Pooja Hegde: ಬೇಡಿಕೆ ಕುಗ್ಗಿದ ಬೆನ್ನಲ್ಲೇ ಅಂತಾ ಪಾತ್ರಕ್ಕೂ ಓಕೆ ಹೇಳಿದ ನಟಿ ಪೂಜಾ ಹೆಗ್ಡೆ, ಶಾಕ್ ನಲ್ಲಿ ಫ್ಯಾನ್ಸ್

Written by Soma Shekar

Published on:

---Join Our Channel---

Pooja Hegde: ಟಾಲಿವುಡ್ ನ ಸ್ಟಾರ್ ನಟಿ ಪೂಜಾ ಹೆಗ್ಡೆಗೆ (Pooja Hegde) ತೆಲುಗು ಸಿನಿಮಾಗಳಲ್ಲಿ ಮೊದಲಷ್ಟು ಬೇಡಿಕೆ ಇಲ್ಲ ಎನ್ನುವುದು ತಿಳಿದಿರುವ ವಿಚಾರವೇ ಆಗಿದೆ. ಸಾಲು ಸಾಲು ಸಿನಿಮಾಗಳ ಸೋಲು ನಟಿಯ ಬೇಡಿಕೆಯನ್ನು ಕುಗ್ಗುವಂತೆ ಮಾಡಿದೆ. ಅಲ್ಲದೇ ಕಳೆದ ಒಂದಷ್ಟು ಸಮಯದಿಂದಲೂ ತೆಲುಗಿನಲ್ಲಿ ನಟಿಯ ಯಾವುದೇ ಹೊಸ ಸಿನಿಮಾದ ಅಧಿಕೃತ ಘೋಷಣೆ ಸಹಾ ಆಗಿಲ್ಲ.

ಆದರೆ ಈಗ ನಟಿ ದಿಟ್ಟ ನಿರ್ಧಾರವೊಂದನ್ನ ಮಾಡಿದ್ದು ಹೊಸ ತರಹದ ಪಾತ್ರಗಳನ್ನು ಮಾಡಲು ಮುಂದಾಗಿದ್ದಾರೆ. ಅದಕ್ಕೆ ಆರಂಭ ಎನ್ನುವ ಹಾಗೆ ನಟಿ ತಮಿಳಿನ ಹೊಸ ಸಿನಿಮಾವೊಂದರಲ್ಲಿ ದೆವ್ವದ ಪಾತ್ರವನ್ನು ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಆಶ್ಚರ್ಯಕರ ಸುದ್ದಿಯೊಂದು ಹೊರಗೆ ಬಂದಿದೆ.

ನಟಿ ಪೂಜಾ ಹೆಗ್ಡೆಗೆ ಅತ್ತ ಬಾಲಿವುಡ್ ನಲ್ಲಾಗಲೀ ಇತ್ತ ಸೌತ್ ಸಿನಿಮಾಗಳಲ್ಲೇ ಆಗಲೀ ನಿರೀಕ್ಷಿತ ಗೆಲುವು ಸಿಗುತ್ತಿಲ್ಲ.‌ ದೊಡ್ಡ ಸ್ಟಾರ್ ಗಳ‌ ಜೊತೆಗೆ ನಟಿಸಿದರೂ ಸಹಾ ಪೂಜಾ ನಟಿಸಿದ ಸಿನಿಮಾಗಳು ಯಶಸ್ಸನ್ನ ಪಡೆದುಕೊಂಡಿಲ್ಲ.‌ ಈಗ ಒಂದೆರಡು ಸಿನಿಮಾಗಳಲ್ಲಿ ಬ್ಯುಸಿ ಇರಬಹುದಾದರೂ ಹೊಸ ಪ್ರಾಜೆಕ್ಟ್ ಗಳ ಸುದ್ದಿ ಮಾತ್ರ ಇಲ್ಲ.

ಇವೆಲ್ಲವುಗಳ ನಡುವೆಯೇ ಕಾಂಚನಾ 4 (Kanchana 4) ಸಿನಿಮಾದಲ್ಲಿ ರಾಘವ ಲಾರೆನ್ಸ್ (Raghav Lawrence) ಜೊತೆ ನಟಿಸಲು ಪೂಜಾ ಹೆಗ್ಡೆಗೆ ಆಫರ್ ಬಂದಿದ್ದು, ಈ ಸಿನಿಮಾದಲ್ಲಿ ದೆವ್ವದ ಪಾತ್ರಕ್ಕೆ ಪೂಜಾ ಹೆಗ್ಡೆಗೆ ಅವಕಾಶ ಸಿಕ್ಕಿದ್ದು ನಟಿಯು ಅದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆಂದು ತಿಳಿದು ಬಂದಿದ್ದು, ಅಭಿಮಾ‌ನಿಗಳು ಸಹಾ ಅಚ್ಚರಿ ಪಟ್ಟಿದ್ದಾರೆ.

Kannada Serial TRP: ಸೀರಿಯಲ್ TRP ತಲಕೆಳಗು, ಟಾಪ್ ಸೀರಿಯಲ್ಗಳ ಅಬ್ಬರಕ್ಕೆ ಬಿತ್ತು ಬ್ರೇಕ್; ಈ ವಾರದ ಟಾಪ್ 5 ಲಿಸ್ಟ್

Leave a Comment