Singer Mano: ದಕ್ಷಿಣದ ಪ್ರಖ್ಯಾತ ಗಾಯಕನ ಪುತ್ರರ ಮೇಲೆ‌ ಪೋಲಿಸ್ ಕೇಸ್: ಪರಾರಿಯಲ್ಲಿ ಗಾಯಕನ ಪುತ್ರರು

Written by Soma Shekar

Published on:

---Join Our Channel---

Singer Mano: ತೆಲುಗು ಮಾತ್ರವೇ ಅಲ್ಲದೇ ದಕ್ಷಿಣದ ಸಿನಿಮಾಗಳ ಖ್ಯಾತ ಹಿನ್ನೆಲೆ ಗಾಯಕ ಮನೋ (Singer Mano) ಅವರ ಪುತ್ರರ ವಿರುದ್ಧ ಪೊಲೀಸರು ಪ್ರಕರಣ ದಾಖಲಾಗಿದ್ದು ಪ್ರಕರಣವೊಂದರಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಮೂವರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಕುಡಿದ ಅಮಲಿನಲ್ಲಿ ಇಬ್ಬರ ಮೇಲೆ ಹಲ್ಲೆ ನಡೆಸಿ, ನಂತರ ಪರಾರಿಯಾಗಿರುವ ಗಾಯಕ ಮನೋ ಅವರ ಪುತ್ರರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.‌

ಮಧುರವಾಯಲ್‌ ನ 16 ವರ್ಷದ ಕಾಲೇಜು ವಿದ್ಯಾರ್ಥಿ ಮತ್ತು ಚೆನ್ನೈನ ಅಲಪ್ಪಕ್ಕಂನ ಕೃಪಾಕರನ್ (20) ವಲಸರವಕ್ಕಂನ ಶ್ರೀದೇವಿಕುಪ್ಪಂನಲ್ಲಿರುವ ಫುಟ್‌ಬಾಲ್ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಮಂಗಳವಾರ ರಾತ್ರಿ ಅವರು ಅಕಾಡೆಮಿಯಿಂದ ಹಿಂತಿರುಗಿ ಸ್ಥಳೀಯ ಹೋಟೆಲ್‌ಗೆ ಟಿಫಿನ್ ಮಾಡಲು ಹೋಗಿದ್ದರು.

ಅದೇ ಸಮಯದಲ್ಲಿ ಮನೋ ಅವರ ಮಕ್ಕಳಾದ ರಫಿ (Rafi) ಮತ್ತು ಶಾಕಿರ್ (Shakir) ಅವರು ತಮ್ಮ 5 ಸ್ನೇಹಿತರ ಜೊತೆಗೆ ಅಲ್ಲಿದ್ದರು. ಈ ಐವರು ಕೃಪಾಕರನ್ ಮತ್ತು 16 ವರ್ಷದ ಮತ್ತೊಬ್ಬ ಬಾಲಕನೊಂದಿಗೆ ಮದ್ಯದ ಅಮಲಿನಲ್ಲಿ ಜಗಳ ಮಾಡಿದ್ದು ಅದು ತೀವ್ರ ರೂಪಕ್ಕೆ ತಿರುಗಿದೆ. ಈ ವೇಳೆ ಮನೋ ಅವರು ಮಕ್ಕಳು ಮತ್ತು ಸ್ನೇಹಿತರು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕೃಪಾಕರನ್ ಕೀಲ್ಪಾಕ್ಕಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಕ ಮನೋ ಅವರ ಮಕ್ಕಳಾದ ರಫಿ ಮತ್ತು ಶಾಕಿರ್ ಪರಾರಿಯಾಗಿದ್ದು, ಅವರ ಸ್ನೇಹಿತರಾದ ವಿಘ್ನೇಶ್, ಧರ್ಮ ಮತ್ತು ಜಹೀರ್ ವಿರುದ್ಧ ವಲಸರವಕ್ಕಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇವರಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದ ಮೂವರು ತಲೆಮರೆಸಿಕೊಂಡಿದ್ದಾರೆ.

Bhagyalakshmi Serial: ಮದುವೆ ಸಂಭ್ರಮದಲ್ಲಿ ಹುಚ್ಚೆದ್ದು ಕುಣಿದ ತಾಂಡವ್ ಶ್ರೇಷ್ಠ, ಏನೂ ಮಾಡಲಾಗದ ಕುಸುಮಾ ಕಣ್ಣೀರು

Leave a Comment