Doomsday fish : ಡೂಮ್ಸ್ ಡೇ (Doomsday Fish) ಎಂದೇ ಜಗತ್ತಿನಲ್ಲಿ ಜನಪ್ರಿಯತೆಯನ್ನು ಪಡೆದಿರುವ ಒಂದು ವಿಶೇಷ ಜಾತಿಯ ಅಪರೂಪದ ಓರ್ಫಿಶ್ (Orfish) ಕಳೇಬರ ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಇದೇ ಆಗಸ್ಟ್ 10 ರಂದು ಪತ್ತೆಯಾಗಿದ್ದು, ಸ್ಯಾನ್ ಡಿಯಾಗೋದ ಲಾ ಜೊಲ್ಲಾ (La Jolla, California) ಹತ್ತಿರ ಈ ವಿಶೇಷವಾದ ಮೀನಿನ ಕಳೇಬರವು ನೀರಿನಲ್ಲಿ ತೇಲುವುದನ್ನ ಸ್ಥಳೀಯರು ಗಮನಿಸಿದ ನಂತರ ಈ ಘಟನೆ ಎಲ್ಲೆಡೆ ಸುದ್ದಿಯಾಗಿದೆ.
1901 ರಲ್ಲಿ ಇಂತಹ ಅಪರೂಪದ ಮೀನು ಕಾಣಿಸಿಕೊಂಡಿತ್ತು ಎನ್ನಲಾಗಿದ್ದು, 123 ವರ್ಷಗಳಲ್ಲಿ ಕೇವಲ 20 ಮಾತ್ರ ಇಂತಹ ಮೀನುಗಳು ಇದುವರೆಗೆ ಕಾಣಿಸಿಕೊಂಡಿವೆ ಎನ್ನಲಾಗಿದೆ. ಪ್ರಕೃತಿಯಲ್ಲಿ ಯಾವುದಾದರೂ ವಿಪತ್ತು ಎದುರಾಗುವ ಸಂದರ್ಭವಿದ್ದರೆ ಮಾತ್ರವೇ ಅದಕ್ಕೆ ಮುನ್ಸೂಚನೆಯಾಗಿ ಈ ಮೀನುಗಳು ಕಾಣಿಸಿಕೊಳ್ಳುವುದರಿಂದ ಈಗ ಮೀನಿನ ಕಳೇಬರ ಕಂಡ ಸ್ಥಳೀಯರು ಭಯ ಭೀತರಾಗಿದ್ದಾರೆ.
ಜಪಾನಿನ ಜನರ ನಂಬಿಕೆಯ ಪ್ರಕಾರ ಇದು ಸಮುದ್ರ ದೇವನ ಸಂದೇಶ ವಾಹಕನಾಗಿದ್ದು, ಸುನಾಮಿ, ಭೂಕಂಪಗಳಂತಹ ವಿಪತ್ತುಗಳಿಗೆ ಮುನ್ನ ಈ ಮೀನುಗಳು ಕಾಣಿಸುತ್ತವೆ ಎನ್ನಲಾಗಿದೆ. ಈಗ ಇಂತಹುದೊಂದು ವಿಶೇಷ ಮೀನಿನ ಕಳೇಬರ ಪತ್ತೆಯಾಗಿರುವ ವಿಷಯವನ್ನು ಸ್ಯಾನ್ ಡಿಯಾಗೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಕ್ರಿಪ್ಸ್ ಇನ್ಸ್ಟಿಟ್ಯೂಷನ್ ಆಫ್ ಓಷಿಯಾನೋಗ್ರಫಿಯ ವಕ್ತಾರರಾದ ಲಾರೆನ್ ಫಿಂಬ್ರೆಸ್ ವುಡ್ ವರದಿ ಮಾಡಿದ್ದಾರೆ.
ಈ ಮೀನುಗಳು ಸಾಮಾನ್ಯವಾಗಿ ಸಮುದ್ರದೊಳಗೆ ಸುಮಾರು 700-3,280 ಅಡಿಗಳ ಕೆಳಗೆ ವಾಸ ಮಾಡುತ್ತವೆ. ಆದ್ಧರಿಂದ ಅವು ಮೇಲ್ಮೈ ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅವುಗಳ ಆರೋಗ್ಯ ಹದಗೆಟ್ಟಾಗ ಅಥವಾ ಸಾಗರದಾಳದಲ್ಲಿ ಬೇರೆ ಏನಾದರೂ ಸಮಸ್ಯೆ ಎದುರಾದಾಗ ಮಾತ್ರವೇ ಅವು ಮೇಲೆ ಬರುತ್ತವೆ ಎನ್ನಲಾಗಿದೆ. ಈಗ ಡೂಮ್ಸ್ ಡೇ ಕಳೇಬರ ಹೊಸ ಚರ್ಚೆಯೊಂದಕ್ಕೆ ಕಾರಣವಾಗಿದೆ.
Allu Arjun: ಕಾಮನ್ ಮ್ಯಾನ್ ತರ ರಸೇಲಿ ನಡ್ಕೊಂಡ ಕೆಫೆಗೆ ಬಂದ ಅಲ್ಲು ಅರ್ಜುನ್; ನಟನ ಸರಳತೆಗೆ ಫ್ಯಾನ್ಸ್ ಫಿದಾ