Krishnashtami: ತಾರೆಗಳ ಮನೆಯಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ, ಇಲ್ಲಿದೆ ಸುಂದರವಾದ ಫೋಟೋಗಳು

Written by Soma Shekar

Published on:

---Join Our Channel---

Krishnashtami : ನಿನ್ನೆ ಇಡೀ ದೇಶದಾದ್ಯಂತ ಕೃಷ್ಣಾಷ್ಟಮಿಯನ್ನು (Krishnashtami) ಬಹಳ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗಿದ್ದು. ಮನೆಯಲ್ಲಿ ತಮ್ಮ ಮುದ್ದು ಮಕ್ಕಳಿಗೆ ರಾಧಾ ಕೃಷ್ಣರ ವೇಷ ಹಾಕಿಸಿ ಮನೆ ಮಂದಿ ಸಂಭ್ರಮಿಸಿದ್ದಾರೆ. ಈ ವೇಳೆ ಸ್ಯಾಂಡಲ್ವುಡ್ ನ ತಾರೆಯರು, ಕಿರುತೆರೆಯ ನಟ ನಟಿಯರು ಸಹಾ ತಮ್ಮ ಮನೆಯಲ್ಲಿ ಮಕ್ಕಳಿಗೆ ರಾಧೆ ಕೃಷ್ಣ ವೇಷ ಹಾಕಿಸಿ ವಿಶೇಷವಾಗಿ ಫೋಟೋ ಶೂಟ್ ಮಾಡಿಸಿದ್ದಾರೆ.

ನಟ, ನಿರ್ದಶಕ ರಿಷಬ್ ಶೆಟ್ಟಿ (Rishab Shetty) ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ತಮ್ಮ ಇಬ್ಬರು ಮಕ್ಕಳಿಗೂ ಸುಂದರವಾದ ರಾಧಾ ಕೃಣ್ಣ ವೇಷ ತೊಡಿಸಿ ಫೋಟೋ ಶೂಟ್ ಮಾಡಿಸಿ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕನ್ನಡ ಬಿಗ್ ಬಾಸ್ ಸೀಸನ್ ಹತ್ತರ ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh) ಅವರ ತಂಗಿ ಯಶೋಧೆಯಾಗಿ ಅವರ ಮಗು ಕೃಷ್ಣನಾಗಿ ವೇಷ ತೊಟ್ಟು ಫೋಟೋ ಶೂಟ್ ಮಾಡಿಸಿದ್ದು, ನಟ ಕಾರ್ತಿಕ್ ಅವರ ಸಹೋದರಿ ಫೋಟೋಗಳನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಬಿಗ್ ಬಾಸ್ ನಿಂದ ಜನಪ್ರಿಯತೆ ಪಡೆದಿರುವ ಡ್ಯಾನ್ಸರ್ ಕಿಶನ್ (Kishan) ಈಗಾಗಲೇ ಸೀರಿಯಲ್ ಗೆ ಎಂಟ್ರಿ ಕೊಟ್ಟು ಗಮನ ಸೆಳೆದಿದ್ದಾರೆ. ಕೃಷ್ಣ ಜನ್ಮಾಷ್ಟಮಿ ವಿಶೇಷ ಎನ್ನುವಂತೆ ನಟ ಕೃಷ್ಣನ ವೇಷ ತೊಟ್ಟು ಬಹಳ ಆಕರ್ಷಕವಾಗಿ ಕಂಡಿದ್ದಾರೆ. ನಟ ಫೋಟೋಗೆ ಮೆಚ್ಚುಗೆಗಳು ಹರಿದು ಬರುತ್ತಿದೆ.

ರಾಧಾ ಕಲ್ಯಾಣ ಸೀರಿಯಲ್ ಖ್ಯಾತಿಯ ನಟಿ ರಾಧಿಕಾ ರಾವ್ ಅವರು ಸಹಾ ತಮ್ಮ ಮಗುವಿನ ಜೊತೆಗೆ ಯಶೋಧಾ ಕೃಷ್ಣನ ವೇಷ ತೊಟ್ಟ ಸುಂದರವಾದ ಫೋಟೋಗಳನ್ನ ಹಂಚಿಕೊಂಡು ಕೃಷ್ಣಾಷ್ಟಮಿಯನ್ನು ಸಂಭ್ರಮಿಸಿದ್ದಾರೆ.‌

Padmaja Rao: 40 ಲಕ್ಷ ಕಟ್ಟಿ ಇಲ್ಲವೇ ಜೈಲಿಗೆ ಹೋಗಿ, ಭಾಗ್ಯಲಕ್ಷ್ಮೀ ನಟಿ ಪದ್ಮಜಾ ರಾವ್ ಗೆ ಎದುರಾಯ್ತು ಸಂಕಷ್ಟ

Leave a Comment