Ananya Pandey: ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ, ದನಿ ಎತ್ತಿದ ಬಾಲಿವುಡ್ ಬ್ಯೂಟಿ ಅನನ್ಯ ಪಾಂಡೆ

Written by Soma Shekar

Published on:

---Join Our Channel---

Ananya Pandey: ಹೇಮಾ ಸಮಿತಿ ವರದಿ (Hema Committee Report) ಹೊರಬಂದ ಮೇಲೆ ಮಾಲಿವುಡ್ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಮಹಿಳೆಯರ ಸುರಕ್ಷತೆಗಾಗಿ ಇಂತಹ ಸಮಿತಿಗಳು ಬೇರೆಲ್ಲಾ ಭಾಷೆಯ ಸಿನಿಮಾ ರಂಗದಲ್ಲೂ ಇರಬೇಕೆನ್ನುವುದು ಈಗ ಅನೇಕರ ಒತ್ತಾಯವಾಗಿದೆ. ಈಗ ಬಾಲಿವುಡ್ ಬೆಡಗಿ ಅನನ್ಯ ಪಾಂಡೆ (Ananya Pandey) ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಅನನ್ಯ ಪಾಂಡೆ ನಟಿಯರಿಗೆ ಸುರಕ್ಷತೆ ಬೇಕಿದೆ ಎಂದು ಮಾತನಾಡಿದ್ದಾರೆ.‌

ಸಮಾರಂಭ ಒಂದರಲ್ಲಿ ಮಾತನಾಡಿದ ನಟಿ, ಸಿನಿಮಾ ರಂಗದಲ್ಲಿ ಕೆಲಸ ಮಾಡುವ ಮಹಿಳೆಯರಿಗಾಗಿಯೇ ಹೇಮಾ ಸಮಿತಿಯಂತಹ ಸಂಸ್ಥೆಗಳು ಬರಬೇಕೆಂದು ಹೇಳಿದ್ದು, ಪ್ರತಿ ಉದ್ಯಮದಲ್ಲೂ ಹೇಮಾ ಸಮಿತಿಯಂತಹ ಸಮಿತಿ ಇರುವುದು ಬಹಳ ಮುಖ್ಯ ಎಂದಿದ್ದಾರೆ. ಸಮಿತಿಗಳು ಬಂದಾಗ ವಿವಿಧ ಉದ್ಯಮಗಳಲ್ಲಿ ಮಹಿಳೆಯರು ಸೇರುತ್ತಾರೆ.

ಅಲ್ಲಿ ಅವರ ಸುರಕ್ಷತೆಗಾಗಿ ಅಗತ್ಯ ಇರುವ ಸೌಲಭ್ಯಗಳು ಅವಶ್ಯಕತೆ ಇದೆ ಎನ್ನುವ ಚರ್ಚೆಗಳು ನಡೆಯುತ್ತವೆ ಎಂದಿದ್ದು, ಹೇಮಾ ಸಮಿತಿ ಬಂದ ಮೇಲೆ ಒಂದಷ್ಟು ಬದಲಾವಣೆಗಳಾಗಿವೆ ಎನ್ನುವ ಮಾತನ್ನು ನಟಿ ಅನನ್ಯ ಪಾಂಡೆ ಹೇಳಿದ್ದಾರೆ. ಈಗ ನೀವೇ ನೋಡುತ್ತಿರುವಂತೆ‌‌ ಮಹಿಳೆಯರು ಬಹಳ ಧೈರ್ಯವಾಗಿ ಕಿರುಕುಳದ ವಿರುದ್ಧ ಧ್ವನಿ ಎತ್ತಿದ್ದಾರೆ.

ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದಾರೆ.
ಈ ವಿಷಯವು ಚಿತ್ರರಂಗಕ್ಕೆ ಮಾತ್ರ ಮೀಸಲಾಗಿಲ್ಲ. ಇಂದು ಅನೇಕ ಸಹಾಯವಾಣಿ ಸಂಖ್ಯೆ, ಯೋಜನೆಗಳು ಮಹಿಳೆಯರಿಗಾಗಿ‌ ಇವೆ. ಮಹಿಳೆಯರ ಸುರಕ್ಷತೆಗಾಗಿ ಕೆಲವು ವಿಭಾಗಗಳನ್ನು ಮಾಡಿದ್ದಾರೆ. ನಮ್ಮ ಕಾಲ್‌ ಶೀಟ್‌ನಲ್ಲಿಯೂ ಸಹಾಯವಾಣಿ ಸಂಖ್ಯೆಗಳಿವೆ. ನೀವು ಅನಾಮಧೇಯವಾಗಿ ದೂರು ನೀಡಬಹುದು ಎಂದು ನಟಿ ತಿಳಿಸಿದ್ದಾರೆ

Leave a Comment