Sara Annaiah: ಮುಂದಿನ ತಿಂಗಳೇ ನನ್ನ ಮದ್ವೆ ಅಂತ ಪೋಸ್ಟ್ ಹಾಕಿ ಕಂಡೀಶನ್ ಹಾಕಿದ ಸಾರಾ ಅಣ್ಣಯ್ಯ; ನಟಿ ಪೋಸ್ಟ್ ಗೆ ಫ್ಯಾನ್ಸ್ ಶಾಕ್

Written by Soma Shekar

Published on:

---Join Our Channel---

Sara Annaiah: ಕಿರುತೆರೆಯ ಜನಪ್ರಿಯ ಸೀರಿಯಲ್ ಅಮೃತಧಾರೆಯಲ್ಲಿ ಗೌತಮ್ ದೀವಾನ್ ತಂಗಿಯಾಗಿ, ಭೂಮಿಕಾ ಸಹೋದರ ಜೀವನ್ ಹೆಂಡತಿ ಮಹಿಮಾ ಪಾತ್ರದ ಮೂಲಕ ಜನಪ್ರಿಯತೆ ಪಡೆದಿರುವ ನಟಿ ಸಾರಾ ಅಣ್ಣಯ್ಯ (Sara Annaiah). ಈ ನಟಿ ಈಗಾಗಲೇ ಕಿರುತೆರೆಯ ಬೇರೆ ಸೀರಿಯಲ್ ಗಳಲ್ಲೂ ನಟಿಸಿ ಹೆಸರನ್ನು ಮಾಡಿರುವ ನಟಿಯಾಗಿದ್ದಾರೆ.‌

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಈ ನಟಿ ತಮ್ಮ ಬೋಲ್ಡ್ ಫೋಟೋಗಳ (bold photos) ಮೂಲಕವೇ ಗಮನ ಸೆಳೆಯುತ್ತಾರೆ. ಮಾಡ್ರೆನ್ ಡ್ರೆಸ್ ಗಳಲ್ಲೇ ಹೆಚ್ಚಾಗಿ ಮಿಂಚುತ್ತಾರೆ ಈ ನಟಿ. ಈಗ ಒಂದಷ್ಟು ಹೊಸ ಫೋಟೋಗಳನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ.

ನಟಿಯು ಜೀಬ್ರಾ ಪ್ರಿಂಟ್ ಸ್ಲೀವ್ ಲೆಸ್ ಬ್ಲಾಕ್ ಅಂಡ್ ವೈಟ್ ಡ್ರೆಸ್ ಅನ್ನು ಧರಿಸಿದ್ದು, ಕ್ಯಾಪ್ಷನ್ ನಲ್ಲಿ ನೀನು ಸಂತೋಷವಾಗಿರಲು ಅರ್ಹಳೇ ಹೊರತು ಆಯಾಸಗೊಳ್ಳಲು, ದುಃಖ ಪಡಲು ಅಲ್ಲ, ಜಸ್ಟ್ ಹ್ಯಾಪಿ ಎಂದು ಬರೆದುಕೊಂಡಿದ್ದಾರೆ.‌

ಎಲ್ಲರಿಗೂ ಶಾಕ್ ನೀಡುವಂತೆ ಸಾರಾ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ತನಗೆ ಮದುವೆ ಫಿಕ್ಸ್ ಆಗಿರುವಂತೆ ಬರ್ಕೊಂಡಿದ್ದು, ಎಲ್ಲರಿಗೂ ಸಹಾ ಆಹ್ವಾನ ನೀಡಿದ್ದಾರೆ ಅದೇ ವೇಳೆ ಒಂದು ಕಂಡೀಷನ್ ಸಹಾ ಹಾಕಿದ್ದಾರೆ ನಟಿ.

ಈ ಪೋಸ್ಟ್ ನೋಡಿದ ಕೂಡಲೇ ಅನೇಕರು ಸಾರಾ ಅವರಿಗೆ ಮದುವೆ ಫಿಕ್ಸ್ ಆಗೋಯ್ತಾ? ಹಾಗಾದ್ರೆ ನಟಿ ಇನ್ಮುಂದೆ ಸೀರಿಯಲ್ ನಲ್ಲಿ ನಟಿಸೋದಿಲ್ಚಾ? ಎಂದೆಲ್ಲಾ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ‌ಹಾಗಾದರೆ ನಟಿಯ ಪೋಸ್ಟ್ ನಲ್ಲಿ ಏನಿದೆ ?

ಸಾರಾ ತಮ್ಮ ಪೋಸ್ಟ್ ನಲ್ಲಿ, ನಾನು ಮುಂದಿನ ತಿಂಗಳು ಮದುವೆಯಾಗಲಿದ್ದೇನೆ. ಇದೊಂದು ಸಣ್ಣ ಪಾರ್ಟಿ, ಕೆಲವೇ ಕೆಲವು ಜನರನ್ನ ಆಹ್ವಾನಿಸಲಾಗಿದೆ. ಆದ್ರೆ ಬರೋವಾಗ ಗಿಫ್ಟ್ ತರಬೇಡಿ, ಬದಲಾಗಿ ನನ್ನನ್ನು ಮದುವೆಯಾಗೋದಕ್ಕೆ ಸಿದ್ಧ ಇರೋರನ್ನ ಕರ್ಕೊಂಡು ಬನ್ನಿ ಎಂದಿದ್ದಾರೆ.‌

ನಟಿ ಸಾರಾ ಹೀಗೆ ಮದುವೆ ಬಗ್ಗೆ ಹೇಳಿರೋದು ಖಂಡಿತ ಸೀರಿಯಸ್ ಪೋಸ್ಟ್ ಅಲ್ವೇ ಅಲ್ಲ. ಆಗಾಗ ಸಾರಾ ಏನಾದರೊಂದು ತಮಾಷೆಯ ವಿಚಾರಗಳನ್ನು ಶೇರ್ ಮಾಡುತ್ತಾರೆ. ಈಗಲೂ ಅವರು ಅದೇ ಮಾಡಿದ್ದಾರೆ.‌

Leave a Comment