Pawan Kalyan: ಬಂಗಾಳಕೊಲ್ಲಿಯಲ್ಲಿ (Bay Of Bengal) ಉಂಟಾಗಿರುವ ಕಡಿಮೆ ಒತ್ತಡದ ಪ್ರಭಾವದಿಂದ ತೆಲುಗು ರಾಜ್ಯಗಳಲ್ಲಿ ಉಂಟಾದ ಭಾರೀ ಮಳೆ ಮತ್ತು ಪ್ರವಾಹದಿಂದ (AP floods) ಜನ ತತ್ತರಿಸಿ ಹೋಗಿದ್ದಾರೆ. ಪ್ರವಾಹದಿಂದ ತೀವ್ರ ಹಾನಿಯಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಿನಿಮಾ ಸ್ಟಾರ್ ಗಳು ಮುಂದೆ ಬಂದು ನೆರವನ್ನು ಘೋಷಣೆ ಮಾಡುತ್ತಿದ್ದಾರೆ. ಈಗಾಗಲೇ ಹಲವು ನಟರು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.
ನಟರಾದ ಜೂನಿಯರ್ ಎನ್ ಟಿಆರ್, ವಿಶ್ವಕ್ ಸೇನ್, ಸಿದ್ದು ಜೊನ್ನಲಗಡ್ಡ ಈಗಾಗಲೇ ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಚಲನಚಿತ್ರ ನಟ ಹಾಗೂ ಉಪಮುಖ್ಯಮಂತ್ರಿಯೂ ಆಗಿರುವ ಪವನ್ ಕಲ್ಯಾಣ್ (Pawan Kalyan), ಪ್ರವಾಹ ಸಂತ್ರಸ್ತರಿಗೆ ಭಾರಿ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.
ಹೌದು, ನಟ ಪವನ್ ಕಲ್ಯಾಣ್ ಅವರು ಪ್ರವಾಹ ಸಂತ್ರಸ್ತರ ನೆರವಿಗೆ 6 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ. ಅವರು ಎರಡು ತೆಲುಗು ರಾಜ್ಯಗಳ ಸಿಎಂಆರ್ಎಫ್ಗಳಿಗೆ ತಲಾ ರೂ.1 ಕೋಟಿ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೇ ಎಪಿಯ 400 ಪಂಚಾಯತ್ಗಳಿಗೆ 4 ಕೋಟಿ ನೀಡಲಾಗುವುದು ಎಂದಿದ್ದಾರೆ.
ಅಂದರೆ ಪ್ರತಿ ಪಂಚಾಯಿತಿಗೆ ರೂ.1 ಲಕ್ಷ ದೇಣಿಗೆ ಘೋಷಣೆ ಮಾಡಲಾಗಿದೆ. ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಬೇಕೆಂದುಕೊಂಡೆ ಆದರೆ ಅದರಿಂದ ಅಲ್ಲಿ ನಡೆಯುವ ಕೆಲಸಗಳಿಗೆ ತೊಂದರೆ ಆಗಬಾರದೆನ್ನುವುದು ನನ್ನ ಭಾವನೆ ಎನ್ನುವ ಮಾತನ್ನು ಸಹಾ ಅವರು ಹೇಳಿದ್ದಾರೆ.
Aryan Khan: ನಿಮ್ಮ ಮಗನನ್ನ ಹೀರೋ ಮಾಡ್ತೀವಿ, ಶಾರೂಖ್ ಮಗನಿಗಾಗಿ ಬಾಲಿವುಡ್ ನಲ್ಲಿ ಸ್ಪರ್ಧೆ ಶುರುವಾಯ್ತು