀತಿದ್ದ ಪದ್ಮಾವತಿ 2.0 ಟಾಸ್ಕ್ ಮುಗಿದಿದ್ದು ನಿಖಿಲ್ ಮತ್ತೊಮ್ಮೆ ಮನೆಯ ಮುಖ್ಯಸ್ಥ ಪಟ್ಟ ಪಡೆದುಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಿಂದ ಈಗಾಗಲೇ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಇವತ್ತು ಮೂರನೇ ಸ್ಪರ್ಧಿಯ ಸರದಿಯಾಗಿದೆ. ಈ ವಾರ ಪೃಥ್ವಿ (Prithvi) ಮತ್ತು ಅಭಯ್ (Abhay) ಅಪಾಯದಲ್ಲಿದ್ದಾರೆ. ಬಹುತೇಕ ಎಲ್ಲರೂ ಕೂಡಾ ಅಭಯ್ ಮನೆಯಿಂದ ಹೊರ ಬರೋದು ಪಕ್ಕಾ ಅಂತಾನೇ ಹೇಳ್ತಿದ್ದಾರೆ.

ಈ ವೇಳೆ ಸ್ಪರ್ಧಿಗಳ ಸಂಭಾವನೆ ಕುರಿತಾದ ಒಂದು ವಿಚಾರ ಸಖತ್ ಸದ್ದು ಮಾಡಿದೆ. ಈ ಸೀಸನ್ ನಲ್ಲಿ ಆದಿತ್ಯ ಓಂ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿಗಳ ನಡುವೆಯೇ ಇಲ್ಲ ವಿಷ್ಣು ಪ್ರಿಯ (Vishnu Priya) ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವುದಾಗಿಯೂ ಸುದ್ದಿಗಳು ಹರಿದಾಡುತ್ತಿದೆ.

ತೆಲುಗಿನಲ್ಲಿ ಈಗಾಗಲೇ ನಿರೂಪಕಿಯಾಗಿ ಸಾಕಷ್ಟು ಹೆಸರು ಮಾಡಿರುವ ವಿಷ್ಣು ಪ್ರಿಯಾ ಬಿಗ್ ಬಾಸ್ 8 ತೆಲುಗು ಶೋನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿ ಎನ್ನಲಾಗಿದ್ದು, ಸುದ್ದಿಗಳ ಪ್ರಕಾರ ಅವರು ವಾರಕ್ಕೆ 5.5 ಲಕ್ಷ ರೂ.. 18% GST ಜೊತೆಗೆ ಒಟ್ಟು 6.49 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

Krithi Shetty: ಸೋತು ಸೊರಗಿದ್ದ ಕೃತಿಗೆ ಸಿಕ್ತು ದೊಡ್ಡ ಗೆಲುವು, ಆದರೆ ತೆಲುಗು ಸಿನಿಮಾದಲ್ಲಿ ಅಲ್ಲ ಅನ್ನೋದು ನಿಜ

Leave a Comment