Bigg Boss Kannada: ಬಿಗ್ ಬಾಸ್ ಮನೆಗೆ ಇಬ್ಬರು ಸ್ಪರ್ಧಿಗಳ ನೇರ ಎಂಟ್ರಿ, ಗಿಚ್ಚಿ ಗಿಲಿಗಿಲಿ ಟು Bigg Boss Kannada 11

Written by Soma Shekar

Published on:

---Join Our Channel---

Bigg Boss Kannada: ಕಿರುತೆರೆಯ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Kannada) ಹೊಸ ಪ್ರೊಮೋ ನಿನ್ನೆ ಬಿಡುಗಡೆ ಆಗಿದೆ, ಕಿಚ್ಚ ಸುದೀಪ್ ಅವರೇ ನಿರೂಪಕ ಅಂತ ತಿಳಿದು ಪ್ರೇಕ್ಷಕರು ಖುಷಿ ಪಟ್ಟಿದ್ದಾರೆ. ಇದೇ ವೇಳೆ ನಿನ್ನೆ ಗಿಚ್ಚಿ ಗಿಲಿಗಿಲಿ ಸೀಸನ್ 3 ಭರ್ಜರಿಯಾಗಿ ಮುಕ್ತಾಯ ಆಗಿದ್ದು, ಆ್ಯಕ್ಟರ್ ವಿಭಾಗದಲ್ಲಿ ಹುಲಿ ಕಾರ್ತಿಕ್ (Huli Karthik) ವಿನ್ನರ್ ಆಗಿದ್ದಾರೆ.

ನಾನ್ ಆ್ಯಕ್ಟರ್ ವಿಭಾಗದಲ್ಲಿ ಮಾನಸ (Manasa) ಅವರು ರನ್ನರ್ ಅಪ್ ಆಗಿದ್ದಾರೆ. ಇವರಿಗೆ ಸಿಕ್ಕ ಬಹುಮಾನ ಎಷ್ಟು ಎನ್ನುವುದಾದರೆ ವಿನ್ನರ್ ಹುಲಿ ಕಾರ್ತಿಕ್ ಅವರು 10 ಲಕ್ಷ ರೂ. ನಗದು ಮತ್ತು ವಿಶೇಷ ಸ್ಮರಣಿಕೆಯನ್ನು ಪಡೆದುಕೊಂಡಿದ್ದಾರೆ. ತುಕಾಲಿ ಸಂತೋಷ್ ಅವರ ಪತ್ನಿ ಮಾನಸ ಅವರಿಗೆ 3 ಲಕ್ಷ ರೂ. ನಗದು ಬಹುಮಾನ ದೊರೆತಿದೆ.

ಇದೇ ತಿಂಗಳ ಕೊನೆಯಲ್ಲಿ ಬಿಗ್ ಬಾಸ್ ಸೀಸನ್ ಹನ್ನೊಂದು ಆರಂಭವಾಗುತ್ತಿದ್ದು, ಗಿಚ್ಚಿ ಗಿಲಿ ಗಿಲಿಯಿಂದ (Gichchi Gili Gili) ಹುಲಿ ಕಾರ್ತಿಕ್ ಮತ್ತು ಮಾನಸ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡೋದು ಪಕ್ಕಾ ಎಂದು ಹೇಳಲಾಗ್ತಿದೆ. ಕಳೆದ ಸೀಸನ್ ನಲ್ಲಿ ಮಾನಸ ಕುಟುಂಬ ಸದಸ್ಯರ ಎಂಟ್ರಿಯ ವಾರದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು.

ಈ ಬಾರಿ ಅವರು ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಹೋಗಬಹುದು ಎನ್ನುವ ನಿರೀಕ್ಷೆ ಅನೇಕರಿಗಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಎಂಟ್ರಿ ಕೊಡ್ತಾರೆ ಅನ್ನೋದನ್ನ ನೋಡೋದಕ್ಕೆ ಬಿಗ್ ಬಾಸ್ ಶೋ ಅಭಿಮಾನಿಗಳು ಸಹಾ ಕಾಯ್ತಿದ್ದು, ಸಂಭಾವ್ಯ ಸ್ಪರ್ಧಿಗಳ ಕುರಿತು ಈ ಬಾರಿ ಇನ್ನೂ ಹೆಚ್ಚು ಸುದ್ದಿಯಾಗಿಲ್ಲ ಅನ್ನೋದು ವಿಶೇಷ ಎನಿಸಿದೆ.

Srirastu Shubhamastu: ತುಳಸಿಗೆ ಭಯ, ಮುಜುಗರ ಆದ್ರೆ ಪ್ರೇಕ್ಷಕರಿಗೆ ಅಸಮಾಧಾನ, ಇದೆಲ್ಲಾ ಬೇಕಾ, ಅಸಹ್ಯ ಎಂದ ನೆಟ್ಟಿಗರು

Leave a Comment