BBK 11 : ಕೆಲವೊಂದು ಸಲ ಮೂವ್ ಆನ್ ಆಗಬೇಕು; ಕಿಚ್ಚ ಸುದೀಪ್ ಬಿಗ್ ಬಾಸ್ ಗೆ ಗುಡ್ ಬೈ ?

Written by Soma Shekar

Published on:

---Join Our Channel---

ಬಿಗ್ ಬಾಸ್ ಕನ್ನಡ ಸೀಸನ್‌ 11 (BBK 11) ಶೀಘ್ರದಲ್ಲೇ ಆರಂಭವಾಗಲಿದೆ ಎನ್ನುವ ಸುದ್ದಿಗಳು ಈಗಾಗಲೇ ಹರಿದಾಡುತ್ತಿವೆ. ಬಿಗ್ ಬಾಸ್ ಅಂದ‌ ಕೂಡಲೇ ಅಲ್ಲಿ ನೆನಪಾಗೋದು ನಟ ಕಿಚ್ಚ ಸುದೀಪ್ ಅವರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಈ ಬಾರಿ ಬಿಗ್ ಬಾಸ್ ನಿರೂಪಣೆ ಸುದೀಪ್ ಅವರು ಮಾಡಲ್ಲ ಅನ್ನೋ ಅನುಮಾನ ಒಂದು ಮೂಡಿದ್ದು ಈಗ ಅದಕ್ಕೆ ಸುದೀಪ್ ಅವರೇ ಸ್ವತಃ ಉತ್ತರ ಕೊಟ್ಟಿದ್ದಾರೆ.

ಬಿಗ್ ಬಾಸ್ ಅನ್ನು ಹತ್ತು ವರ್ಷ ನಡೆಸಿಕೊಟ್ಟಿದ್ದೇನೆ‌. ಅದಕ್ಕೆ ಡೆಡಿಕೇಟ್ ಆಗಿದ್ದೆ. ಬಿಗ್ ಬಾಸ್ ಅನ್ನೋದು ದೊಡ್ಡ ಶ್ರಮ ಎಂದಿರುವ ಸುದೀಪ್ ಅವರು ಮ್ಯಾಕ್ಸ್ ಸಿನಿಮಾದ ಚಿತ್ರೀಕರಣ ರಾತ್ರಿ ವೇಳೆ ನಡೀತಿತ್ತು, ಬೆಳಿಗ್ಗೆ 3:30 ಕ್ಕೆ ಮುಗಿಯುತ್ತಿತ್ತು. ವಿಮಾನ ಲೇಟ್ ಆಗುತ್ತೆ ಅಂತ ನನ್ನದೇ ದುಡ್ಡಲ್ಲಿ ಚಾಟೆರ್ಡ್​ ಫ್ಲೈಟ್ ಬಾಡಿಗೆಗೆ ತೆಗೆದುಕೊಂಡು, ಅಲ್ಲಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ನೇರವಾಗಿ ಮನೆಗೆ ಹೋಗಿ ನಂತರ ಬಿಗ್ ಬಾಸ್ ಸೆಟ್‌ಗೆ ಹೋಗುತ್ತಿದ್ದೆ.

ಬೆಳಿಗ್ಗೆ ಬಿಗ್ ಬಾಸ್ ಶೂಟಿಂಗ್‌ ಮಾಡಲು ನಿಂತರೇ ಮಧ್ಯಾಹ್ನದವರೆಗೆ ಶೂಟಿಂಗ್, ನಂತರ 2 ಗಂಟೆ ಗ್ಯಾಪ್ ತೆಗೋಳ್ತಿದ್ದೆ ಆಮೇಲೆ ನಂತರ ಮತ್ತೊಂದು ಎಪಿಸೋಡ್ ಶೂಟ್ ಮಾಡಬೇಕಿತ್ತು ಶೂಟಿಂಗ್ ಮುಗಿಸಿ ರಾತ್ರೋರಾತ್ರಿ ಚೆನ್ನೈಗೆ ಹೋಗಿ, ಅಲ್ಲಿಂದ ಮಹಾಬಲಿಪುರಂಗೆ ಹೋಗುತ್ತಿದ್ದೆ. ಹೋದ ಕೂಡಲೇ ಸಿನಿಮಾ ಶೂಟಿಂಗ್.

ನನಗೆ ಸಿನಿಮಾಗೆ ನ್ಯಾಯ ಕೊಡಬೇಕೋ ಅಥವಾ ಬಿಗ್‌ ಬಾಸ್‌ ಶೋಗೆ ನ್ಯಾಯ ಕೊಡಬೇಕೋ ಅಂತ ಫೀಲ್‌ ಆಗ್ತಿತ್ತು. ಬಿಗ್‌ ಬಾಸ್‌ ಶೋನ ಎಂಜಾಯ್ ಮಾಡಿದ್ದೇನೆ.‌ ಬಿಗ್ ಬಾಸ್ ನಡೆಸಿಕೊಂಡುವ ಆಸಕ್ತಿ ಇದೆ. ಆದರೆ ಕೆಲವು ಸಲ ಮೂವ್​ ಆನ್ ಆಗಲೇಬೇಕು. ಇದರ ಅರ್ಥ ನನಗೆ ಮಾಡೋಕೆ ಆಸಕ್ತಿಯಿಲ್ಲ, ಅವರಿಗೆ ನಾನು ಬೇಡ  ಎಂದು ಅಲ್ಲ ಎಂದು ಸುದೀಪ್‌ ಅವರು ತಿಳಿಸಿದ್ದಾರೆ.

Actor Sudeep: ಜೈಲಿಗೆ ಹೋಗಿ ದರ್ಶನ್ ನ ಭೇಟಿ ಮಾಡಬೇಕೆನಿಸಿತ್ತಾ? ಪ್ರಶ್ನೆಗೆ ನೇರ ಉತ್ತರ ಕೊಟ್ಟ ಕಿಚ್ಚ ಹೇಳಿದ್ದೇನು

Leave a Comment