Amitab Bachchan: ರಾಮಾಯಣ ಸಿನಿಮಾಕ್ಕೆ ಬಿಗ್ ಬಿ ಎಂಟ್ರಿ, ಯಾವ ಪಾತ್ರ ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ

Written by Soma Shekar

Published on:

---Join Our Channel---

Amitab Bachchan: ಬಾಲಿವುಡ್ ನಲ್ಲಿ ರಾಮಾಯಣ (Ramayana) ಸಿನಿಮಾದ ನಿರ್ಮಾಣವಾಗುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದೇ ಇದೆ. ಅದರಲ್ಲೂ ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿದ್ದಾರೆ ಎನ್ನುವ ವಿಚಾರವಂತೂ ಎಲ್ಲರ ವಿಶೇಷ ಆಸಕ್ತಿಯನ್ನು ಕೆರಳಿಸಿದೆ. ಸಿನಿಮಾ ಚಿತ್ರೀಕರಣ ಆರಂಭವಾದಾಗ ಲೀಕ್ ಆದ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು.

ಈಗ ಈ ಸಿನಿಮಾಕ್ಕೆ ಮತ್ತೊಬ್ಬ ಸ್ಟಾರ್ ನಟನ ಎಂಟ್ರಿ ಆಗಿದೆ. ಹೌದು, ವಯಸ್ಸು ಏರುತ್ತಿದ್ದರೂ ಕುಂದದ ಉತ್ಸಾಹದಿಂದ ಹೊಸ ಹೊಸ ಪಾತ್ರಗಳಿಗೆ ಜೀವ ತುಂಬುತ್ತಿರುವ ನಟ ಅಮಿತಾಬ್ ಬಚ್ಚನ್ (Amitab Bachchan) ಅವರು ಇದೀಗ ರಾಮಾಯಣ ಸಿನಿಮಾದ ಪಾತ್ರವೊಂದಕ್ಕೆ ಎಂಟ್ರಿ ನೀಡಿದ್ದಾರೆ.

ಕೆಲವೇ ದಿನಗಳಷ್ಟೇ ಕಲ್ಕಿ 2898 Ad ಸಿನಿಮಾದಲ್ಲಿ ಅಶ್ವತ್ಥಾಮನ ಪಾತ್ರದಲ್ಲಿ ಮಿಂಚಿ ಜನ ಮೆಚ್ಚುಗೆ ಪಡೆದಿದ್ದ ನಟ ಅಮಿತಾಬ್ ಅವರು ಈಗ ರಾಮಾಯಣ ಸಿನಿಮಾದಲ್ಲಿ ಮತ್ತೊಂದು ಪೌರಾಣಿಕ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ವಿಷಯ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ರಾಮಾಯಣ ಸಿನಿಮಾದಲ್ಲಿ ಅಮಿತಾಬ್ ಅವರದ್ದು ಒಂದು ರೀತಿಯಲ್ಲಿ ಅತಿಥಿ ಪಾತ್ರವಾಗಿದೆ. ನಟ ರಾಮನಿಗೆ ಸೀತೆಯ ಅಪಹರಣದ ವಿಚಾರ ತಿಳಿಸುವ ಜಟಾಯು ಪಕ್ಷಿಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು ಈ ವಿಚಾರ ಕೇಳಿ ಸಿನಿ ಪ್ರೇಮಿಗಳು ಸಹಾ ಖುಷಿಯಾಗಿದ್ದಾರೆ.

Bhagyalakshmi: ಮೊದ್ಲು ಮದ್ವೆ ನಿಲ್ಸಮ್ಮ, ನಮ್ಮ ತಾಳ್ಮೆ ಪರೀಕ್ಷೆ ಬೇಡ ಭಾಗ್ಯಲಕ್ಷ್ಮೀ ಬಗ್ಗೆ ರೊಚ್ಚಿಗೆದ್ದ ಪ್ರೇಕ್ಷಕರು

Leave a Comment