Thalapathy Vijay: ದಳಪತಿ ವಿಜಯ್ ಕೊನೆ ಸಿನಿಮಾಕ್ಕೆ ಬಂಡವಾಳ ಹೂಡ್ತಿದೆ ಕನ್ನಡದ ಈ ನಿರ್ಮಾಣ ಸಂಸ್ಥೆ

Written by Soma Shekar

Published on:

---Join Our Channel---

Thalapathy Vijay: ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ನಟನೆಯ ಗ್ರೇಟೆಸ್ಟ್​ ಆಫ್ ಆಲ್ ಟೈಮ್​(GOAT) ಚಿತ್ರ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಇನ್ನು ಇದಾದ ನಂತರ ಈ ನಟ ನಟಿಸಲಿರುವ ಅವರ ವೃತ್ತಿ ಜೀವನದ ಕೊನೆಯ ಸಿನಿಮಾಕ್ಕಾಗಿ ನಟ ಸಿದ್ಧವಾಗುತ್ತಿದ್ದು, ನಟನ ಕೊನೆಯ ಸಿನಿಮಾ ಎನ್ನುವ ಕಾರಣಕ್ಕೆ ಭಾರೀ ನಿರೀಕ್ಷೆಗಳನ್ನು ಇದು ಹುಟ್ಟು ಹಾಕಿದೆ.

ಈಗ ಈ ಸಿನಿಮಾದ ಕುರಿತಾಗಿ ಆಸಕ್ತಿಕರ ಮಾಹಿತಿಯೊಂದು ಹೊರ ಬಂದಿದೆ. ದಳಪತಿ ವಿಜಯ್ ಅವರ ಹೊಸ ಸಿನಿಮಾವನ್ನು ನಿರ್ಮಾಣ ಮಾಡಲು ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆಯೊಂದು ಮುಂದಾಗಿದೆ ಎನ್ನಲಾಗಿದೆ. ಹಾಗಾದರೆ ಯಾವುದು ಈ ನಿರ್ಮಾಣ ಸಂಸ್ಥೆ ಎನ್ನುವ ಕುತೂಗಲ ನಿಮಗಿದ್ರೆ ಅದಕ್ಕೆ ಉತ್ತರ ಇಲ್ಲಿದೆ.

ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ (Toxic Movie) ಸಿನಿಮಾಕ್ಕೆ ಬಂಡವಾಳ ಹೂಡಿರುವ ಕೆವಿಎನ್ ಪ್ರೊಡಕ್ಷನ್ ನ (KVN production) ವೆಂಕಟ್ ಅವರು ಈಗ ದಳಪತಿ ವಿಜಯ್ ಅವರ ಸಿನಿಮಾಕ್ಕೂ ಸಹಾ ಹೂಡಿಕೆ ಮಾಡಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾದ ಕುರಿತಾಗಿ ಇಂದು ಸಂಜೆ ಹೊಸ ಅಪ್ಡೇಟ್ ಅನ್ನು ನೀಡುವುದಾಗಿ ನಿರ್ಮಾಣ ಸಂಸ್ಥೆ ತಿಳಿಸಿದೆ.

ದಳಪತಿ ವಿಜಯ್ ನಟಿಸಿರುವ ಸಿನಿಮಾಗಳ ದೃಶ್ಯಗಳನ್ನು ಸೇರಿಸಿ ಒಂದು ಟೀಸರ್ ಮಾಡಲಾಗಿದ್ದು, ಇದರಲ್ಲಿ. ‘ನಮ್ಮ ಮೊದಲ ತಮಿಳು ಸಿನಿಮಾ’ ಎಂದು ಕೆವಿಎನ್​ ನಿರ್ಮಾಣ ಸಂಸ್ಥೆ ತಿಳಿಸಿದೆ. ಅಲ್ಲದೇ ಸಂಜೆ ವೇಳೆಗೆ ಸಿನಿಮಾದ ಟೈಟಲ್, ಈ ಚಿತ್ರಕ್ಕೆ ನಿರ್ದೇಶಕ ಯಾರು ಎನ್ನುವ ಮಾಹಿತಿಗಳು ದೊರೆಯುವ ಸಾಧ್ಯತೆಗಳಿವೆ.

Pooja Hegde: ಬೇಡಿಕೆ ಕುಗ್ಗಿದ ಬೆನ್ನಲ್ಲೇ ಅಂತಾ ಪಾತ್ರಕ್ಕೂ ಓಕೆ ಹೇಳಿದ ನಟಿ ಪೂಜಾ ಹೆಗ್ಡೆ, ಶಾಕ್ ನಲ್ಲಿ ಫ್ಯಾನ್ಸ್

Leave a Comment