Manu Bhaker: ಈ ಸೌತ್ ನಟ ನನ್ನ ಫೇವರಿಟ್ ಎಂದ ಒಲಂಪಿಕ್ಸ್ ಪದಕ ವಿಜೇತೆ ಮನು ಭಾಕರ್; ಯಾರು ಆ ಹೀರೋ?

Written by Soma Shekar

Published on:

---Join Our Channel---

Manu Bhaker: ಮನು ಭಾಕರ್ (Manu Bhaker) ಹೆಸರಿಗೆ ಈಗ ಪರಿಚಯದ ಅಗತ್ಯವಿಲ್ಲ. ಪ್ಯಾರಿಸ್ ಒಲಂಪಿಕ್ಸ್ ನಲ್ಲಿ (Paris Olympics) ಎರಡು ಪದಕ ಗೆದ್ದು ದಾಖಲೆಯನ್ನು ಬರೆದ ಮನುಭಾಕರ್ ಅವರನ್ನು ಇಡೀ ದೇಶವೇ ಹಾಡಿ ಹೊಗಳುತ್ತಿದೆ. ಒಲಂಪಿಕ್ಸ್ ನಿಂದ ದೇಶಕ್ಕೆ ಹಿಂತಿರುಗಿದ ನಂತರ ಮನು ಅವರು ಮೂರು ತಿಂಗಳ ಕಾಲ ವಿಶ್ರಾಂತಯನ್ನು ಪಡೆಯಲಿದ್ದಾರೆ ಎನ್ನುವ ಮಾತನ್ನು ಅವರ ಕೋಚ್ ತಿಳಿಸಿದ್ದಾರೆ.

ಮೂರು ತಿಂಗಳ ವಿರಾಮದ ಅವಧಿಯಲ್ಲಿ ಮನು ಯುವ ಅಥ್ಲೀಟ್ ಗಳ ಜೊತೆಗೆ ಸಮಯವನ್ನು ಕಳೆಯಲಿದ್ದಾರೆ ಹಾಗೂ ಅವರಿಗೆ ತಾವು ಒಲಂಪಿಕ್ಸ್ ಗೆ ನಡೆಸಿದ ತಯಾರಿ, ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ (Chennai) ಶಾಲೆಯೊಂದರಲ್ಲಿ ಏರ್ಪಾಡು ಮಾಡಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮನು ಭಾಕರ್ ಅವರು ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮನು ಭಾಕರ್ ಅವರಿಗೆ ಏರ್ ಪಿಸ್ತೂಲ್ ಅನ್ನು ನೀಡಲಾಯಿತು. ಅದಾದ ನಂತರ ಅವರನ್ನು ತಮಿಳಿನಾಡಿನ ಜನಪ್ರಿಯ ವ್ಯಕ್ತಿಗಳ ಪರಿಚಯವಿದೆಯೇ ಎನ್ನುವ ಪ್ರಶ್ನೆಯನ್ನು ಕೇಳಲಾಯಿತು. ಮುಖ್ಯಮಂತ್ರಿ ಸ್ಟಾಲಿನ್ ಬಗ್ಗೆ ಕೇಳಿದಾಗ ಮನು ಭಾಕರ್ ಅವರು ಅವರ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಅನಂತರ ಚೆಸ್ ಆಟಗಾರ ಪಗ್ನಾನಂದ್ ಗೊತ್ತಿದೆಯೇ ಎಂದು ಕೇಳಿದಾಗ ಮನು ಅವರು ಗೊತ್ತಿದೆ ಎಂದಿದ್ದಾರೆ. ನಂತರ ಸಿನಿಮಾ ನಟ ದಳಪತಿ ವಿಜಯ್ (Thalapathy Vijay) ಅವರು ಗೊತ್ತಾ ಎಂದಾಗ ಮನು ಅವರು ಹೌದು ಗೊತ್ತು, ನಾನು ಅವರ ಅಭಿಮಾನಿ ಎಂದು ಹೇಳಿದ್ದು, ಮನು ಅವರು ಹೇಳಿದ ಮಾತು ಈಗ ಎಲ್ಲೆಡೆ ವೈರಲ್ ಆಗಿದೆ.

Kannada Serial TRP: ಅಣ್ಣಯ್ಯ ಎಂಟ್ರಿ ಪುಟ್ಟಕ್ಕನ ಮಕ್ಕಳಿಗೆ ಬಿತ್ತು ಹೊಡೆತ: ಈ ವಾರ TRP ಏರುಪೇರು, ಪುಟ್ಟಕ್ಕ ರೇಸ್ ನಿಂದ ಹೊರಕ್ಕೆ

Leave a Comment