Virat Kohli: ಲಂಡನ್ ನಲ್ಲೇ ಇದ್ರು ದೇಶದ ಪ್ರತಿಷ್ಠಿತ ಶಾಲೆಗೆ ಮಗಳನ್ನು ಸೇರಿಸಿದ ವಿರಾಟ್ ಕೊಹ್ಲಿ ಅನುಷ್ಕಾ ದಂಪತಿ

Written by Soma Shekar

Published on:

---Join Our Channel---

Virat Kohli: ಇಂಡಿಯನ್ ಕ್ರಿಕೆಟ್ ಸ್ಟಾರ್ ವಿರಾಟ್ ಕೊಹ್ಲಿ (Virat Kohli) ಮತ್ತು ಅವರ ಪತ್ನಿ ನಟಿ ಅನುಷ್ಕಾ ಶರ್ಮಾ (Anushka Sharma) ಪ್ರಸ್ತುತ ಲಂಡನ್ ನಲ್ಲಿ ವಾಸವಾಗಿದ್ದಾರೆ. ಸಾಮಾನ್ಯ ಜನರಂತೆ ಜೀವನ ಮಾಡಲು ಪತಿ ಪತ್ನಿ ಇಬ್ಬರೂ ಕಳೆದ ಕೆಲವು ಸಮಯದಿಂದಲೂ ಸಹಾ ಲಂಡನ್ ನಲ್ಲೇ (London) ವಾಸವಾಗಿದ್ದಾರೆ. ಈ ವಿಚಾರವನ್ನು ಅವರು ಸಂದರ್ಶನವೊಂದರಲ್ಲಿ ಸಹಾ ಹೇಳಿಕೊಂಡಿದ್ದರು.

ಸೋಶಿಯಲ್ ಮೀಡಿಯಾಗಳಲ್ಲಿ ವಿರಾಟ್ ಕೊಹ್ಲಿ ಅವರು ಲಂಡನ್ ನಲ್ಲಿ ರಸ್ತೆಗಳಲ್ಲಿ ಓಡಾಡುತ್ತಿದ್ದ ಫೋಟೋಗಳು ಸಹಾ ವೈರಲ್ ಆಗಿತ್ತು. ಇವೆಲ್ಲವುಗಳ ನಡುವೆ ಈಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಮಗಳು ವಾಮಿಕಾ ಕುರಿತಾದ ಆಸಕ್ತಿಕರ ವಿಷಯವೊಂದು ಸುದ್ದಿಯಾಗಿದೆ.

ಮೂರನೇ ವರ್ಷಕ್ಕೆ ಕಾಲಿಟ್ಟಿರುವ ಮಗಳನ್ನು ಶಾಲೆಗೆ ಸೇರಿಸಲು ವಿರಾಟ್ ಮತ್ತು ಅನುಷ್ಕಾ ನಿರ್ಧಾರ ಮಾಡಿದ್ದು, ಭಾರತದ ಪ್ರತಿಷ್ಠಿತ ಶಾಲೆಯಲ್ಲಿ (Prestigious School) ಮಗಳ ದಾಖಲಾತಿಯನ್ನು ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿರಾಟ್ ಮತ್ತು ಅನುಷ್ಕಾ ದಂಪತಿವಮುಂಬೈನ ಹೆಸರಾಂತ ಧೀರೂಭಾಯಿ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಮಗಳು ವಮಿಕಾ ದಾಖಲಾತಿಯನ್ನು ಮಾಡಿಸಿದ್ದಾರೆ ಎನ್ನುವುದಾಗಿ ಪ್ರಮುಖ ಮಾದ್ಯಮವೊಂದು ವರದಿಯನ್ನು ಮಾಡಿದ್ದು ಎಲ್ಲರ ಗಮನ ಸೆಳೆದಿದೆ.

Leave a Comment