Samantha: ತೆಲುಗು, ತಮಿಳು ಸಿನಿಮಾಗಳಲ್ಲಿ ಟಾಪ್ ಹೀರೋಯಿನ್ ಆಗಿ ಗುರ್ತಿಸಿಕೊಂಡಿದ್ದ ನಟಿ ಸಮಂತಾ (Samanatha) ಮತ್ತು ನಾಗಚೈತನ್ಯ ಪ್ರೀತಿ, ಮದುವೆ, ವಿಚ್ಚೇದನ ಎಲ್ಲವೂ ಮುಗಿದ ಅಧ್ಯಾಯ. ಈಗಾಗಲೇ ನಾಗಚೈತನ್ಯಗೆ (Nagachaitanya) ಶೋಭಿನಾ ಮೇಲೆ ಲವ್ ಆಗಿ ನಿಶ್ಚಿತಾರ್ಥ ಕೂಡಾ ನಡೆದಾಗಿದೆ. ಆದರೆ ಸಮಂತಾ ಮಾತ್ರ ಇನ್ನೂ ಸಿಂಗಲ್ ಆಗೇ ಇದ್ದಾರೆ ಅನ್ನೋದು ನಿಜ.
ವಿಚ್ಛೇದನದ ನಂತರ ಸಮಂತಾ ಸಿನಿಮಾಗಳ ಸೋಲು, ಆರೋಗ್ಯ ಸಮಸ್ಯೆ ಹೀಗೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಆರೋಗ್ಯದ ಸುಧಾರಣೆಗಾಗಿ ನಟಿ ಸ್ವಲ್ಪ ಸಮಯ ಸಿನಿಮಾಗಳಿಂದ ದೂರ ಉಳಿದರು. ಖುಷಿ ಸಿನಿಮಾ ನಂತರ ನಟಿ ಯಾವುದೇ ಹೊಸ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ.
ಅಭಿಮಾನಿಗಳು ನಟಿಯನ್ನು ಬೆಳ್ಳಿ ತೆರೆಯ ಮೇಲೆ ನೋಡಲು ಕಾಯುತ್ತಿದ್ದಾರೆ. ಪ್ರಸ್ತುತ ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ಸಮಂತಾ ಒಂದು ಕಡೆ ವೆಬ್ ಸಿರೀಸ್ ಗಳಲ್ಲಿ ಬ್ಯುಸಿ ಇರುವಾಗಲೇ ಮತ್ತೊಂದು ಕಡೆ ಹೊಸ ಹೊಸ ಸಿನಿಮಾಗಳಲ್ಲಿ ಹಸಿರು ನಿಶಾನೆಯನ್ನು ತೋರಿಸಿದ್ದಾರೆ.
ಹೊಸ ಪೋಸ್ಟ್ ಶೇರ್ ಮಾಡಿದ ಸಮಂತಾ, ಕನಸು ಕಾಣುವುದನ್ನು ಎಂದಿಗೂ ನಿಲ್ಲಿಸಬೇಡಿ. ಸ್ವಲ್ಪ ಸಮಯದ ನಂತರ ಚಿತ್ರದ ಸೆಟ್ ಗೆ ಮರಳಲು ಸಂತೋಷವಾಗಿದೆ ಎಂದು ಬರೆದುಕೊಂಡು ಕಾಫಿ ಕಪ್ ಮತ್ತು ಪುಸ್ತಕದ ಪೋಟೋ ಶೇರ್ ಮಾಡಿಕೊಂಡಿದ್ದಾರೆ. ಆದರೆ ನಟಿ ಯಾವ ಸಿನಿಮಾ ಎಂದು ತಿಳಿಸಿಲ್ಲ.