Kollywood : ಮೊಬೈಲ್, ಒಟಿಟಿ ವೇದಿಕೆಗಳ ಅಬ್ಬರಕ್ಕೆ ಸಿನಿಮಾ ರಂಗಕ್ಕೆ ಒಂದು ದೊಡ್ಡ ಪೆಟ್ಟು ಬಿದ್ದಂತಾಗಿದೆ. ಚಲನ ಚಿತ್ರರಂಗವು (Kollywood) ಆರ್ಥಿಕವಾಗಿ ಸಮಸ್ಯೆ ಎದುರಿಸುವ ಈ ಸಮಯದಲ್ಲಿ ದಕ್ಷಿಣದ ಪ್ರಮುಖ ಸಿನಿಮಾ ರಂಗವಾಗಿರುವ ತಮಿಳು ಚಿತ್ರೋದ್ಯಮ ಸಂಚಲನ ನಿರ್ಧಾರವನ್ನು ಕೈಗೊಂಡಿದೆ. ಹೌದು, ತಾತ್ಕಾಲಿಕವಾಗಿ ಸಿನಿಮಾ ನಿರ್ಮಾಣವನ್ನೇ ಸ್ಥಗಿತಗೊಳಿಸುವಂತಹ ಐತಿಹಾಸಿಕ ಹೆಜ್ಜೆ ಇಡಲು ಮುಂದಾಗುತ್ತಿದೆ ತಮಿಳು ಸಿನಿಮಾ ರಂಗ.
ಸ್ಟಾರ್ ನಟ ನಟಿಯರು, ತಂತ್ರಜ್ಞರು ಪಡೆಯುವ ಸಂಭಾವನೆ ದುಬಾರಿಯಾಗಿದೆ. ಹಣ ಪಡೆದ ನಂತರವೂ ಸರಿಯಾದ ಸಮಯಕ್ಕೆ ಬಂದು ಕೆಲಸ ಮಾಡದೇ ನಿರ್ಮಾಪಕರಿಗೆ (Producer) ಅನೇಕರು ಸಮಸ್ಯೆ ತಂದೊಡ್ಡುವುದು ಉಂಟು. ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ಈಗ ತಾತ್ಕಾಲಿಕವಾಗಿ ಚಿತ್ರೀಕರಣಗಳನ್ನು ನಿಲ್ಲಿಸುವ ಮಹತ್ವದ ನಿರ್ಧಾರವನ್ನು ಮಾಡಲಾಗಿದೆ.
ಇಂತಹುದೊಂದು ಐತಿಹಾಸಿಕ ನಿರ್ಧಾರಕ್ಕೆ ಅಲ್ಲಿನ
ಥಿಯೇಟರ್ ಮಾಲೀಕರ ಸಂಘ, ಚಿತ್ರ ಹಂಚಿಕೆದಾರರ ಸಂಘವೂ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಬಂದ್ ಖಂಡಿತ ಯಶಸ್ವಿಯಾಗುತ್ತೆ ಎನ್ನಲಾಗಿದೆ. ನಟ, ನಟಿಯರು ಮತ್ತು ತಂತ್ರಜ್ಞರ ಭಾರೀ ಸಂಭಾವನೆ ಮತ್ತು ಬೇಡಿಕೆಗಳಿಂದ ನಿರ್ಮಾಪಕರಿಗೆ ನಷ್ಟ ಆಗುತ್ತಿದ್ದು, ಇದೇ ಈಗ ಬಂದ್ ಗೆ ಕಾರಣವಾಗುತ್ತಿದೆ.
ಒಟ್ಟಾರೆ ನವೆಂಬರ್ 1 ರಿಂದ ಆರಂಭ ಮಾಡಲಿರುವ ಈ ಬಂದ್ ನ ಉದ್ದೇಶವು ಚಲನಚಿತ್ರ ನಿರ್ಮಾಣ ವೆಚ್ಚ ಕಡಿತ ಮಾಡಿ ನಿರ್ಮಾಪಕರ ಹೊರೆ ಇಳಿಸಿ, ಶೂಟಿಂಗ್ ಅಥವಾ ಇತರೆ ಕೆಲಸ ಬಾಕಿ ಉಳಿದ ಚಿತ್ರಗಳ ಕೆಲಸವನ್ನು ಪೂರ್ತಿ ಮಾಡಿವುದು, ಥಿಯೇಟರ್ ಸಿಗದೇ ಉಳಿದ ಚಿತ್ರಗಳಿಗೆ ಅಗತ್ಯ ಪ್ರಮಾಣದ ಥಿಯೇಟರ್ ಒದಗಿಸುವುದಾಗಿದೆ.
Flying Passport: ವಿದೇಶದಲ್ಲಿ 58 ಸಾವಿರ ದಂಡ ತೆತ್ತು ಕ್ಷಮೆ ಕೇಳಿದ ಫ್ಲೈಯಿಂಗ್ ಪಾಸ್‌ಪೋರ್ಟ್ ದಂಪತಿ, ಆಗಿದ್ದೇನು?