Janhvi Kapoor: ಮೊದಲ ಸೌತ್ ಸಿನಿಮಾಕ್ಕೆ ಭಾರೀ ಸಂಭಾವನೆ ಪಡೆದು ಸ್ಟಾರ್ ನಟಿಯರಿಗೆ ಉರಿಸಿದ ಜಾನ್ವಿ ಕಪೂರ್

Written by Soma Shekar

Updated on:

---Join Our Channel---

Janhvi Kapoor: ದಕ್ಷಿಣ ಸಿನಿಮಾ ರಂಗದಲ್ಲಿ ಬಾಲಿವುಡ್ ನಟಿಯರಿಗೆ ಮಣೆ ಹಾಕುವ ಪದ್ಧತಿ ಹಿಂದಿನಿಂದಲೂ ಇದೆ. ಈಗಲೂ ಇದು ಮುಂದುವರೆಯುತ್ತಿದೆ. ಜೂ. ಎನ್ ಟಿ ಆರ್ (Jr. NTR) ಅಭಿನಯದ ದೇವರಾ ಸಿನಿಮಾದಲ್ಲಿ ಕೂಡಾ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಅವರನ್ನು ನಾಯಕಿಯನ್ನಾಗಿ ಮಾಡಲಾಗಿದ್ದು, ಇದು ಸೌತ್ ನಲ್ಲಿ ಜಾನ್ವಿ ಅವರ ಮೊದಲ ಸಿನಿಮಾ ಆಗಿದೆ.

ದೇವರಾ (Devara) ಸಿನಿಮಾದಲ್ಲಿನ ಜಾನ್ವಿ ಕಪೂರ್ ಲುಕ್ ಈಗಾಗಲೇ ಸಿನಿ ಪ್ರೇಮಿಗಳ ಮನಸ್ಸಿಗೆ ಲಗ್ಗೆ ಇಟ್ಟಿದ್ದಾರೆ. ಅಂದ, ಅಭಿನಯ ಎರಡರ ಮೂಲಕ ಟಾಲಿವುಡ್ ನಲ್ಲಿ ಸ್ಟಾರ್ ನಟಿಯಾಗುವ ಸೂಚನೆಗಳನ್ನು ನೀಡಿದ್ದಾರೆ ಜಾನ್ವಿ. ಎನ್ ಟಿ ಆರ್ ನಂತರ ರಾಮ್ ಚರಣ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಜಾನ್ವಿ.

ಈಗ ಜಾನ್ವಿ ಕಪೂರ್ ತೆಲುಗಿನಲ್ಲಿ ತಮ್ಮ ಮೊದಲ ಸಿನಿಮಾಕ್ಕೆ ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವ ವಿಚಾರವೊಂದು ಮುನ್ನೆಲೆಗೆ ಬಂದಿದ್ದು, ಅನೇಕರು ಈ ವಿಷಯವನ್ನು ತಿಳಿಯುವ ಸಲುವಾಗಿ ಆಸಕ್ತಿಯನ್ನು ತೋರಿಸಿದ್ದಾರೆ. ಹಾಗಾದ್ರೆ ಮೊದಲ ಸಿನಿಮಾಕ್ಕೆ ಜಾನ್ವಿ ಪಡೆದ ಸಂಭಾವನೆ ಎಷ್ಟು ಎನ್ನುವುದಕ್ಕೆ ಇಲ್ಲಿದೆ ಉತ್ತರ.

ನಟಿ ಜಾನ್ವಿಗೆ ತೆಲುಗಿನಲ್ಲಿ ಇದು ಮೊದಲ ಸಿನಿಮಾ ಆದರೂ ಕೂಡಾ ಸ್ಟಾರ್ ನಟಿಯರ ಹಾಗೆ ಬರೋಬ್ಬರಿ ಐದು ಕೋಟಿ ರೂ. ಸಂಭಾವನೆ ಪಡೆಯುವ ಮೂಲಕ ತೆಲುಗಿನ ಸ್ಟಾರ್ ನಟಿಯರಿಗೆ ಟಕ್ಕರ್ ಕೊಡುವ ರೇಂಜ್ ನಲ್ಲಿ ಮೊದಲ ಸಿನಿಮಾಕ್ಕೆ ಸಂಭಾವನೆಯನ್ನು ಪಡೆದುಕೊಂಡು ಬೀಗಿದ್ದಾರೆ. ದೇವರಾ ನಂತರ ನಟಿಯ ಸಂಭಾವನೆ ಹೆಚ್ಚಾದರೂ ಆಶ್ಚರ್ಯ ಏನಿಲ್ಲ.

Singer Mano: ದಕ್ಷಿಣದ ಪ್ರಖ್ಯಾತ ಗಾಯಕನ ಪುತ್ರರ ಮೇಲೆ‌ ಪೋಲಿಸ್ ಕೇಸ್: ಪರಾರಿಯಲ್ಲಿ ಗಾಯಕನ ಪುತ್ರರು

Leave a Comment