Kangana Ranaut: ಶಾರೂಖ್ ಗೆ ನಾಯಕಿ ಆಗೋ ಚಾನ್ಸ್ ಬೇಡ ಅಂತ ಸಿನಿಮಾ ರಿಜೆಕ್ಟ್ ಮಾಡಿದ ಕಂಗನಾ, ಶಾಕ್ ಆದ ಫ್ಯಾನ್ಸ್

Written by Soma Shekar

Published on:

---Join Our Channel---

Kangana Ranaut : ಸಿನಿಮಾ ರಂಗ ಯಾವುದೇ ಆಗಿರಲಿ ಅಲ್ಲಿನ ಸ್ಟಾರ್ ಗಳ ಜೊತೆಗೆ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿತೆಂದರೆ ಸಾಕು ಗ್ರೀನ್ ಸಿಗ್ನಲ್ ನೀಡೋಕೆ ನಟಿಯರು ಕಾಯ್ತಾ ಇರ್ತಾರೆ. ಅಂತಹ ಅವಕಾಶ ಸಿಕ್ಕರೆ ಅದು ತಮ್ಮ ಅದೃಷ್ಟ ಎಂದೇ ಭಾವಿಸುತ್ತಾರೆ ನಟಿಯರು. ಅವರ ಜೊತೆ ನಟಿಸಿದರೆ ತಮ್ಮ ಕೆರಿಯರ್ ಟೇಕಾಫ್ ಆದಂತೆ ಎನ್ನುವುದು ನಟಿಯರ ಅಭಿಪ್ರಾಯ.

ಬಾಲಿವುಡ್ ನಲ್ಲಾದರೆ (Bollywood) ಶಾರೂಖ್ ಖಾನ್ (Shah Rukh Khan) ಜೊತೆ ನಾಯಕಿ ಎಂದರೆ ನಟಿಯರಯ ಖುಷಿಯಿಂದ ಕುಣಿದಾಡುತ್ತಾರೆ. ಆದರೆ ನಟಿ ಕಂಗನಾ ಮಾತ್ರ ಇಂತಹ ನಟಿಯರಿಗಿಂತ ಭಿನ್ನ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾದ್ರು ಕಂಗನಾ (Kangana Ranaut) ಇದುವರೆಗೆ ಮೂರು ಜನ ಖಾನ್ ಗಳ ಜೊತೆ ಒಂದು ಸಿನಿಮಾ ಸಹಾ ಮಾಡಿಲ್ಲ.

ವಿಶೇಷವೆಂದರೆ ಈ ಹಿಂದೆ ನಟ ಶಾರೂಖ್ ಖಾನ್ ಸಿನಿಮಾದಲ್ಲಿ ಕಂಗನಾಗೆ ನಾಯಕಿಯಾಗುವ ಅವಕಾಶ ಅರಸಿ ಬಂದಿತ್ತು. ಆದರೆ ಕಂಗನಾ ಆ ಸಿನಿಮಾ ಆಫರ್ ಅನ್ನು ರಿಜೆಕ್ಟ್ ಮಾಡಿದ್ದರು. ಹೌದು, ಶಾರೂಖ್ ಅಭಿನಯದ ಜೀರೋ (Zero) ಸಿನಿಮಾದಲ್ಲಿ ಕಂಗನಾ ನಾಯಕಿಯಾಗುವುದಕ್ಕೆ ನೋ ಹೇಳಿದ್ದರು.

ಅನಂತರ ಈ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ನಾಯಕಿಯಾಗಿ ಕಾಣಿಸಿಕೊಂಡಿದ್ದರಾದರೂ ಬಾಕ್ಸಾಫೀಸಿನಲ್ಲಿ ಈ ಸಿನಿಮಾ ಹೀನಾಯ ಸೋಲನ್ನು ಕಂಡಿತ್ತು. ಕಂಗನಾ ಆ ಸಿನಿಮಾದಲ್ಲಿ ಪಾತ್ರಕ್ಕೆ ಪ್ರಾಧಾನ್ಯತೆ ಇಲ್ಲ ಎನ್ನುವ ಕಾರಣಕ್ಕೆ ಮತ್ತು ಖಾನ್ ಗಳ ಸಿನಿಮಾದಲ್ಲಿ ಹೀರೋಗಳೇ ಹೈಲೈಟ್ ಎನ್ನುವ ಕಾರಣಕ್ಕೆ ಅವರ ಜೊತೆ ಸಿನಿಮಾ ಮಾಡಲ್ಲ ಎಂದು ಹೇಳಿದ್ದಾರೆ.

Astrology: ಸೆಪ್ಟೆಂಬರ್ 18 ರಿಂದ ಈ ಮೂರು ರಾಶಿಗಳಿಗೆ ಕಾದಿದೆ ಸಮಸ್ಯೆಗಳ ಸಾಗರ; ಹಣ, ಉದ್ಯೋಗ, ಆರೋಗ್ಯ ಎಚ್ಚರ

Leave a Comment