Krithi Shetty: ಸೋತು ಸೊರಗಿದ್ದ ಕೃತಿಗೆ ಸಿಕ್ತು ದೊಡ್ಡ ಗೆಲುವು, ಆದರೆ ತೆಲುಗು ಸಿನಿಮಾದಲ್ಲಿ ಅಲ್ಲ ಅನ್ನೋದು ನಿಜ

Written by Soma Shekar

Published on:

---Join Our Channel---

Kriti Shetty: ಕರಾವಳಿ ಬೆಡಗಿ ಕೃತಿ ಶೆಟ್ಟಿ (Kriti Shetty) ಟಾಲಿವುಡ್​ನಲ್ಲಿ (Tollywood) ಮೊದಲ ಸಿನಿಮಾದ ಮೂಲಕವೇ ದೊಡ್ಡ ಹೆಸರನ್ನು ಮಾಡಿದ ನಟಿ. ಉಪ್ಪೆನ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಈ ನಟಿ ಆ ಸಿನಿಮಾದ ಮೂಲಕ ದೊಡ್ಡ ಗೆಲುವನ್ನು ಪಡೆದುಕೊಂಡರು. ಆ ಸಿನಿಮಾ ನಂತರ ಸಾಲು ಸಾಲು ಅವಕಾಶಗಳು ನಟಿಯನ್ನು ಅರಸಿ ಬಂದವು.

ಕೃತಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರೂ ಮೊದಲ ಸಿನಿಮಾದಂತೆ ದೊಡ್ಡ ಗೆಲುವು ಮಾತ್ರ ಸಿಕ್ಕಿಲ್ಲ. ನಟಿಯ ಸಿನಿಮಾಗಳು ಸೋಲಿನ ಹಾದಿಯನ್ನು ಹಿಡಿದ ಹಿನ್ನೆಲೆಯಲ್ಲಿ ನಟಿಗೆ ತೆಲುಗಿನಲ್ಲಿ ಇತ್ತೀಚಿಗೆ ಅವಕಾಶಗಳು ಸಹಾ ಕಡಿಮೆಯಾಗಿತ್ತು. ಇವೆಲ್ಲವುಗಳ ನಡುವೆ ನಟಿ ಮಲೆಯಾಳಂ ಸಿನಿಮಾ ರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.

ಕೃತಿ ಶೆಟ್ಟಿ ಮಲೆಯಾಳಂನ ‘ಅಜಯಂತೆ ರಂದಮ್ ಮೋಷನಮ್’ ಸಿನಿಮಾದಲ್ಲಿ ನಟಿಸಿದ್ದರು, ಈ ಸಿನಿಮಾ ದೊಡ್ಡ ಗೆಲುವನ್ನು ಕಂಡಿದ್ದು, ಕೃತಿ ಮಲೆಯಾಳಂ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದಿದ್ದಾರೆ. ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದು ಮಲೆಯಾಳಂನಲ್ಲಿ ಕೃತಿಗೆ ಮೊದಲ ಸಿನಿಮಾದಲ್ಲಿ ಗೆಲುವು ಸಿಕ್ಕಿದೆ.

ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಕೊಟ್ಟಿದ್ದ ನಟಿಗೆ ಈಗ ಮಲೆಯಾಳಂ ನಲ್ಲಿ ಸಿಕ್ಕ ಗೆಲುವು ಖುಷಿಯನ್ನು ನೀಡಿದೆ. ಮುಂದೆ ನಟಿ ಮಲೆಯಾಳಂ ಸಿನಿಮಾಗಳಲ್ಲಿ ಹೆಚ್ಚು ನಟಿಸುವರೋ ಅಥವಾ ತೆಲುಗಿನಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿಯುವರೋ ಕಾದು ನೋಡಬೇಕಾಗಿದೆ.

ಕೊನೆಯ ದಿನದ ಶೂಟಿಂಗ್ ಮುಕ್ತಾಯ, ಗೆಟ್ ಟು ಗೆದರ್ ಮಾಡಿದ ಖುಷಿ ಪಟ್ಟ Antarapata Serial Team

Leave a Comment