Ranveer Singh: ಬಾಲಿವುಡ್ ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ (Deepika Padukone) ಇಂದು (ಸೆ.13) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದು, ನಟ ರಣ್ವೀರ್ ಸಿಂಗ್ (Ranveer Singh) ಅವರು ತಮ್ಮ ಮುದ್ದಾದ ಮಗಳು ಮತ್ತು ಪತ್ನಿಯ ಸ್ವಾಗತಕ್ಕೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಇದೇ ಸೆ.8 ರಂದು ದೀಪಿಕಾ ಪಡುಕೋಣೆ ಅವರು ಮುದ್ದಾದ ನಟಿ ಹೆಣ್ಣು ಮಗುವಿಗೆ ಜನ್ಮವನ್ನು ನೀಡಿದ್ದರು. ರಣ್ವೀರ್ ಅವರ ಇಡೀ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿದೆ. ರಣ್ವೀರ್ ಸಿಂಗ್ ಆಸೆ ಪಟ್ಟ ಹಾಗೆ ಅವರ ಮನೆಗೆ ಮಹಾಲಕ್ಷ್ಮಿಯ ಆಗಮನವಾಗುತ್ತಿದೆ.
ನಟಿ ದೀಪಿಕಾ ಪಡುಕೋಣೆ ಅವರು ಹೆರಿಗೆಯ ನಂತರ ಚೇತರಿಸಿಕೊಂಡಿದ್ದು, ರಣ್ವೀರ್ ಮಡದಿ ಮತ್ತು ಮಗಳನ್ನು ಮನೆಗೆ ಕರೆದುಕೊಂಡು ಹೋಗಲು ಸಿದ್ಧತೆಗಳನ್ನು ನಡೆಸಿದ್ದಾರೆ. ಮನೆಯಲ್ಲಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ರಣ್ವೀರ್ ಸಿಂಗ್ ಅವರು.
ಬಾಲಿವುಡ್ ನ ಸ್ಟಾರ್ ನಟ ಶಾರೂಖ್ ಖಾನ್ ನಿನ್ನೆ ರಾತ್ರಿ (ಸೆ.12) ದೀಪಿಕಾ ಮತ್ತು ಮಗುವನ್ನು ನೋಡುವುದಕ್ಕಾಗಿ ಆಸ್ಪತ್ರೆಗೆ ಭೇಟಿಯನ್ನು ನೀಡಿದ್ದರು. ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ವಿಚಾರಿಸಿ ನಟ ತೆರಳಿದ್ದರು.
Actress Kasthuri: ಮೊದಲೇ ಗೊತ್ತಿರಲಿಲ್ವಾ, ನೀಚ ಕಾರಣ ಕೊಟ್ಟು ಸಿನಿಮಾಕ್ಕೆ ಬೇಡ ಅಂದ್ರು; ಕಸ್ತೂರಿ ಆವೇಶ