Milana Nagaraj :ಲವ್ಮಾಕ್ಟೇಲ್ (Love Mocktail) ಸಿನಿಮಾ ಖ್ಯಾತಿಯ ಮಿಲನಾ ನಾಗರಾಜ್ (Milana Nagaraj) ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಸಂತೋಷದ ವಿಷಯವನ್ನು ಅವರ ಪತಿ ನಟ ಡಾರ್ಲಿಂಗ್ ಕೃಷ್ಣ (Darling Krishna) ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡಿಕೊಂಡು ಎಲ್ಲರಿಗೂ ವಿಷಯವನ್ನು ತಿಳಿಸಿದ್ದಾರೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿಯ ಜೀವನಕ್ಕೆ ಹೊಸ ಅತಿಥಿಯ ಆಗಮನವಾಗಿದ್ದು, ಡಾರ್ಲಿಂಗ್ ಕೃಷ್ಣ ಕುಟುಂಬ ಸಂಭ್ರಮದಲ್ಲಿದ್ದು, ಅಭಿಮಾನಿಗಳು ಶುಭ ಹಾರೈಸಿದ್ದಾರೆ. ನಾರ್ಮಲ್ ಡೆಲಿವರಿ ಮೂಲಕ ಮಿಲನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳು ಬಂದಿರುವುದು ಬಹಳ ಖುಷಿಯನ್ನು ನೀಡಿದೆ.
ತಾಯಿ ಮತ್ತು ಮಗಳು ಆರೋಗ್ಯವಾಗಿದ್ದಾರೆ ಎಂದು ಡಾರ್ಲಿಂಗ್ ಕೃಷ್ಣ ಅವರು ತಿಳಿಸಿದ್ದಾರೆ. ಈ ಜರ್ನಿಯಲ್ಲಿ ಮಿಲನಾ ನಾಗರಾಜ್ ಅನುಭವಿಸಿದ ನೋವು, ಮಾಡಿದ ತ್ಯಾಗ, ತೋರಿದ ಧೈರ್ಯದ ಬಗ್ಗೆ ನನಗೆ ಹೆಮ್ಮೆ ಇದೆ. ಈ ಜರ್ನಿಯಲ್ಲಿ ಸಾಗುವ ಎಲ್ಲ ತಾಯಂದಿರಿಗೆ ನನ್ನ ಸೆಲ್ಯೂಟ್.
ಇದನ್ನು ನೋಡಿ ನನಗೆ ಮಹಿಳೆಯರ ಮೇಲೆ ಇದ್ದ ಗೌರವ ದುಪ್ಪಟ್ಟಾಗಿದೆ ಎಂದಿದ್ದಾರೆ ನಟ. ಮಗಳು ಜನಿಸಿರೋದು ನನಗೆ ಹೆಮ್ಮೆಯಿದೆ. ನಾನೊಬ್ಬ ಅದೃಷ್ಟವಂತ ತಂದೆ ಎಂದು ಸಹಾ ಡಾರ್ಲಿಂಗ್ ಕೃಷ್ಣ ಪೋಸ್ಟ್ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
Vijay Sethupathi: ಕಮಲ್ ಹಾಸನ್ ಜಾಗಕ್ಕೆ ಬಂದ ವಿಜಯ್ ಸೇತುಪತಿಗೆ ಬಿಗ್ ಬಾಸ್ ನಿರೂಪಣಗೆ ಭಾರೀ ಸಂಭಾವನೆ