Bigg Boss Kannada: ಬಿಗ್ ಬಾಸ್ ಗೆ ಕಿಚ್ಚ ಬಂದೇ ಬರ್ತಾರೆ ಅಂತಿದ್ದವ್ರಿಗೆ ಬಿಗ್ ಶಾಕ್ ಕೊಟ್ಟ ಕಲರ್ಸ್ ಕನ್ನಡ

Written by Soma Shekar

Published on:

---Join Our Channel---

Bigg Boss Kannada: ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Kannada) ಆರಂಭದ ನಿರೀಕ್ಷೆಯಲ್ಲಿ ಇದ್ದಾರೆ ವೀಕ್ಷಕರು. ಆದರೆ ಈ ಸಲ ಬಿಗ್ ಬಾಸ್ ನಿರೂಪಣೆ ಯಾರು ಮಾಡ್ತಾರೆ ಅನ್ನೋ ಪ್ರಶ್ನೆ ಕೆಲವು ದಿನಗಳಿಂದ ಚರ್ಚೆ ಆಗ್ತಿದೆ. ಇನ್ನು ಸುದೀಪ್ ಅವರು ಸಹಾ ಈ ವಿಚಾರವಾಗಿ ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ ಉತ್ತರ ಕೊಟ್ಟಿದ್ದರು. ಫ್ಯಾನ್ಸ್ ಮಾತ್ರ ಸುದೀಪ್ ಬಂದೇ ಬರ್ತಾರೆ ಅಂತ ಕಾದಿದ್ರು.

ಆದರೆ ಈಗ ಎಲ್ಲರ ಆಸೆ ಮತ್ತು ನಿರೀಕ್ಷೆಗಳಿಗೆ ಕಲರ್ಸ್ ಕನ್ನಡ ವಾಹಿನಿ ದೊಡ್ಡ ಶಾಕ್ ನೀಡಿದೆ ಮತ್ತು ಸುದೀಪ್ (Kichcha Sudeep) ಬರೋದು ಅನುಮಾನ ಎನ್ನುವಂತಹ ಹೆಜ್ಜೆ ಇಟ್ಟಿದೆ. ಕಳೆದ ವಾರ ವಾಹಿನಿ ಜಸ್ಟ್ ಬಿಗ್ ಬಾಸ್ ಲೊಗೊ ಇರುವ, ಬೆಂಕಿ ಬಿರುಗಾಳಿ ಸೂಚನೆ ನೀಡುವ ಸೀಸನ್ ಹನ್ನೊಂದರ ಪ್ರೊಮೊ ಬಿಡುಗಡೆ ಮಾಡಿತ್ತು.

ಪ್ರೊಮೋದ ಜೊತೆ ಹ್ಯಾಷ್ ಟ್ಯಾಗ್ ನಲ್ಲಿ #KichchaSudeep ಅಂತ ಬರೆದಿದ್ದು ನೋಡಿ ಎಲ್ಲರೂ ಸುದೀಪ್ ಅವರೇ ಬಿಗ್ ಬಾಸ್ ನಿರೂಪಣೆ ಮಾಡ್ತಾರೆ ಅಂತ ಭಾವಿಸಿ ಖುಷಿ ಪಟ್ಟಿದ್ರು. ಆದರೆ ಈಗ ಕಲರ್ಸ್ ಕನ್ನಡ ಎಲ್ಲರಿಗೂ ಬಿಗ್ ಶಾಕ್ ನೀಡಿದೆ. ಇನ್ಸ್ಟಾಗ್ರಾಂ ನಲ್ಲಿ ಕಲರ್ಸ್ ವಾಹಿನಿ ಪ್ರೊಮೊದ ಪಿನ್ ಮಾಡಿದ್ದ ವೀಡಿಯೋ ಮಾಹಿತಿಯನ್ನ ಎಡಿಟ್ ಮಾಡಿದೆ.

ಪ್ರೊಮೊ ವೀಡಿಯೋದಲ್ಲಿ ಹ್ಯಾಷ್ ಟ್ಯಾಗ್ ಹಾಕಿದ್ದ ಕಿಚ್ಚ ಸುದೀಪ್ ಅವರ ಹೆಸರು ಈಗ ಕಾಣೆಯಾಗಿದೆ. ಕ್ಯಾಪ್ಷನ್ ಎಡಿಟ್ ಮಾಡಿದಾಗ ಸುದೀಪ್ ಅವರ ಹೆಸರನ್ನು ರಿಮೂವ್ ಮಾಡಿದ ಹಾಗಿದೆ. ಈಗ ಇದನ್ನು ಗಮನಿಸಿದ ಅನೇಕರಲ್ಲಿ ಹಾಗಾದ್ರೆ ಕಿಚ್ಚ ಸುದೀಪ್ ಅವರು ಈ ಬಾರಿ ಬಿಗ್ ಬಾಸ್ ನಿರೂಪಣೆ ಮಾಡಲ್ವಾ ಅನ್ನೋ ಅನುಮಾನ ಶುರುವಾಗಿದೆ.

Leave a Comment