Seethal Thampi: ಸಿನಿಮಾ ಸೆಟ್ ಗಳಲ್ಲಿ ಅವಘಡಗಳು, ಅಪಘಾತಗಳು ಅನ್ನೋದು ತೀರಾ ಸಾಮಾನ್ಯವಾದ ವಿಚಾರವೇ ಆದರೂ ಕೆಲವೊಮ್ಮೆ ಕೆಲವರು ಪ್ರಾಣ ಕಳೆದುಕೊಂಡ ಉದಾಹರಣೆಗಳೂ ಇವೆ. ಅದಕ್ಕೆ ಸಿನಿಮಾ ಶೂಟಿಂಗ್ ನಡೆಯುವ ಕಡೆ ಸೇಫ್ಟಿ ಗಾಗಿ ಸಾಕಷ್ಟು ಗಮನ ನೀಡುವುದು ಅನಿವಾರ್ಯವಾಗಿರುತ್ತದೆ.
ಆ್ಯಕ್ಷನ್ ದೃಶ್ಯಗಳು ಎಂದಾಗ ಇಲ್ಲಿ ರಿಸ್ಕ್ ಅನ್ನೋದು ಇದ್ದೇ ಇರುತ್ತದೆ.
ಎಷ್ಟೇ ಎಚ್ಚರ ವಹಿಸಿದರೂ ಕೆಲವೊಮ್ಮೆ ನಟ ನಟಿಯರು ಗಾಯಗೊಳ್ಳುವುದು ನಡೆದೇ ಇರುತ್ತದೆ. ಹೀಗೆ ಗಾಯಗೊಂಡಾಗ ಅವರು ಚಿಕಿತ್ಸೆಯನ್ನು ಪಡೆದು ಒಂದಷ್ಟು ದಿನಗಳ ಕಾಲ ಚಿತ್ರೀಕರಣದಿಂದ ಬ್ರೇಕ್ ಪಡೆದು ಅನಂತರ ಎಂದಿನಂತೆ ತಮ್ಮ ಕೆಲಸಕ್ಕೆ ಹಿಂತಿರುಗುತ್ತಾರೆ. ಆದರೆ ಈಗ ಮಲೆಯಾಳಂ ನಟಿಯೊಬ್ಬರು ಸೆಟ್ ನಲ್ಲಿ ಗಾಯವಾಗಿದ್ದಕ್ಕೆ ಕೋಟಿಗಳ ಮೊತ್ತದ ಪರಿಹಾರ ಹೇಳಿ ಪ್ರಕರಣ ದಾಖಲಿಸಿದ್ದಾರೆ.
ಮಲೆಯಾಳಂ ನಟಿ ಸೀತಲ್ ತಂಪಿ (Seethal Thampi) ಫುಟೇಜ್ (Footage) ಹೆಸರಿನ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುವಾಗ ಅವರಿಗೆ ಅಲ್ಲಿ ನಡೆದ ಅವಘಡದಲ್ಲಿ ಗಾಯವಾಗಿದೆ. ಸಿನಿಮಾ ಚಿತ್ರೀಕರಣ ನಡೆಯುತ್ತಿರುವ ಸ್ಥಳದಲ್ಲಿ ಸೂಕ್ತವಾದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ತನಗೆ ಗಾಯವಾಗಿದೆ ಎನ್ನುವುದು ನಟಿಯ ಆರೋಪವಾಗಿದೆ.
ಗಾಯಗೊಂಡಾಗ ಆ್ಯಂಬುಲೆನ್ಸ್ ಸೌಲಭ್ಯ ನೀಡಲಿಲ್ಲ. ಗಾಯದಿಂದಾಗಿ ಅದು ವೃತ್ತಿ ಜೀವನದ ಮೇಲೆ ಪರಿಣಾಮ ಬೀರಿದೆ. ಇನ್ಮುಂದೆ ನಾನು ನಟಿಸಲು ಸಾಧ್ಯವಾಗದೇ ಇರುಬಹುದು. ಆದ ಕಾರಣ ನನಗೆ ಪರಿಹಾರವಾಗಿ ಐದು ಕೋಟಿ ರೂ. ನೀಡಬೇಕೆಂದು ನಟಿ ಒತ್ತಾಯಿಸಿದ್ದಾರೆ. ನಟಿ ಮಂಜು ವಾರಿಯರ್ ಈ ಸಿನಿಮಾದ ಸಹ ನಿರ್ಮಾಪಕಿ ಆದ ಕಾರಣ ಶೀತಲ್ ಅವರ ಹೆಸರನ್ನೂ ದೂರಿನಲ್ಲಿ ನಮೂದಿಸಿದ್ದಾರೆ.
Puttakkana Makkalu: ಪುಟ್ಟಕ್ಕನಿಗೆ ಸಿಕ್ಕಿಬಿಟ್ಲು ಸಹನಾ, ಇದು ಸಿಂಗಾರಮ್ಮನ ಕಥೆ ಮುಗಿಯೋ ಹೊತ್ತು