National Film Award ರಿಷಬ್ ಶೆಟ್ಟಿ ಜೊತೆ ಆ ನಟ ರೇಸ್ ನಲ್ಲೇ ಇರಲಿಲ್ವಾ? ಸತ್ಯ ರಿವೀಲ್ ಮಾಡಿದ ಜ್ಯೂರಿ ಮೆಂಬರ್

Written by Soma Shekar

Published on:

---Join Our Channel---

National Film Award : ಇತ್ತೀಚೆಗಷ್ಟೇ ಪ್ರತಿಷ್ಠಿತ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (National Film Award) ಗಳಿಸಿದ ಕಲಾವಿದರ ಹೆಸರುಗಳನ್ನು ಘೋಷಣೆ ಮಾಡಲಾಗಿದ್ದು, ಸ್ಯಾಂಡಲ್​ ವುಡ್ ನಟ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ತಮ್ಮದೇ ನಿರ್ದೇಶನದ ಕಾಂತಾರ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದೇ ವೇಳೆ ನಟಿ ನಿತ್ಯಾ ಮೆನನ್ ಅತ್ಯುತ್ತಮ ನಟಿಯಾಗಿ ಅಯ್ಕೆ ಆಗಿದ್ದಾರೆ.

ಸುದ್ದಿಗಳು ಹೊರ ಬಂದಾಗ ನಟ ಮಮ್ಮುಟಿ (Mammooti) ಅತ್ಯುತ್ತಮ ನಟ ರೇಸ್ ನಲ್ಲಿದ್ದರು ಎನ್ನುವುದಾಗಿ ಸುದ್ದಿಗಳಾಗಿದ್ದವು. ಆದರೆ ಈಗ ಹೊಸ ಸುದ್ದಿಯೊಂದು ಹೊರ ಬಂದಿದ್ದು, ಮಮ್ಮುಟಿ ಅವರು ನಟಿಸಿರುವ ಯಾವುದೇ ಸಿನಿಮಾಗಳನ್ನು ಸಹಾ ನ್ಯಾಷನಲ್ ಅವಾರ್ಡ್ ಗೆ ಕಳುಹಿಸಿಯೇ ಇಲ್ಲ ಎನ್ನುವ ಅಚ್ಚರಿಯ ವಿಷಯ ಎಲ್ಲರಿಗೂ ಶಾಕ್ ನೀಡಿದೆ.‌

ನ್ಯಾಷನಲ್ ಅವಾರ್ಡ್ ಜ್ಯೂರಿ ಮೆಂಬರ್ ಆಗಿರುವಂತಹ ಎಂ ಬಿ ಪದ್ಮಕುಮಾರ್ ಅವರು ಮಾದ್ಯಮವೊಂದರ ಮುಂದೆ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.‌ ಮಮ್ಮುಟ್ಟಿ ಅವರ ಯಾವುದೇ ಸಿನಿಮಾ 70ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ ಗಾಗಿ ಕಳಿಸಿಲ್ಲ ಎನ್ನುವ ಮಾತನ್ನು ಅವರು ಹೇಳಿದ್ದಾರೆ. ಮಮ್ಮುಟ್ಟಿ ಅವಾರ್ಡ್ ರೇಸ್ ನಲ್ಲಿದ್ದೂ ಪ್ರಶಸ್ತಿ ಪಡೆದಿಲ್ಲ ಎನ್ನುವ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಈ ವಿಷಯ ಖುಷಿ ನೀಡಿದೆ.

ನನ್ಪಕಲ್ ನೆರತು ಮಾಯಕ್ಕಂ’ ಮತ್ತು ‘ರೋರ್ಸ್ಚಾಚ್’ ಚಿತ್ರಗಳಿಗೆ ಹಿರಿಯ ನಟ ಮಮ್ಮುಟ್ಟಿ ಹೆಸರನ್ನು ಆಯ್ಕೆ ಮಾಡಲಾಗಿತ್ತು, ಆದರೆ ಪ್ಯಾನ್ ಇಂಡಿಯಾ ಸಿನಿಮಾ ಕಾಂತಾರದ ಅಭಿನಯಕ್ಕಾಗಿ ರಿಷಬ್ ಶೆಟ್ಟಿ (Rishab Shetty) ಲಿಸ್ಟ್ ನಲ್ಲಿ‌ ಗೆದ್ದಿದ್ದರು ಎನ್ನಲಾಗಿತ್ತು. ಆದರೆ ಈಗ ಅಸಲಿಗೆ ರೇಸ್ ನಲ್ಲಿ ಮಮ್ಮುಟ್ಟಿ ಇರಲೇ ಇಲ್ಲ ಎನ್ನುವ ವಿಚಾರ ಹೊರಗೆ ಬಂದಿದೆ.

Aamir Khan: ಭಾವುಕರಾದ ಅಮೀರ್ ಖಾನ್, ಸಿನಿಮಾರಂಗಕ್ಕೆ ವಿದಾಯ ಹೇಳುವುದೊಂದೇ ದಾರಿ, ಫ್ಯಾನ್ಸ್ ಶಾಕ್

Leave a Comment