Actress Charmila: ಕೇರಳದಲ್ಲಿ ಹೇಮಾ ಸಮಿತಿಯ ವರದಿ (Hema Committee Report) ಬಿಡುಗಡೆ ಆದ ಬೆನ್ನಲ್ಲೇ ಮಲೆಯಾಳಂ ಸಿನಿಮಾ ರಂಗದ ಕೆಟ್ಟ ಮುಖ ಬಹಿರಂಗವಾಗಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಅನೇಕ ನಟಿಯರು ತಮಗಾದ ಕಹಿ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡು ಶಾಕ್ ನೀಡಿದ್ದಾರೆ. ಇದೀಗ ಮಲೆಯಾಳಂನ ಮತ್ತೊಬ್ಬ ನಟಿ ಚಾರ್ಮಿಳಾ ತಮಗೆ ಎದುರಾಗಿದ್ದ ಕರಾಳ ಘಟನೆಯ ಅನುಭವವನ್ನು ಬಹಿರಂಗ ಮಾಡಿದ್ದಾರೆ.
ತನ್ನ ಮೇಲೆ ನಟರು, ನಿರ್ದೇಶಕರು, ನಿರ್ಮಾಪಕರು ಸೇರಿ ಒಟ್ಟು 28 ಮಂದಿ ತನ್ನ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾರೆನ್ನುವುದು ಚಾರ್ಮಿಳಾ (Actress Charmila) ಮಾಡಿರುವ ಆರೋಪವಾಗಿದೆ. ಅರ್ಜುನನ್ ಪಿಳ್ಳೆ ಅಂಚು ಮಕ್ಕಂ ಚಿತ್ರದ ನಿರ್ಮಾಪಕ ಎಂಪಿ ಮೋಹನನ್ ಮತ್ತು ಅವರ ಸ್ನೇಹಿತರು ತನ್ನ ಮೇಲೆ ಅ” ತ್ಯಾ ಚಾರ ಮಾಡಲು ಪ್ರಯತ್ನಿಸಿದರೆಂದು ಮಾದ್ಯಮವೊಂದರ ಮುಂದೆ ನಟಿ ಚಾರ್ಮಿಳಾ ಹೇಳಿದ್ದಾರೆ.
1997ರಲ್ಲಿ ಬಿಡುಗಡೆ ಆಗಿದ್ದ ‘ಅರ್ಜುನನ್ ಪಿಳ್ಳೆಯುಂ ಅಂಚು ಮಕ್ಕಳುಂ’ ಚಿತ್ರದ ವೇಳೆ ನನ್ನ ಮೇಲೆ ಸಾಮೂಹಿಕ ಅ ತ್ಯಾ ಚಾ ರದ ಪ್ರಯತ್ನ ಮಾಡಲಾಗಿತ್ತು. ಆ ಸಂದರ್ಭದಲ್ಲಿ ನಾನು ಹೋಟೆಲ್ ರೂಮಿನಿಂದ ಹೇಗೋ ತಪ್ಪಿಸಿಕೊಂಡೆ, ಹೊರಗೆ ಓಡಿ ಬಂದೆ. ಈ ವೇಳೆ ನನ್ನ ಸಹಾಯಕಿಯ ಸೀರೆಯನ್ನು ಹಿಡಿದೆಳೆಯುವ ಪ್ರಯತ್ನ ಮಾಡಿದರು.
ಅಲ್ಲದೇ ಪುರುಷ ಸಹಾಯಕನ ಮೇಲೆ ಹಲ್ಲೆ ನಡೆಸಿದರು. ಆ ಹೊಟೇಲ್ ನ ರಿಸಪ್ಚನಿಸ್ಟ್ ಸಹಾ ಅಂತಹ ಅಪರಾಧ ಕೃತ್ಯಕ್ಕೆ ತನ್ನ ಕುಮ್ಮಕ್ಕು ನೀಡಿದ್ದನು. ನಾನು ಹೊಟೇಲ್ ರೂಮ್ ನಿಂದ ಓಡಿ ಬಂದಾಗ ಆಟೋ ಚಾಲಕರು ನನ್ನನ್ನ ರಕ್ಷಿಸಿದರು ಎಂದು ಚಾರ್ಮಿಳಾ ಕರಾಳ ದಿನವನ್ನು ನೆನಪಿಸಿಕೊಂಡಿದ್ದಾರೆ. ಇದೇ ವೇಳೆ ನಟಿ ಹಿರಿಯ ನಿರ್ದೇಶಕ ಹರಿಹರನ್ ಮೇಲೆ ಸಹಾ ಆರೋಪವನ್ನು ಮಾಡಿದ್ದಾರೆ.
ಪರಿಣಯಂ ಸಿನಿಮಾದ ವೇಳೆ ನಾನು ಅಡ್ಜೆಸ್ಟ್ ಮಾಡ್ಕೊಳ್ತೀನೋ ಇಲ್ವೋ ಅಂತ ಕೇಳೋಕೆ ನಟ ವಿಷ್ಣು ಅವರನ್ನ ಕಳಿಸಿದ್ದರು. ನಾನು ಅದಕ್ಕೆ ಒಪ್ಪಲಿಲ್ಲ ಅಂತ ನನ್ನನ್ನ ಆ ಸಿನಿಮಾದಿಂದ ತೆಗೆದು ಹಾಕಿದರು. ಚಾರ್ಮಿಳಾ ಹೇಳಿದ್ದು ನಿಜ ಎಂಬುದನ್ನು ನಟ ವಿಷ್ಣು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಮಲೆಯಾಳಂ ಸಿನಿಮಾ ಲೋಕದ ಕತ್ತಲ ಕಥೆಗಳು ಒಂದೊಂದಾಗಿ ಹೊರ ಬೀಳುತ್ತಿದೆ.