Actress Trisha: ಸಮಂತಾ, ರಶ್ಮಿಕಾ, ಪೂಜಾ ಎಲ್ಲರನ್ನೂ ಹಿಂದೆ ಹಾಕಿದ ತ್ರಿಷಾ, ಯುವನಟಿಯರಿಗೂ ಟಕ್ಕರ್ ಕೊಟ್ಟ ತ್ರಿಷಾ

Written by Soma Shekar

Published on:

---Join Our Channel---

Actress Trisha: ದಳಪತಿ ವಿಜಯ್ (Thalapathy Vijay) ನಟನೆಯ ದಿ ಗೋಟ್ (The Goat) ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ಹರಿದು ಬಂದರೂ ಸಹಾ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದೆ ಎನ್ನಲಾಗಿದೆ. ನಟನ ಅಭಿಮಾನಿಗಳಿಗೆ ಸಿನಿಮಾ ಬಹಳ ಇಷ್ಡವಾಗಿದೆ ಮತ್ತು ಸಿನಿಮಾ ನಿರ್ದೇಶಕನನ್ನು ಅವರು ಹಾಡಿ ಹೊಗಳುತ್ತಿದ್ದಾರೆ.

ಅದೇ ವೇಳೆ ಹಲವು ವರ್ಷಗಳ ನಂತರ ತೆರೆಯ ಮೇಲೆ ತ್ರಿಷಾ (Actress Trisha) ಮತ್ತು ವಿಜಯ್ ಜೋಡಿಯನ್ನು ನೋಡಿ ಸಿನಿಮಾ ಪ್ರೇಮಿಗಳು ಮತ್ತು ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ. ‌ಇಂದಿನ ಯುವ ಸ್ಟಾರ್ ನಟಿಯರಿಗೆ ಟಕ್ಕರ್ ಕೊಡುವಂತೆ ನಟಿಸಿ, ಕುಣಿದು ಅಭಿಮಾನಿಗಳ ಮನಸ್ಸಿಗೆ ಲಗ್ಗೆ ಇಟ್ಟಿದ್ದಾರೆ ನಟಿ ತ್ರಿಷಾ.

ದಿ ಗೋಟ್ ಸಿನಿಮಾದಲ್ಲಿ ನಟಿಸೋದಕ್ಕಾಗಿ ನಟಿ ತ್ರಿ಼ಷಾ ಪಡೆದಿರುವ ಸಂಭಾವನೆಯ ವಿಚಾರವೀಗ ವೈರಲ್ ಆಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಇಂದಿನ ಯುವ ಸ್ಟಾರ್ ನಟಿಯರನ್ನೇ ಮೀರಿಸುವ ಹಾಗೆ ತ್ರಿಷಾ ಸಂಭಾವನೆ ಪಡೆದಿದ್ದಾರೆ. ಹಾಗಾದರೆ ನಟಿ ತ್ರಿಷಾ ಈ ಸಿನಿಮಾಕ್ಕಾಗಿ ಪಡೆದ ಸಂಭಾವನೆ ಎಷ್ಟು ಎಂದು ತಿಳಿಯೋಣ ಬನ್ನಿ.

ಈ ಸಿನಿಮಾದಲ್ಲಿ ತ್ರಿಷಾ ವಿಜಯ್ ಜೊತೆಗೆ ಹೆಜ್ಜೆ ಹಾಕೋದಕ್ಕೆ 4 ರಿಂದ 5 ಕೋಟಿ ರೂ.ಗಳ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇಂದಿನ ಹಲವು ಯುವ ನಟಿಯರು, ಸ್ಟಾರ್ ನಟಿಯರು ಸಿನಿಮಾವೊಂದಕ್ಕೆ ಪಡೆಯುವ ಸಂಭಾವನೆಗಿಂತ ಇದು ಹೆಚ್ಚಾಗಿದೆ.

Devara : ಜೂ. NTR ದೇವರಾ ಸಿನಿಮಾಕ್ಕೆ ಬಿಗ್ ಶಾಕ್; ಸಿನಿಮಾದ ಪ್ರಮುಖ ದೃಶ್ಯಗಳಿಗೆ ಬಿತ್ತು ಕತ್ತರಿ

Leave a Comment