Flying Passport: ವಿದೇಶದಲ್ಲಿ 58 ಸಾವಿರ ದಂಡ ತೆತ್ತು ಕ್ಷಮೆ ಕೇಳಿದ ಫ್ಲೈಯಿಂಗ್ ಪಾಸ್‌ಪೋರ್ಟ್ ದಂಪತಿ, ಆಗಿದ್ದೇನು?

Written by Soma Shekar

Published on:

---Join Our Channel---

Flying Passport: ಫ್ಲೈಯಿಂಗ್ ಪಾಸ್ ಪೋರ್ಟ್ (Flying Passport) ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಖಾತೆಯನ್ನು ಹೊಂದಿರುವ ಆಶಾ (Asha) ಮತ್ತು ಕಿರಣ್ (Kiran) ದಂಪತಿ ಕನ್ನಡದ ಸುಪ್ರಸಿದ್ದ ಟ್ರಾವೆಲ್ ವ್ಲಾಗರ್ ಗಳಾಗಿದ್ದು, ಲಕ್ಷಗಳ ಸಂಖ್ಯೆಯಲ್ಲಿ ಹಿಂಬಾಲಕರನ್ನ ಇವರು ಹೊಂದಿದ್ದಾರೆ‌. ಕನ್ನಡಿಗರಿಗೆ ವಿದೇಶಗಳನ್ನು ತೋರಿಸುವ ಈ ದಂಪತಿ ತಾವಜ ಭೇಟಿ ನೀಡುವ ಸ್ಥಳಗಳ ವಿಶೇಷತೆ, ಅಲ್ಲಿನ ವಸತಿ, ಖರ್ಚು, ಆಹಾರ ಹೀಗೆ ಹಲವು ಮಾಹಿತಿಗಳನ್ನು ಶೇರ್ ಮಾಡುತ್ತಾರೆ.

ಆಗಸ್ಟ್ ಮೊದಲ ವಾರದಿಂದ ಈ ಜೋಡಿ ತಾವು ಐಸ್ಲ್ಯಾಂಡ್ ಗೆ (Iceland) ಭೇಟಿ ನೀಡಿದ ವೀಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಆದರೆ ಅಲ್ಲಿ ಅವರು ರಸ್ತೆ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ 58 ಸಾವಿರ ರೂಪಾಯಿಗಳ ದಂಡವನ್ನು ಪಾವತಿ ಮಾಡಿದ ಪೊಲೀಸರ ಬಳಿ ಕ್ಷಮೆಯನ್ನು ಕೇಳಿದ್ದಾರೆ. ಇಷ್ಟಕ್ಕೂ ದಂಡ ಕಟ್ಟಿದ್ದು ಯಾಕೆ ಅನ್ನೋದಾದ್ರೆ ಇಲ್ಲಿದೆ ಉತ್ತರ.

ಐಸ್ಲ್ಯಾಂಡ್ ನಲ್ಲಿ ಕಾರು ಬಾಡಿಗೆಗೆ ಪಡೆದಿದ್ದರು ಈ ಜೋಡಿ. ಕಿರಣ್ ಕಾರನ್ನು ಚಲಾಯಿಸುವಾಗ ಅಲ್ಲಿ ಕಾರು ಚಾಲನೆಯ ವೇಗ ಗರಿಷ್ಠ 90 ಕಿಮೀ ನಿಯಮವನ್ನು ಬ್ರೇಕ್ ಮಾಡಿದ್ದಾರೆ. ಅವರು 105-110 ಕಿಮೀ ವೇಗದಲ್ಲಿ ಕಾರು ಚಾಲನೆ ಮಾಡಿದ್ದು, ನಿಯಮ ಉಲ್ಲಂಘನೆ ಮಾಡಿದ್ದರಿಂದ ದಂಡ ಪಾವತಿಸಿ, ಪೊಲೀಸರ ಕ್ಷಮೆಯಾಚಿಸಿ ಆ ದೇಶದ ಕಾನೂನಿಗೆ ಗೌರವ ನೀಡಿದ್ದಾರೆ.‌

ದಂಡ ಇಷ್ಟು ದೊಡ್ಡಮೊತ್ತದ್ದು ಅನ್ನೋದು  ಅಂತ ಗೊತ್ತಿರಲಿಲ್ಲ ಎಂಬುದಾಗಿ ಆಶಾ ಹೇಳುತ್ತಾರೆ. ಈ ಜಾಗದಲ್ಲಿಯೂ ಪೊಲೀಸರು ಇರ್ತಾರೆ ಅನ್ನೋದನ್ನ ನಾನು ಊಹೆ ಕೂಡಾ ಮಾಡಿರಲಿಲ್ಲ,ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದು ನಿಜ. ಹಾಗಾಗಿ ದಂಡ ಪಾವತಿಸಿದ್ದೇವೆ ಎಂದು ಕಿರಣ್ ಅವರು ಹೇಳಿದ್ದಾರೆ.‌

Lakshmi Nivasa Serial: ಮುಖ ಮೂತಿ ನೋಡ್ದೇ ಎರಡು ಕೊಡಿ, ಸಂತೋಷ್ ವರ್ತನೆ ಕಂಡು ಸಿಟ್ಟಾದ ಪ್ರೇಕ್ಷಕರು

Leave a Comment